Mar 19, 2010

ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ

ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು. ಆ ಪ್ರಾಣಿ ಕೀಳು, ಒಂದೊತ್ತು ಉಪವಾಸ ಇದ್ರು ನಡಿತದೆ ಆದ್ರೆ ನಮ್ಗೆ ಆಗಲ್ಲ. ದಿನ ಕಳೆದಂತೆ ನಾವು ನಮ್ಮ ಸಹಜೀವಿಗಳಿಂದ ದೂರ ನಡಿತಿದೆವೆ. ಆನೆ,ಕೋಳಿ,ನಾಯಿ,ಹಂದಿ ಇವೆಲ್ಲ ನಮ್ಮೊಟ್ಟಿಗೆ ವಿಕಾಸ ಹೊಂದಿದವು. ನಮಗಿಂತ ಸಾವಿರ ವರ್ಷ ಬೇಗ ಹುಟ್ಟಿದವೂ ಇದ್ದಾವೆ ಆದರೆ ನಾವಿಂದು ಸರ್ವಾದಿಕಾರಿಗಳ ಹಾಗೆ ವರ್ತಿಸುತಿದ್ದೇವೆ. ಅಟ್ಟದಲ್ಲಿ ವಿಷ ಇಟ್ಟು ಇಲಿ ಕೊಲ್ಲೋದ್ರಿಂದ ಹಿಡಿದು ಹೊಲಕ್ಕೆ ವಿಧ್ಯುತ್ ಬೇಲಿ ಹಾಕಿ ಜಾನುವಾರುಗಳ ಕೊಲೆಯವರೆಗೆ ನಮ್ಮ ಕೆಲಸ ಸಾಗಿದೆ. ಇತ್ಲಗೆ ಸುಬ್ಬೇಗೌಡ್ರದ್ದು ಕಾಫಿ ತೋಟ ಅತ್ಲಗೆ ಕಾಳ್‌ಶೆಟ್ರದ್ದು ಏಲಕ್ಕಿ ತೋಟ ಇನ್ನು ದನ ಮೇಯುದಾದ್ರು ಎಲ್ಲಿ?ಈಗಂತು ಬಸ್ಟಾಂಡು, ಹೋಟೆಲ್ಲು ಇಲ್ಲೆಲ್ಲ ಬಿದ್ದ ಪ್ಲಾಸ್ಟಿಕ್ ತೊಟ್ಟೆಯೆ ಇವಕ್ಕೆ ಆಹಾರ. ಆದ್ರೆ ಹಾಲು ಹೀರ್ಲಿಕ್ಕೆ ನಾವೆಲ್ಲ ರೆಡಿ ಇದ್ದೇವೆ. ಬರೆ ನಾಗರೀಕರ ಹಕ್ಕಿಗೆ ಚ್ಯುತಿ ಬಂದ್ರೆ ಸುಪ್ರಿಮ್ ಕೋರ್ಟ್‌ವರೆಗೆ ಹೋಗ್ತೆವೆ. ನಮ್ಗೆ ಸಂವಿದಾನದಲ್ಲೆ ಮೂಲಬೂತ ಹಕ್ಕುಗಳು ನಿರ್ಧಾರಿತವಾಗಿದೆ ಬಿಡಿ ಅದೆ ಪ್ರಾಣಿಗಳ ಮರಣ ಹೋಮ ನಡಿತಿದ್ರು ಧ್ವನಿ ಎತ್ತೊರಿಲ್ಲ. ಎಷ್ಟೋ ಪಕ್ಷಿಗಳ ಪ್ರಭೇದವೆ ನಶಿಸಿ ಹೊಗಿದೆ, ಜೂ$ ಅಲ್ಲಿರುವ ಪ್ರಾಣಿಗಳ ಬದುಕಂತು ನರಕ್ಕಕಿಂತ ಕಡೆಯಾಗಿದೆ ಅವುಗಳ ಅನ್ನಕ್ಕೆ ನಿರ್ವಾಹಕರುಗಳ ಕನ್ನ ಬಿದ್ದಿದೆ. ಇಂದು ಭಾರತದಲ್ಲಿರುವ ಹುಲಿಗಳ ಸಂಖ್ಯೆ ಬರೆ ೧೪೫೧ ಇಷ್ಟು ಜನ ನಮ್ಮ್ ಊರಲ್ಲೆ ಇದ್ದಾರೆ. ಇದು ಹೀಗೆ ಮಂದುವರೆದ್ರೆ ನಮ್ಮ ರಾಷ್ಟ್ರಪ್ರಾಣಿ ಬೆಕ್ಕಾಗದ್ರಲ್ಲಿ ಸಂದೇಹವಿಲ್ಲ (ಸಿಂಹ ಇದ್ದದ್ದು ಹುಲಿಯಾಗಿತ್ತು). ಕಾಡಲ್ಲಿ ಶಿಕಾರಿ ಕಡಿಮೆ ಆಗ್ಬೇಕು, ಮರಕಡಿಯಲು ಪರ್ಮಿಟ್ ಕೊಡುವ ಅಧಿಕಾರಿಗಳನ್ನು ಮೂದ್ಲು ಮನೆಗ್ ಕಳಿಸ್‌ಬೇಕು. ಜೂ$ ಗಳಿಗಿಂತ ಅಭಯಾರಣ್ಯಗಳ ನಿರ್ಮಾಣವಾಗ್‌ಬೇಕು. ಇವೆಲ್ಲ ಆಗ್ಬೇಕು ವನ್ಯ ಜಿವಿಗಳು ಉಳಿಬೆಕು ಇಲ್ದೆಹೋದ್ರೆ ಅವುಗಳ ಜೋತೆಯಲ್ಲೆ ನಮ್ಮಚಟ್ಟ ರೆಡಿ ಮಾಡ್ಬೇಕು.

2 comments: