ನನ್ನ ಹೆಸರು ಗೂಬೆ
ನನ್ನಿರುವು ಮರದ ಮೇಗೆ
ರಾತ್ರಿಯೆಲ್ಲ ದುಡಿದು ದಣಿವೆ
ಹಗಲು ಮಲಗಿ ಕಾಲ ಕಳೆವೆ
ಊರ ತುಂಬ ಜನ ಜಂಗುಳಿ
ಕಾಡಿನೊಳಗೆ ಬಿಸಿಲು ಗಾಳಿ
ಮಲಗಲೆಂತು ನಿದ್ದೆ ಬರಲು
ಅದಕೆ ಬರುವೆ ಹಾಳು ಮನೆಗೆ
ಊರ ಹೊರಗೆ ಮಸಣದೆಡೆಗೆ
ನಾನು ಒಂದು ಶಕುನವಂತೆ
ನನ್ನ ಹೆಸರು ಗುಮ್ಮವಂತೆ
ರಾತ್ರಿಹೊತ್ತು ತುತ್ತ ಕೊಡುತ
ಗುಮ್ಮ ಬಂತು ಎನುತ ತಾಯಿ
ಕೇಳಿ ಹೆದರಿ ಕಲ್ಲಹೊಡೆದು
ಮಲಗ ಬಿಡದ ಮಕ್ಕಳು
ಹಗಲು ಇರುಳು ನಿದ್ದೆಯಿಲ್ಲ
ಶಕುನ ನನ್ನ ಜೀವವು
ನಾನು ಒಂದು ಹಕ್ಕಿ
ಹಣಿವರೇಕೆ ಇದ್ದರೂನು
ರೆಕ್ಕೆ ಪುಕ್ಕ ಎಲ್ಲರಂತೆ
ನಾನು ಒಂದು ಹಕ್ಕಿ