ಮಳೆಯೊಂದಿಗೆ ಮರುಕಳೆಸುವ ನೆನಪುಗಳು..
ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆ
ನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..
ಬಿಸಿಲಿಗೆ ಬಾಡಿದ್ದ ಹಸಿರು ಇಂದು ಮಳೆಯ ನೀರುಂಡು ಉಲ್ಲಾಸಿಸುತಿದೆ
ಚೈತನ್ಯವನ್ನ ಚೆಲ್ಲುತಿದೆ.
ಬನ್ನಿ ನಾವೂ ಧುಮುಕೋಣ ಈ ಭಾವ ಸಾಗರದಲ್ಲಿ..
ಹಾಡೋಣ ಭಾವದುತ್ತುಂಗದಲಿ..
ಬಾಗಿಯಾಗೋಣ ಪ್ರಕೃತಿ ಹಬ್ಬದಲಿ..
ಮಳೆಹನಿಗಳ ಚಟಪಟ ಸದ್ಧಿನಲಿ..
ತುಂತುರು ಅಲ್ಲಿ ನೀರ ಹಾಡು ಫ್ರಂಮ್ ಅಮೃತವರ್ಷಿಣಿ (1996)
ಸಾಹಿತ್ಯ : ಕೆ ಕಲ್ಯಾಣ್
ಸಂಗೀತ : ದೇವ
ಗಾಯನ: ಕೆ ಚಿತ್ರ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ
ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ
http://www.youtube.com/watch?v=yNkeWNMFtqE
ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ ಫ್ರಂಮ್ ಮುಂಗಾರು ಮಳೆ
ಸಾಹಿತ್ಯ: ಯೋಗ್ ರಾಜ್ ಭಟ್
ಸಂಗೀತ: ಮಾನೋ ಮೂರ್ತಿ
ಗಾಯನ: ಸೋನು ನಿಗಮ್
ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ
ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ,
ಸುರಿವ ಒಲುಮೆಯ ಜಡಿ ಮಳೆಯೆ,ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ | ಮುಂಗಾರು ಮಳೆಯೇ
ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು,
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ,
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು,
ಬರೆದು ಹೆಸರ ಕಾಮನ ಬಿಲ್ಲು, ಏನು ಮೋಡಿಯೋ | ಮುಂಗಾರು ಮಳೆಯೆ
ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ,
ಯಾರ ಉಸಿರಲ್ಯಾರ ಹೆಸರೋ,ಯಾರು ಬರೆದರೋ,
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೊ,
ಯಾರ ಪ್ರೇಮ ಪೂಜೆಗೆ ಮುಡಿಪೊ, ಯಾರು ಬಲ್ಲರೋ | ಮುಂಗಾರು ಮಳೆಯೆ
ಒಲವ ಚಂದಮಾಮ ನಗುತ ಬಂದ ಮನದಂಗಳಕೆ,
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿತೇ ಮೆರವಣಿಗೆ,
ಅವಳ ಪ್ರೇಮದೂರಿನ ಕಡೆಗೆ,ಪ್ರೀತಿ ಪಯಣವೋ,
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೊ | ಮುಂಗಾರು ಮಳೆಯೆ
http://www.youtube.com/watch?v=eUaoU3LcaWw
ನೂರು ಜನ್ಮಕು ನೂರಾರು ಜನ್ಮಕು ಫ್ರಂಮ್ ಅಮೇರಿಕಾ ! ಅಮೇರಿಕಾ !!
ಗೀತ ರಚನೆ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋ ಮೂರ್ತಿ
ಗಾಯನ : ರಾಜೇಶ್ ಕೃಷ್ಣನ್
ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು |೨|
ಬಾಳೆಂದರೆ ಪ್ರಣಯಾನು ಭಾವ ಕವಿತೆ ಆತ್ಮಾನು ಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓ. ಓ .ಓ .....
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ || ನೂರು ಜನ್ಮಕು ||
ಬಾ ಸಂಪಿಗೆ ಸವಿ ಭಾವ ಲಹರಿ ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲಾ ಓ. ಓ .ಓ .....
ಲೋಕದ ಸುಖವೆಲ್ಲಾ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ || ನೂರು ಜನ್ಮಕು ||
http://www.youtube.com/watch?v=OH9LH5oRZ-w
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ಭಾವಗೀತೆ
ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||
ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….
http://www.youtube.com/watch?v=l1inXiJC-b8
ನೂರೊಂದು ನೆನಪು......,ಎದೆಯಾಳದಿಂದ.... ಫ್ರಂಮ್ ಬಂಧನ
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಆರ್.ಏನ್.ಜಯಗೋಪಾಲ್
ನಿರ್ದೇಶನ:ರಾಜೇಂದ್ರಸಿಂಗ್ ಬಾಬು
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,
ನೂರೊಂದು ನೆನಪು...,ಎದೆಯಾಳದಿಂದ...
ಹಾಡಾಗಿ ಬಂತು....ಆನಂದದಿಂದ...
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ
ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ...
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ
ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ ಈ ಹಾಡಿನಿಂದಾ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ
http://www.youtube.com/watch?v=ehRUhC3sQPE
ಓಲ್ಡ್ ಇಸ್ ಗೋಲ್ಡ್..
Fullu Emotionallu :'-(
ReplyDeleteHmm…its emotional over flow…
ReplyDelete