ಕಾಡು,ಪ್ರಾಣಿ,ಪಕ್ಷಿಗಳು.... Computerಗಳು, Artificial Intelligenceಗಳು.. ಹಾರುವ ತಟ್ಟೆ-ಲೋಟಗಳು ಇನ್ನೂ ಏನೇನೊ....!! ತೋಚಿದ್ದು ಗೀಚಿದ್ದು.
Mar 22, 2010
ಗಾಂಧಿ ದೇವರು
ಎರೆಡು ವರ್ಷದ ಹಿಂದೆ ಗಾಂಧಿ ಜಯಂತಿಯಂದು 'ಡೆಕ್ಕನ್ ಹೆರಲ್ಡ್' ಪತ್ರಿಕೆಯಲ್ಲಿ ಒಂದು ಲೇಕನ ಪ್ರಕಟಗೊಂಡಿತ್ತು. ಮಂಗಳೂರಿನ ಕಂಕನಾಡಿಯಲ್ಲಿರುವ ಗರಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಪೂಜಿಸುವುದರ ಬಗ್ಗೆ ವರದಿಯಿತ್ತು. ನಾನು ಬಹಳ ಕುತೂಹಲದಿಂದ ಆ ಸ್ಥಳಕ್ಕೆ ಒಂದು ವರ್ಷದ ನಂತರ ಬೇಟಿ ನೀಡಿದೆ ಆಗಕಂಡ ದೃಶ್ಯ ನಿಜಕ್ಕೂ ನಂಬಲಾಗಲಿಲ್ಲ. ತುಳು ನಾಡಜನರ ವಿಶಾಲ ಹೃದಯವಂತಿಕೆಗೆ ನನ್ನ ಮನ ಕರಗಿತು ತಲೆಬಾಗಿತು. ಮಂಗಳೂರು ನಗರದ ಹೃದಯ ಬಾಗದಿಂದ ೨ಕಿ.ಮೀ ದೂರದಲ್ಲಿ 'ಬ್ರಮ್ಮ ಬೈದರ್ಕಳ ಗರಡಿ'ಇದೆ. ಇದಕ್ಕೆ ೧೩೩ ವರ್ಷಗಳ ಸುಧೀರ್ಗ ಇತಿಹಾಸವಿದೆ ಮತ್ತು ಇಲ್ಲಿ ಕೋಟಿ ಚೆನ್ನಯ್ಯ ರಿಂದ ಹಿಡಿದು ನಾರಾಯಣ ಗುರು, ಗಾಂಧೀಜಿಯವರೆಗೆ ಅನೇಕ ವಿಗ್ರಹಗಳಿದ್ದು ದಿನನಿತ್ಯ ಪೂಜೆ ನಡೆಯುತ್ತದೆ. ಹಣ್ಣು-ಹಂಪಲು, ಹಾಲು ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಗಾಂದಿಜಯಂತಿಯಂತ ವಿಶೇಷ ದಿನಗಳಲ್ಲಿ ಹೆಚ್ಚಿನ ಪೂಜೆ ನಡೆಯುತ್ತದೆ. ೧೯೪೮ ರಲ್ಲಿ ಫಳ್ನೀರಿನ ವೆಂಕಟಪ್ಪ ಎನ್ನುವವರು ಮಹಾತ್ಮ ಗಾಂಧಿಜಿಯ ಪ್ರತಿಮೆಯನ್ನು ಇಲ್ಲಿಗೆ ನೀಡಿದ್ದರಂತೆ. ಒಂದು ಕುತೂಹಲದ ಸಂಗತಿಯೆಂದರೆ ಗಾಂಧೀಜಿ ತಮ್ಮ ಜೀವಿತದಲ್ಲಿ ಮಂಗಳೂರಿಗೆ ಬರಲೆ ಇಲ್ಲವಂತೆ. ಬದಲಿಗೆ ಸ್ವಾತಂತ್ರ ಸಂಗ್ರಾಮಕ್ಕೆ ಸಂಘಟನೆ ಕರೆಯಲು ಉಡುಪಿಗೆ ಫೆಬ್ರವರಿ ೨೫, ೧೯೩೪ ಮತ್ತು ಪುತ್ತೂರಿಗೆ ೧೯೩೫ ರಲ್ಲಿ ಬಂದಿದ್ದರು. ಆದರೂ ಗಾಂಧಿವಾದಿಗಳು ತಮ್ಮ ಉದಾರತೆಯನ್ನು ಮೆರೆದಿದ್ದಾರೆ. 'ಪ್ರತೀ ಮನುಷ್ಯನು ದೇವರ ಅವತಾರವೆ, ಕೆಲವರು ಮಾತ್ರ ಇದನ್ನು ಅರಿತು ನಿಸ್ವಾರ್ಥತೆಯಿಂದ ದುಡಿದು ಅವತಾರ ಪುರುಷರಾಗುತ್ತಾರೆ' ಎಂಬ ಸ್ವಾಮಿ ವಿವೇಕನಂದರ ಮಾತು ಇಲ್ಲಿ ನನಗೆ ನೆನಪಿಗೆ ಬರುತ್ತದೆ. ಶಿವರಾಮ ಕಾರಂತರ 'ಸರಸಮ್ಮನ ಸಮಾಧಿ' ಕಾದಂಬರಿಯನ್ನು ನೀವು ಓದಿದ್ದರೆ ಇಂತಹ ವಿಚಾರಗಳು ಸುಲಬವಾಗಿ ಮನವರಿಕೆಯಾಗುತ್ತದೆ. ಎಲ್ಲಾ ಆಧರ್ಶ ವ್ಯಕ್ತಿಗಳನ್ನು ಮನುಷ್ಯ ದೇವರಂತೆ ಕಂಡದ್ದೇನೋ ಸಂತೂಷ ಆದರೆ ಇದರೊಟ್ಟಿಗೆ ಅವರ ವಿಚಾರಗಳನ್ನು ಗ್ರಂಥದಲ್ಲಿ ಪೂಜಿಸಿ, ಆಚರಣೆಗೆ ತರದಿರುವುದು ತಪ್ಪು. ದಿನಕಳೆದಂತೆ ನಂಭಿಕೆಯ ಮೇಲೆ ನಂಭಿಕೆಬೆಳೆದು ಸಹಜ ಆದರೆ ಇಲ್ಲಿ ವಾಸ್ತವಾಂಶ ವನ್ನು ಮರೆಯಬಾರದು.
Mar 19, 2010
ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ
ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು. ಆ ಪ್ರಾಣಿ ಕೀಳು, ಒಂದೊತ್ತು ಉಪವಾಸ ಇದ್ರು ನಡಿತದೆ ಆದ್ರೆ ನಮ್ಗೆ ಆಗಲ್ಲ. ದಿನ ಕಳೆದಂತೆ ನಾವು ನಮ್ಮ ಸಹಜೀವಿಗಳಿಂದ ದೂರ ನಡಿತಿದೆವೆ. ಆನೆ,ಕೋಳಿ,ನಾಯಿ,ಹಂದಿ ಇವೆಲ್ಲ ನಮ್ಮೊಟ್ಟಿಗೆ ವಿಕಾಸ ಹೊಂದಿದವು. ನಮಗಿಂತ ಸಾವಿರ ವರ್ಷ ಬೇಗ ಹುಟ್ಟಿದವೂ ಇದ್ದಾವೆ ಆದರೆ ನಾವಿಂದು ಸರ್ವಾದಿಕಾರಿಗಳ ಹಾಗೆ ವರ್ತಿಸುತಿದ್ದೇವೆ. ಅಟ್ಟದಲ್ಲಿ ವಿಷ ಇಟ್ಟು ಇಲಿ ಕೊಲ್ಲೋದ್ರಿಂದ ಹಿಡಿದು ಹೊಲಕ್ಕೆ ವಿಧ್ಯುತ್ ಬೇಲಿ ಹಾಕಿ ಜಾನುವಾರುಗಳ ಕೊಲೆಯವರೆಗೆ ನಮ್ಮ ಕೆಲಸ ಸಾಗಿದೆ. ಇತ್ಲಗೆ ಸುಬ್ಬೇಗೌಡ್ರದ್ದು ಕಾಫಿ ತೋಟ ಅತ್ಲಗೆ ಕಾಳ್ಶೆಟ್ರದ್ದು ಏಲಕ್ಕಿ ತೋಟ ಇನ್ನು ದನ ಮೇಯುದಾದ್ರು ಎಲ್ಲಿ?