ಸಾವಿನ ಮನೆಯಲಿ ಸಾಯದವರು
ಸತ್ತವನ ಹೆಸರೆತ್ತಿ ಕರೆವರೆ ಜನ!!
ಇಲ್ಲ ಅದು ಶವ ಅದು ಹೆಣ
ಹೂತು ಬಿಡಬೇಕು ಸುಡಬೇಕು
ಇಡಲಾದೀತೆಕೊಳೆತು ನಾಥ ಬಂದೀತು;
ಗಂಡನೋ ಹೆಂಡತಿಯೊ
ಸತ್ತ ಮೇಲೆ ಶವ
ತಮ್ಮದಲ್ಲಎಂದವರೆ ಎಲ್ಲ;
ಇದೇ ಜಾಯಮಾನ ಇದೇ ಸತ್ಯ
ಇದರಲ್ಲಿ ತಪ್ಪಿಲ್ಲ
ಸತ್ತವರೊಡನೆ ಸಾಯಲಾದೀತೆ
ಶಿವನಿರುವರೆಗೆ ಶರೀರ ಸವೆಯದೆ ಹೋದೀತೆ.
ಆದರೂ ನಾಟಕೀಯ ವಾದೀತು ಸಾವಿನ ಮನೆ;
ಸತ್ತವರ ಸುತ್ತಲು ಕುಳಿತು
ಹೊತ್ತಿಸಿ ಹಲವು ದೀಪಗಳ
ಅತ್ತವರಲ್ಲಿ ಹಲವರು ನಾಟಕೀಯವಾಗೆ ಕಂಡರು;
ಊರು ಮನೆಯ ಸಾವೆಂದು ಬರಬೇಕಾಗಿ ಬಂದವರು;
ಸೂತಕ ಪಾತಕವೆಂದು ಬಂದ ಬಂದುಗಳು;
ಎಲ್ಲರೂ ನೋಡುವರ ಕಣ್ಣಿಗೆ
ನೆಡೆದಾರು ಅತ್ತಾರು
ನೆಪಕೆ ನಾಲ್ಕು ನುಡಿದಾರು
ಆದರೂ ಅಳಲಿಲ್ಲ ಯಾರೂ ನಿಜ.
ಕೆಲವರ ಮೊಗದಲ್ಲಿ ಕಂಡು ಕಾಣದ ಮಂದಹಾಸ;
ಸತ್ತನೆಂಬ ಸೇಡಿನವಗೆ ಸವಿಯಾದ ಔತಣ;
ನಾಟಕೀಯವು ನಟರಾಜನ ಮುಂದೆ
ಸ್ವಲ್ಪ ದಿನ ಮುಂದೆ ತನ್ನ ಸರದಿಯೆಂದೇ ಮರೆತು.
ಅಗೋ ಅಲ್ಲಿ ಅಳಿಲೊಂದು ಮೌನ ತಾಳಿದೆ;
ಒಡೆಯನ ಅಗಲಿಕೆ ತಿಳಿದಂತಿದೆ;
ಸಾಕಿದವನ ಸಾವ ಸಾರಲು ಇದು ಮೂಖಪ್ರಾಣಿ;
ಮುಖ ನೋಡಲೆಂದರೆ ಒಳಗೆ ಜನ ಜಂಗುಳಿ;
ಇಷ್ಟಕ್ಕೂ ಇದರ ಕಣ್ಣಿನಿಂದ ಬಿದ್ದ ಒಂದು ಹನಿ
ಕೃತಜ್ಙತೆಯ ಕಣ್ಣೀರೆಸಾಕಾಯ್ತುಸತ್ತವನ ಸಾರ್ಥಕತೆಗೆ...
No comments:
Post a Comment