Apr 16, 2014

ಇದು ನಮ್ಮ ಮನೆ

ಇದು ನಮ್ಮ ಮನೆ
ನಮ್ಮ ವಡ್ಡರ ಮನೆ
ನಾವು ಹುಟ್ಟಿದ ಮನೆ
ನಾವು ಆಡಿದ ಮನೆ
ಅಪ್ಪ ಅಮ್ಮನೊಡನೆ ಬಾಳಿದ ಮನೆ

ಅಲ್ಲಿಲ್ಲಿ ಗೆದ್ದಲು
ಕುಸಿದ ಗೋಡೆ
ಒಡಕಲು ಓಡು
ಮಳೆಗೆ ಸೋರುವ
ಗಾಳಿಗೆ ಹಾರುವ
ಹಂಚು ಪಕಾಸುಗಳು
ಆದರೂ ನಿಂತಿದೆ ಇನ್ನೂ
ತನ್ನ ಚರಿತ್ರೆಯೊಡನೆ
ಇದು ನಮ್ಮ ಮನೆ
ನಮ್ಮ ವಡ್ಡರ ಮನೆ

ಕೋಣೆ ಕೋಣೆಗು ಜನರು
ಅವರಿಗೆ ಅವರದೇ ಮಾತು
ಆದರೂ ನಾವೆಲ್ಲ ಒಂದೆ
ಕರುಳ ಬಳ್ಳಿಯ ಮುಂದೆ
ಇದು ನಮ್ಮ ಮನೆ
ನಮ್ಮ ನಿಮ್ಮ ಮನೆ

ನಮ್ಮ ಹುಟ್ಟಿಗೆ ಮುಂಚೆ ಇದ್ದ ಮನೆ
ಸಾವಿನ ಬಳಿಕ ಇರುವ ಮನೆ
ಎಲ್ಲದಕ್ಕೂ ಸಾಕ್ಷಿಯಾಗಿ
ಯುಗ ಯುಗಗಳನ್ನೇ ಕಳೆದ ಮನೆ
ನಾಯಿ ಬೆಕ್ಕುಗಳು ದನಕರುಗಳಿಗೆ
ಆಶ್ರಯವಾಗಿತ್ತು ಈ ಮನೆ
ಇದು ನಮ್ಮ ಮನೆ

ನಮ್ಮ ಪೂರ್ವಜರು ಪಾಲಿಸಿದ್ದರೊಂದು ಧರ್ಮ
ಅದರಂತೆ ಅವರ ಕರ್ಮ
ಹಾವು ನಾಗರನಾಗಿ
ಆನೆ ಗಣಪನಾಗಿ
ಹಂದಿ ವರಹನಾಗಿ
ಸಕಲ ಜೀವ ಜಂತುಗಳನ್ನೂ
ರಕ್ಷಿಸುತಿದ್ದ ನಮ್ಮ ಮನೆಯ ಧರ್ಮ
ಅದುವೇ ಸನಾತನ ಧರ್ಮ

ನಮ್ಮ ಮನೆಯದುವೇ ನಮ್ಮ ನಾಡು
ಭಾರತ
ನಮ್ಮ ನುಡಿಯದುವೇ ತಾಯಿ ಭಾಷೆ
ಕನ್ನಡ
ಅಮ್ಮ ಕಲಿಸಿದ ಭಾಷೆ
ಕನಸಲಿ ಕನವರಿಸಿದ ಭಾಷೆ
ಉಳಿಯಲಿ ಬೆಳೆಯಲಿ
ವಿಶ್ವ ಶಾಂತಿಯ ಸಾರಲಿ

