Feb 13, 2017

ಇದ್ದದ್ದೊಂದೇ

ಎಲ್ಲವೂ ಅಶಾಶ್ವತವೀ ಜಗದೊಳು
ಮುಂಜಾನೆ ಕಾಣ್ವ ಕನಸಿನಂದದಿ
ಎಲ್ಲವೂ ನಡೆದೂ ನಡೆಯದಿರುವುದು
ನಾನು ನೀನು ಆನು ತಾನುಗಳು
ತನಿ ನಿದ್ರೆಯೊಳು ತಾವಾಗೇ ತೆರೆದು ಕೋಂಬವು
ನಾನು ಇಲ್ಲ ನೀನು ಇಲ್ಲ
ಇದ್ದದ್ದೊಂದೇ ಕನಸು ಕಾಣ್ವ ಆ ಕಲೆಗಾರ