ಈಗಂತು ಬಸ್ಟಾಂಡು, ಹೋಟೆಲ್ಲು ಇಲ್ಲೆಲ್ಲ ಬಿದ್ದ ಪ್ಲಾಸ್ಟಿಕ್ ತೊಟ್ಟೆಯೆ ಇವಕ್ಕೆ ಆಹಾರ. ಆದ್ರೆ ಹಾಲು ಹೀರ್ಲಿಕ್ಕೆ ನಾವೆಲ್ಲ ರೆಡಿ ಇದ್ದೇವೆ. ಬರೆ ನಾಗರೀಕರ ಹಕ್ಕಿಗೆ ಚ್ಯುತಿ ಬಂದ್ರೆ ಸುಪ್ರಿಮ್ ಕೋರ್ಟ್ವರೆಗೆ ಹೋಗ್ತೆವೆ. ನಮ್ಗೆ ಸಂವಿದಾನದಲ್ಲೆ ಮೂಲಬೂತ ಹಕ್ಕುಗಳು ನಿರ್ಧಾರಿತವಾಗಿದೆ ಬಿಡಿ ಅದೆ ಪ್ರಾಣಿಗಳ ಮರಣ ಹೋಮ ನಡಿತಿದ್ರು ಧ್ವನಿ ಎತ್ತೊರಿಲ್ಲ. ಎಷ್ಟೋ ಪಕ್ಷಿಗಳ ಪ್ರಭೇದವೆ ನಶಿಸಿ ಹೊಗಿದೆ, ಜೂ$ ಅಲ್ಲಿರುವ ಪ್ರಾಣಿಗಳ ಬದುಕಂತು ನರಕ್ಕಕಿಂತ ಕಡೆಯಾಗಿದೆ ಅವುಗಳ ಅನ್ನಕ್ಕೆ ನಿರ್ವಾಹಕರುಗಳ ಕನ್ನ ಬಿದ್ದಿದೆ. ಇಂದು ಭಾರತದಲ್ಲಿರುವ ಹುಲಿಗಳ ಸಂಖ್ಯೆ ಬರೆ ೧೪೫೧ ಇಷ್ಟು ಜನ ನಮ್ಮ್ ಊರಲ್ಲೆ ಇದ್ದಾರೆ. ಇದು ಹೀಗೆ ಮಂದುವರೆದ್ರೆ ನಮ್ಮ ರಾಷ್ಟ್ರಪ್ರಾಣಿ ಬೆಕ್ಕಾಗದ್ರಲ್ಲಿ ಸಂದೇಹವಿಲ್ಲ (ಸಿಂಹ ಇದ್ದದ್ದು ಹುಲಿಯಾಗಿತ್ತು). ಕಾಡಲ್ಲಿ ಶಿಕಾರಿ ಕಡಿಮೆ ಆಗ್ಬೇಕು, ಮರಕಡಿಯಲು ಪರ್ಮಿಟ್ ಕೊಡುವ ಅಧಿಕಾರಿಗಳನ್ನು ಮೂದ್ಲು ಮನೆಗ್ ಕಳಿಸ್ಬೇಕು. ಜೂ$ ಗಳಿಗಿಂತ ಅಭಯಾರಣ್ಯಗಳ ನಿರ್ಮಾಣವಾಗ್ಬೇಕು. ಇವೆಲ್ಲ ಆಗ್ಬೇಕು ವನ್ಯ ಜಿವಿಗಳು ಉಳಿಬೆಕು ಇಲ್ದೆಹೋದ್ರೆ ಅವುಗಳ ಜೋತೆಯಲ್ಲೆ ನಮ್ಮಚಟ್ಟ ರೆಡಿ ಮಾಡ್ಬೇಕು.
Strength is life
We should be strong enough to live on this planet earth. Mentally, physically, intellectually. We must think +vely because every thought maters; it is like a matter wave. How we are now is the result of yesterday’s thought and todays will decide our tomorrow. Think big and live up to that.
Subscribe to:
Posts (Atom)