ಪ್ಲಾನೆಟ್ ಎಕ್ಸ್ ಮತ್ತು ಹೊರ ಜಗತ್ತಿನ ಬುದ್ದಿಜೀವಿಗಳು -೧

ಷ್ಟೋ ಸಾವಿರ ವರ್ಷಗಳ ಹಿಂದೆ ನಾವಿರುವ ಈ ಭೂಮಿಯ ಮೇಲೆ ಮನುಷ್ಯರು ಬದುಕಿದ್ದರು, ನಮ್ಮ ಮುತ್ತಾತಂದಿರೆ ಎಂದಿಟ್ಟು ಕೊಳ್ಳಿ ಆದರೆ ಅವರು ನಮ್ಮ ನಿಜವಾದ ಪೂರ್ವಜರಲ್ಲ!! ಏಕೆಗೊತ್ತ ಅವರಿಗೂ ನಮ್ಮ ಈ ದೇಹಕ್ಕೂ ಯಾವುದೇ ಸಂಬಂಧವಿಲ್ಲ. ದೇಹದ ಯಾವುದೇ ಜೀನೂ ಅವರ ಜೀನನ್ನು ಹೋಲಲ್ಲ. ಆ ಜನಾಂಗ ನಮಗಿಂತ ಲಕ್ಷ ಪಟ್ಟು ಬುದ್ದಿವಂತ ಜನಾಂಗ. ನಮ್ಮ ಈ ರಾಕೇಟ್, ಕಂಪ್ಯೂಟರ್, ಫೇಕ್ ಮೂನ್ ಲ್ಯಾಂಡಿಂಗ್ ಎಲ್ಲಕಿಂತ ಮೀರಿದ ತಂತ್ರಜ್ಞಾನ; ನ್ಯೂಟನ್, ಐನ್‍ಸ್ಟೀನ್, ಹಾಕಿಂಗ್ ರಿಗೂ ಮೀರಿದ ವಿಜ್ಞಾನಿಗಳು ಸಿದ್ದಾಂತಗಳು ಅವರಲ್ಲಿತ್ತು. ನಾವು ಕಚ್ಚಾಡುವ ನೂರಾರು ಧರ್ಮಗಳನ್ನು ಮೀರಿಸುವ ಧರ್ಮ ಅವರಿಗೆ ತಿಳಿದಿತ್ತು. ಹಾಗಿದ್ದರೂ ಅದ್ದೆಂತಹ ಅಸಾಧಾರಣ ಶಕ್ತಿ ಆ ಬುದ್ದಿವಂತ ಜನಾಂಗ ವನ್ನ ಈ ಭುವಿಯಿಂದ ಮತ್ತು ನಂಮ್ಮಿಂದ ಕಣ್ಮರೆ ಆಗುಂತೆ ಮಾಡಿತು..! ಇದಕ್ಕೆ ಉತ್ತರ ನಿಂತ ನೆಲ. ಹೌದು ನಾವು ನಿಂತಿರುವ ಇದೇ ಭೂಮಿ ಅವರನ್ನ ಕಣ್ಮರೆ ಯಾಗಿಸಿತು.

ಬುದ್ದಿವಂತ ಜನಾಂಗಕ್ಕೆ ನಮ್ಮಂತೆಯೇ ಹಲವು ಪ್ರಶ್ನೆಗಳು ಕಾಡುತಿದ್ದವು..."ನಾವು ಎಲ್ಲಿಂದ ಬಂದವರು? "ಎಲ್ಲಿಗೆ ಸಾಗುತಿದ್ದೇವೆ? "ಈ ಆಧಿ ಅಂತ್ಯವಿಲ್ಲದ ವಿಶ್ವದಲ್ಲಿ ನಾವು ಒಬ್ಬಂಟಿಗಳೆ? "ನಮ್ಮಂತೆಯೇ ಪರಜಗತ್ತಿನಲ್ಲಿ ಜೀವಿಗಳಿರುವವೆ? "ಹಿಂದೆ, ನಾವು ಬದುಕುವ ಈ ಭೂಮಿಯ ಮೇಲೆ ಯಾರಾದರು ಬದುಕ್ಕಿದ್ದರ? "ನಮ್ಮ ಸಹಾಯಕ್ಕೆ ಯಾರಾದರು ಇದ್ದಾರ? "ನಮಗೂ ಅಂತ್ಯ ಇದೆಯ? "ನಾವು ಆರಾದಿಸುವ ದೇವರು ಅಸ್ಥಿತ್ವ ಹೋಂದಿದ್ದಾರ? "ದೇವರೇ ಸೃಷ್ಟಿಯ ಮೂಲವೆ? "ಹಾಗಾದಲ್ಲಿ ದೇವರನ್ನು ಸೃಷ್ಟಿಸಿದ ಕರ್ತೃಯಾರು? ಹೀಗೆ ಹತ್ತು ಹಲವು ಉತ್ತರಿಸಲಸಾಧ್ಯ ಪ್ರಶ್ನೆಗಳು. ಭಯ, ಹೆದರಿಕೆ, ಆತಂಕ ಆದರೂ ಪ್ರೀತಿ, ವಿಶ್ವಾಸವೆಂಬ ಮೌಲ್ಯಗಳ ಮೇಲೆ ಬದುಕು.

