ಮನೆ ಮಾತಾದ ಈ ಮಾಲ್ಗುಡಿ ಆರ್. ಕೆ ನಾರಾಯಣ ಅವರು ತಮ್ಮ ಕಾದಂಬರಿಯಲ್ಲಿ ನಮ್ಮೆಲ್ಲರಿಗೆ ಚಿತ್ರಿಸಿದ ಒಂದು ಸುಂದರ ಹಳ್ಳಿ. ನಕ್ಷೆಯಲ್ಲಿ ಕಾಣದ ಈ ಮಾಲ್ಗುಡಿ ನಮ್ಮೊಳಗೆ ಅಡಗಿರುವುದು. ನಮ್ಮ ಬದುಕನ್ನೇ, ನಮ್ಮ ಬಾಲ್ಯವನ್ನೇ ತೆರೆದಿಡುವುದು. ಈ ಕಾದಂಬರಿಯನ್ನು ನಮ್ಮ ಮೆಚ್ಚಿನ ಶಂಕರ್ ನಾಗ್ 'ಮಾಲ್ಗುಡಿ ಡೇಸ್' ಅನ್ನುವ ದಾರವಾಹಿಯನ್ನಾಗಿ ನಿರ್ಧೇಶಿಸಿ ನಿರ್ಮಿಸಿದ್ದರು, ಹಿಂದಿಯಲ್ಲಿ ಹೊರಬಂದ ಈ 'ಮಾಲ್ಗುಡಿ ಡೇಸ್' ನೋಡದವರೆ ಇಲ್ಲ ಎನ್ನಬಹುದು! ಆದರೆ ನಾನಂತು ನೋಡಿರಲಿಲ್ಲ! ನೋಡಬೇಕೆನ್ನುವ ಆಸೆ ನನ್ನಲಿದ್ದ ಕಾರಣ ನೋಡದೆ ಬಿಡಲಿಲ್ಲ.
ನನಗೆ ಈ ಕತೆಯು ನ್ಯಾಚುರಲ್ ಆಗಿ ಕಂಡು ಬಂತು. ಈ ದಾರವಾಹಿಯನ್ನು ನೋಡುತ್ತಾ ಹೋದಂತೆ ನೀವೊಂದು ಬೇರೆ ಜಗತ್ತಿಗೆ ಹೋದ ಅನುಬವ ಉಂಟಾಗುತ್ತದೆ. ಆ ಜಗತ್ತು ಮತ್ತಾವುದು ಅಲ್ಲ ನಿಮ್ಮ ಬಾಲ್ಯದ ದಿನಗಳೆ. ಅಮ್ಮ-ಅಪ್ಪ ಅಜ್ಜಿ-ಅಜ್ಜನ ನೆನಪುಗಳು, ಶಾಲೆಯ ಮಾಸ್ಟ್ರ ಬೆತ್ತದ ಬಿಸಿಯ ಅನುಬವ, ಬಾಲ್ಯದ ಪುಟ್ಟ ಸಮಸ್ಯೆಗಳು, ಅಂದಿನ ನಮ್ಮ ಕಲ್ಪನಾಲೋಕ ಇವುಗಳನ್ನೆಲ್ಲ ನೆನಪಿಸಬಲ್ಲ ಚಿತ್ರ ಮಾಲ್ಗುಡಿ.
'ಸ್ವಾಮಿ ಮತ್ತು ಫ್ರೆಂಡ್ಸ್' ಇದರ ಮೊದಲ ಕಂತು. ಕತೆಯನ್ನಂತೂ ನಾನಿಲ್ಲಿ ಹೇಳಹೊರಟಿಲ್ಲ. ಏಕೆಂದರೆ ನೀವು ನೋಡಲೇ ಬೇಕಾದ ದಾರವಾಹಿ ಮಾಲ್ಗುಡಿ!. ನೋಡಿದವರು ಇನ್ನೋಮ್ಮೆ ನೋಡಿ ಬಿಡಿ, ಯುಟ್ಯೂಬ್ ವಿಡಿಯೊ ಕೊಂಡಿಯನ್ನು ಕೊನೆಯಲ್ಲಿ ಸೇರಿಸುತ್ತೇನೆ. ಶಂಕರ್ನಾಗ್ ಅವರ ನಿರ್ದೇಶನದ ವಿಶೇಷ, ಅವರ ಕಾದಂಬರಿಯ ಒಳನೋಟ, ಅನುಗುಣವಾಗಿ ಚಿತ್ರಿಸಿರುವ ಸನ್ನಿವೇಷಗಳು ಅಮೋಗವಾಗಿವೆ. 'ಸ್ವಾಮಿ ಅಂಡ್ ಫ್ರೆಂಡ್ಸ್' ನಿಮ್ಮನ್ನ ನಿಮ್ಮ ಬಾಲ್ಯಕ್ಕೆ ಒಯ್ಯುವುದಂತು ನಿಜ. ಬಾಲ್ಯದ ಆಸೆಗಳು, ಕೌತುಕಗಳು, ಭಯಗಳನ್ನೊಳಗೊಂಡು, ಗೆಳೆತನ, ಅಜ್ಜಿ ತಾತನ ನೆನಪುಗಳನ್ನು ನಿಮ್ಮ ಕಣ್ಮುಂದೆ ತರಬಲ್ಲುದು.
ಬಾಲ್ಯ ನಗು ಅಳುಗಳ ಸಮ್ಮಿಲನ.
ಒಂದು ಗಳಿಗೆಯ ಕುಸ್ತಿ ಮತ್ತೆ ದೋಸ್ತಿ..
ತಿಳಿಯದ ಪ್ರಪಂಚ..
ಕುತೂಹಲ..
ಇವುಗಳನ್ನೆಲ್ಲ 'ಶಂಕರ್ನಾಗ್' ಸೂಕ್ಷ್ಮವಾಗಿ ಗಮನಿಸಿ ಕತೆಗೆ ಜೀವತುಂಬಿದ್ದಾರೆ.
'ಸ್ವಾಮಿ' ಆಗಿ ಕಾಣಿಸಿಕೊಳ್ಳುವ ಪುಟ್ಟ ಹುಡುಗ ಮಾಸ್ಟರ್ ಮಂಜುವಿನ ನಟನೆ ಪರ್ಫೆಕ್ಟ್! ಚಿಕ್ಕವಯಸ್ಸಿನಲ್ಲಿ ಅಂತಹ ಕಲೆ ಅದ್ಬುತ.
ಹಳಿಯ ಬದಿಯಲ್ಲಿ ಅಳುತ್ತಾ ಕೂತಿದ್ದ ಸ್ವಾಮಿ ರೈಲು ಬಂದೊಡನೆ ಕಣ್ಣೊರೆಸುತ್ತಾ ತನ್ನ ಗೆಳೆಯನೊಡನೆ ಸ್ವಾಮೀ.... ಎಂದು ಓಡುವ ಪರಿ ಕಣ್ಣ ಕಟ್ಟಿದೆ..
No comments:
Post a Comment