ನಾಂಗ ವಿಕಸನಹೊಂದುತ್ತಲೇ ಇತ್ತು. ಭೌದ್ದಿಕವಾಗಿ,ಮಾನಸಿಕ ವಾಗಿ ವಿಕಾಸಹೊಂದುತಿದ್ದ ಆ ಜನಾಂಗಕ್ಕೆ ಕಾಲಕ್ರಮೇಣ ತನ್ನ ಸಹಜೀವಿಗಳ ಬಗ್ಗೆ ಕಾಳಜಿ ಕಮ್ಮಿಯಾಗುತ್ತಾಬಂತು. ಅದೇ ವೇಗದಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಬಹಳ ಮುನ್ನಡೆ ಕಾಣುತಿತ್ತು. ನಮ್ಮ ಕೆಮಿಸ್ಟ್ರಿಯ ಬದಲಾಗಿ ಅವರಿಗೆ ಆಲ್ಕೆಮಿ ತಿಳಿದಿತ್ತು, ಗ್ರಹಗಳ ನಡುವಣ ಗುರುತ್ವ, ಅಣುಗಳ ಅನ್ ಸರ್ಟೈಂಟಿಯನ್ನೆಲ್ಲ ವಿವರಿಸಬಲ್ಲ ಏಕೈಕ ನಿಯಮ ಮತ್ತು ಸಮೀಕರಣ ಅವರಿಗೆ ತಿಳಿದಿತ್ತು. ಅಂದೂ ಕೂಡ ಅಧಿಕಾರ, ಐಶ್ವರ್ಯಕ್ಕಾಗಿ ಕಾದಾಟ ನಡೆದೇಯಿತ್ತು ಇವುಗಳಿಂದು ಭಯಾನಕ ಯುದ್ದಗಳೂ ಸಂಭವಿಸಿದ್ದವು.

ನರು ಕಾಲಕ್ರಮೇಣ ಬದಲಾಗುತ್ತ, ಸನ್ನಿವೇಶಕ್ಕೆ ತಕ್ಕನಾಗಿ ವರ್ತಿಸುತ್ತಾ ಸಮಾಜದಲ್ಲಿ ಸಾವು,ನೋವು,ಸುಖ,ದುಖಃ ಗಳು ಸಂಭವಿಸುತ್ತಿದ್ದರೂ ಅಂದಿನ ವಿಜ್ಞಾನಿಗಳು ಒಂದೇ ಮನಸ್ಸಿನಲ್ಲಿ ಯಾವುದೇ ಸಾಮಾಜಿಕ ಕಟ್ಟು ಕಟ್ಟಳೆ ಗಳಿಗೆ ಒಳಪಡದೆ ತಮ್ಮ ಸಂಶೋಧನೆಗಳನ್ನು ನೆಡೆಸುತ್ತಾಬಂದರು, ಅನೇಕ ಹೋಸ ಅವಿಶ್ಕಾರಗಳು ಸಂಭವಿಸಿದವು. ಹೋರಗ್ರಹಗಳಿಗೆ ತಲುಪುವಷ್ಟು ಸಾಮರ್ತ್ಯ ಉಳ್ಳ ರಾಕೇಟ್ ನಂತಹ ಉಪಕರಣಗಳು, ಸಂಪರ್ಕ ಮಾಧ್ಯಮಗಳು, ಹೀಗೆ ನಾವು ಇಂದು ಕಂಡಿರುವ ಅನೇಕ ತಂತ್ರಜ್ಞಾನವನ್ನು ಅವರು ಅಂದೇ ತಿಳಿದಿದ್ದರು. ಇನ್ನೂ ಅನೇಕ ವಿಷಯಗಳು ನಾವಿನ್ನೂ ಕಾಣಬೇಕಿರುವವೂ ಕಂಡುಕೋಂಡಿದ್ದರು.

ಹೀಗೇ ಜೀವನ ಸಾಗಿರಲು ಒಮ್ಮೆ ಒಬ್ಬ ಪ್ರಖ್ಯಾತ ಖಗೋಳ ವಿಜ್ಞಾನಿಯಿಂದ ನಮ್ಮ ಈ ಸೂರ್ಯನಿಂದ ೭೮೧ ನಿಮಿಷ ಜೋತಿರ್ವೇಗ ದೂರದಲ್ಲೋಂದು ಹೊಸ ಗ್ರಹ ಪತ್ತೆಯಾಯಿತು, ಆ ಪ್ಲಾನೆಟ್ ಎಕ್ಸ್ ಗೆ ಎರೆಡು ಉಪಗ್ರಹಗಳು ೪ ಗ್ರಹಗಳನ್ನೋಳಗೊಂಡಿರುವ ಸೌರವ್ಯೂಹ. ಆ ವ್ಯೂಹದ ಸೌರ ನಕ್ಷತ್ರ ನಮ್ಮ ಸೂರ್ಯನಿಗಿಂತ ಗಾತ್ರದಲ್ಲಿ ಮತ್ತು ವಯಸ್ಸಿನಲ್ಲಿ ಸ್ವಲ್ಪಚಿಕ್ಕದು. ಪ್ಲಾನೆಟ್ ಎಕ್ಸ್ ನಮ್ಮ ಭೂಮಿಯಂತೆಯೇ ಜೀವ ರಕ್ಷಣೆಗೆ ಯೋಗ್ಯ ಗ್ರಹ ಇಲ್ಲಿಯ ಒಂದು ಹಗಲು ನಮ್ಮನಾಲ್ಕು ಹಗಲಿಗೆ ಸಮ ಇನ್ನು ನೀರಿನ ಜೊತೆಯಲ್ಲಿ ಪಾದರಸದಂತಹ ವಸ್ತುವೋಂದಿದ್ದು, ಇದ್ದಿಲಿಗೆ ಯೋಗ್ಯವಾಗಿದ್ದಿತು.

ಪ್ಲಾನೆಟ್ ಎಕ್ಸನ ಶೂಧದ ೨೩ವರ್ಷಗಳ ಬಳಿಕ ಬುದ್ದಿಜೀವಿಗಳ ಈ ಜನಾಂಗ ತನ್ನ ಪ್ರಥಮಯಂತ್ರವನ್ನು ಯಶಸ್ವಿಯಾಗಿ ಆ ಹೋಸ ಗ್ರಹದಲ್ಲಿ ಇಳಿಸಿತು. ನಾಲ್ಕು ವರ್ಷಪ್ರಯಾಣಿಸಿ ಬಂದ ಯಂತ್ರದಲ್ಲಿ ೪೦ಕ್ಕೂ ಹೆಚ್ಚುಜನ ಗಗನಯಾತ್ರಿಗಳು ೧೦ ಜನ ವಿಜ್ನಾನಿಗಳು ೭೦ಕ್ಕೋ ಅಧಿಕ ಸಾಮಾನ್ಯ ಜನರಿದ್ದರು. ಜೊತೆಯಲ್ಲೇ ಭೋಮಿಯ ವಿವಿಧ ಸಸ್ಯಗಳು, ಮಾನವನಂತೆಯೇ ಇದ್ದ ಸಾಮಾನ್ಯ ಬುದ್ದಿವಂತ ಪ್ರಾಣಿ, ಹಾಗು ಇತರ ಕೆಲವು ಪ್ರಭೇದಗಳಿದ್ದವು. ಈ ಯಂತ್ರ ವನ್ನೇ ಹಿಂಬಾಲಿಸಿದ ಭೂಮಿಯ ಇನ್ನೋಂದು ಯಂತ್ರ ೬ ತಿಂಗಳ ಬಳಿಕ ಬಂದಿಳಿಯಿತು.

ಹೀಗೆ ಪ್ಲಾನೆಟ್ ಎಕ್ಸ್ ನಲ್ಲಿ ಚಿಕ್ಕದಾಗಿ ಜೀವ ಸಂತತಿ ಚಿಗುರೊಡೆಯಿತು. ಸಧ್ಯಕ್ಕೆ ಇಲ್ಲಿಂದ ಪುನಃ ಭೂಮಿಗೆ ಹೋಗಬಲ್ಲ ಯಾವುದೇ ಯಂತ್ರ ಇರಲಿಲ್ಲ ಹಾಗೆಯೇ ಎರೆಡೂ ಗ್ರಹಗಳ ನಡುವಣ ಸಂಪರ್ಕ ಸಾಧ್ಯ ವಿರಲಿಲ್ಲ. ಭುವಿಯಲ್ಲಿದ್ದವರು ತಮ್ಮ ಉಡಾವಣೆ ಯಶಸ್ವಿಯಾಗಿದೆ ಎಂದಷ್ಟೇ ನಂಭಿದ್ದರು..

ಮುಂದುವರೆಯಲಿದೆ.....

ಹೂವು

ಮನೆಯ ಹಿತ್ತಲಲ್ಲಿ ಒಂದು ಹೂವು ಅರಳಿದೆ
ಹೂವ ಗಮಕೆ ಮಕರಂದಕೆ ದುಂಬಿ ಬಂದಿವೆ
ಮನೆಯವರ ಮನಸಿನಲ್ಲಿ ನಗುವ ತಂದಿದೆ
ಮುಳ್ಳ ಮೈಗೆ ಹಸಿರ ಎಲೆಗೆ ಬಟ್ಟಿನಂತಿದೆ
ಕೆಂಗುಲಾಬಿ ಚಂದವಾಗಿ ಅರಳಿ ನಿಂತಿದೆ
ನೋಡುಗರ ಮನೆಸೆಳೆವ ಗುಲಾಬಿ ನಾನು
ಹೆಂಗಳೆಯರ ಮುಡಿಗೆ ಏರಿ
ಮಾಲೆಯಲ್ಲಿ ಕೊರಳಿಗೇರಿ ಮೆರೆವೆ ನಾನು
ಪುಷ್ಪಗಳ ರಾಜನಾನು ನಿಸರ್ಗ ಸೌಂದರ್ಯ ನಾನು

ಅರಳಿ ಹೂವು ಬಾಡಬೇಕು ಮರಳಿ ಮತ್ತೆ ಅರಳ ಬೇಕು
ಕೊನೆಗೊಂಮ್ಮೆ ಗಿಡವೆ ಮಾಗಿ ಸಾವಿಗೆ ಶರಣಾಗಬೇಕು
ಇದೇ ನಿಯಮ ಸೃಷ್ಟಿ ನಿಯಮ
 ಮನೆಯ ಹಿತ್ತಲಲ್ಲಿ ಒಂದು ಹೂವು ಅರಳಿದೆ
ಸ್ವಾರ್ಥ ಬಿಟ್ಟು ಪರರಿಗಾಗಿ ಬಾಡಿ ನಿಂತಿದೆ

ಮೌಲ್ಯ

ಪ್ರಾಮಾಣಿಕತೆಗೆ ನಾಯಿ
ಪರಿಶ್ರಮಕ್ಕೆ ಇರುವೆ
ಕರುಣೆಗೆ ಹಸು
ಗಾಂಭೀರ್ಯಕ್ಕೆ ಆನೆ
ತಾಳ್ಮೆಗೆ ಆಮೆ
ಶೌರ್ಯಕ್ಕೆ ಹುಲಿ ಸಿಂಹ
ಹೀಗೆ ಸಕಲ ಗುಣಗಳೂ ಪ್ರಾಣಿಪಕ್ಷಿಗಳಲ್ಲಿ ಹಂಚಿಹೋಗಿರಲು ಮೇಲ್ನೋಟಕ್ಕೆ ಒಂದೆರೆಡು ಮೌಲ್ಯಗಳ ಮುಖವಾಡದ ನಾವೆಷ್ಟು ಮೇಲು?
ಕರಿ ಬಿಳಿ ನಾಯಿಯಾದರೇನು ತಳಿಯಾವುದಾದರೇನು ಗುಣವೊಂದೆ; ಅನ್ನಹಾಕಿದ ಕೈಯ ಕೊನೆವರೆಗು ಮರೆಯದಿರುವುದು.

ಅಪ್ಪ

ಅಪ್ಪ ಬೆವರಿದ ತನ್ನ ಮಗನ ಮೊಗನೋಡಿ
ತನ್ನದೇ ಛಾಯೆ ಅವನಲಿ ನೋಡಿ;
ಅಂದು ಅಜ್ಜ ಮಾಡಿದ್ದು ಹಿಂಗೆ ಅಪ್ಪನ ನೋಡಿ;
ಎಂದೋ ಹೊತ್ತಿದ ಈ ಭಾಂದವ್ಯದ ಧೀಪ
ಇಂದೆನ್ನ ಬಳಿಯಲ್ಲಿ.
ಅಸ್ತಮಾನದಿ ಅಪ್ಪ ಉದಯ ಮಗನನು ಕಂಡು
ಸಾರ್ಥಕತೆಯಲಿ ಬೆವರೊರೆಸಿದ;
ಈ ಭಂದನ ಬಿಗಿ ಯಾಗಲೆಂದು ಹರಸಿದ.

ಹಣ್ಣ ಕೇಳಿತು

ಹಣ್ಣ ಕೇಳಿತು ಬಾಲ್ಯ
ಹೆಣ್ಣ ಕೇಳಿತು ಹರೆಯ
ಕೂಡಿಸುತ ಹೊನ್ನ
ಹಣ್ಣು ಕೇಶದ ಬಣ್ಣ
ಮುಪ್ಪು ಕರೆಯಿತು ಮಣ್ಣ

ಅನಂತ ಶಕ್ತಿ

ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.
ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್ತಿಯಲ್ಲೇ ಪ್ರಪಂಚವನ್ನು ನಾಶಗೊಳಿಸಬಹುದು ಎಂಬುದು ನಮಗೆಲ್ಲ ತಿಳಿದ ವಿಚಾರವೆ. ಹೀಗಿರುವಾಗ ಬಿಲಿಯಗಟ್ಟಲೆ ವರ್ಷಗಳಿಂದ ವಿಕಾಸ ಹೋಂದಿರುವ ಈ ಮನವ ಜೀವಿಯಲ್ಲಿ ಎಷ್ಟು ಶಕ್ತಿ ಅಡಗಿದೆ ಎಂಬುದು ಅಳತೆಗೆ ಮೀರಿದ್ದು.
   ಒಂದು ಹಿಡಿ ಅಡುಗೆ ಉಪ್ಪನ್ನು ತೆಗೆದುಕೊಂಡು ಅದನ್ನು ಮೆಗ್ನೀಷಿಂ ಆಗಿ ಪರಿವರ್ತಿಸಿದರೆ ಎಲ್ಲರೂ ಆಶ್ಚರ್ಯ ಪಡುವಂತಹದ್ದೆ ಆದರೆ ಇದು ಸಾದ್ಯ! ಉಪ್ಪಿನಲ್ಲಿರುವ ಸೋಡಿಯಂ ಪರಮಾಣುವಿನ ಕೊನೆಯ ಕಕ್ಷೆಗೆ ಒಂದು ಇಲೆಕ್ಟ್ರಾನ್ ಸೇರಿಸುವದರಿಂದ ಇದು ಸಾದ್ಯವಾಗಬಹುದು. ಹೀಗೆ ನೋಡಿದಲ್ಲಿ ಏಸುವು ಕಲ್ಲುಗಳನ್ನು ರೊಟ್ಟಿಯಾಗಿಸಿ ತಿಂದದ್ದು ನಿಜವೆ. (ಕೆಲವು ಯೋಗಿಗಳು ಈಗಲೂ ಹೆಣನ್ನು ಆಹಾರವನ್ನಾಗಿಸಿ ತಿನ್ನುವ ಪುರವೆಗಳಿವೆ).
   ಪ್ರಪಂಚದಲ್ಲಿ ಅಸಾದ್ಯವಾದದ್ದು ಯವುದೂ ಇಲ್ಲ. ಎಲ್ಲವೂ ಶಕ್ತಿಯ ರೂಪಗಳೆ ; ನಮ್ಮಸುತ್ತಲು ನಡೆಯುತ್ತಿರುವ ಎಲ್ಲಾ ಪ್ರಕ್ರಿಯೆಗಳೂ ಇಂದ್ರಜಲವೇ ಸರಿ. ಸವಿರಾರು ವರ್ಷಗಳ ಹಿಂದಿನ ಜೀವಿಗಳ ಗುಣಗಳನ್ನೆಲ್ಲಾ ಹೋತ್ತು ಸಾಗುವ ಡಿ.ಎನ್.ಎ ನಿಂದ ಹಿಡಿದು; ಮಾಹಿತಿ ಹೊತ್ತು ಸಗುವ ರೇಡಿಯೋ ತರಂಗಗಳ ವರೆಗೆ ಎಲ್ಲವೂ ಮಾಂತ್ರಿಕವಾಗಿದೆ. ಈಗ ತಾನೆ ಹುಟ್ಟಿದ ಕರು ಗಾಳಿಗೇ ದಪ್ಪನಾಗಿದೆ! ಪ್ರನಾಳದ ಒಳಗೆ ಶಿಶುಗಳು ಬೆಳೆದಿವೆ! ಇದರ ಮೂಲಬೂತ ತತ್ವಗಳೇನು?.ಕ್ವಾಂಟಮ್ ಸಿದ್ಧಾಂತಕ್ಕೆ ಹೋದಲ್ಲಿ 'ಪ್ರತೀ ವಸ್ತುಗಳು ವಿವಿಧ ತರಂಗದಲ್ಲಿ ತನ್ನ ಕಣಗಳ ಮಿಡಿತವನ್ನು ಹೋಂದಿದ್ದು ಕೆಲವೊಂಮ್ಮೆ ಜೀವೋತ್ಪತ್ತಿಗೂ ಅಥವಾ ಮರಣಕ್ಕೂ ಕಾರಣವಾದೀತು.
   ಮನೆಯ ಗೋಡೆಯ ಮೇಲೆ ತೂಗುಹಾಕಿರುವ ಚಿತ್ರಪಟ, ಯಾರೋಅಂದ ಮಾತು, ತನ್ನ ಅಂಗಿಯ ಬಣ್ಣ ಹೀಗೆ ಇವೆಲ್ಲವೂ ಪರೋಕ್ಷವಾಗಿ ನಮ್ಮಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಮಡುತ್ತಲೇ ಇರುತ್ತವೆ.ಆದರೆ ಇದನ್ನೆಲ್ಲವನ್ನು ಅರಿತವನು ಇದರ ಪರಿಣಾಮವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳ ಬಹುದು.
   ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಥವಾ ನಿಮ್ಮ ಜೀವನವನ್ನೇ ಗಮನಿಸಿ. ಪ್ರತೀ ಯಶಸ್ಸಿನ ಹಿಂದೆ ಅಥವಾ ಕಾರ್ಯದ ಹಿಂದೆ ಒಂದು ಸುಪ್ತ ಶಕ್ತಿ ಅಡಗಿದೆ. ಅದೇ ಯೋಚನಾ ಶಕ್ತಿ ಅಥವಾ ಕಲ್ಪನಾಶಕ್ತಿ. ಒಂದು ಚಿತ್ರವನ್ನು ಬಿಡಿಸಲು ಪ್ರೇರೇಪಿಸಿದ ಮನಸ್ಸಿನ ಕಲ್ಪನೆ; ಕವನವನ್ನು ಬರೆಸಿದ ಒಂದು ಭಾವನೆ ಅಥವಾ ಸೋಲಿಗೆ ಕಾರಣವಾದ ತನ್ನಲ್ಲೇ ರೂಪುಗೊಂಡಿದ್ದ ನಕಾರಾತ್ಮಕ ಭಾವನೆ. ಹೀಗೆ ನಮ್ಮ ಯೋಚನೆಯಂತೆ ನಾವಾಗುತ್ತೇವೆ. ಜೀವನದಲ್ಲಿ ನೀವು ಸಾಧಿಸ ಬೇಕಾದ್ದನು ಒಂದು ಹಾಳೆಯ ಮೇಲೆ ದಪ್ಪಾಕ್ಷರದಲ್ಲಿ ಬರೆದು ನಿಮಗೆ ಕಾಣುವನ್ತೆ ಅಂಟಿಸಿ ಅದನ್ನು ನೋಡಿದಾಗಲೆಲ್ಲ ಹೊಸ ಹೊಸ ಯೋಚನೆಗಳು ಮನಸ್ಸಿಗೆ ಬಂದು ಮುಂದೆ ಅವೇ ಕಾರ್ಯಗಳಾಗಿ ನೀವು ನಿಮ್ಮ ಗುರಿಯನ್ನು ತಲುಪುತ್ತೀರಿ ಇದು ಸತ್ಯ.
   ದೆವ್ವ ನಿದ್ದ ಮನಸಲ್ಲಿ ದೇವರಿಲ್ಲ; ದೇವರಿರುವಾಗಲ ದೆವ್ವನಿಲ್ಲ ಎಂಬಂತೆ. ನಮಗಿರುವ ಮನಸ್ಸು ಒಂದೆಆದರಲ್ಲಿ ಸಧಾ ದೇವರಿರುವಂತೆ ಜಾಗ್ರತಗೊಳಿಸಿಕೊಳ್ಳಬೇಕು.
ನಿಮಗೆ ಒಳ್ಳೆಯದಾಗಲಿ ಧನ್ಯವಾದ.

ಯೋಚನಾ ಲಹರಿ...

ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು. ಮಗುವಿನ ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ. ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ ಬೇರೆಯಾಗಿತ್ತು ಆತನಿಗೆ ಮಗುವಿನ ದುಂಡನೆಯ ಮೊಗ, ಹೊಳೆಯುವ ಕಣ್ಗಳು, ದೀಪದ ಬೆಳಕಿಗೆ ರೂಪುಗೊಂಡಿದ್ದ ಕಪ್ಪು ಬಿಳುಪಿನ ಸಂಯೋಜನೆಗಳು ಹೀಗೆ ಇವೇ ಕಂಡು ಬಂದವು.ಅದರಲ್ಲೇ ಒಬ್ಬ ಅದ್ಯಾತ್ಮಿಕವಾದಿಗೆ ಮಗುವಿನ ಅಲೌಕಿಕ ನಗು ಗಮನ ಸೆಳೆಯಿತು. ಕಾರಣವೇಯಿಲ್ಲದ ಕಾರ್ಯಗಳ ಆಚೆಗೆ ಮೂಡಿಬಂದ ಆ ನಗು ಮತ್ತು ಅದನ್ನು ಚಿತ್ರೀಕರಿಸಲು ಸಾದ್ಯವಾದ ಮಾನವನ ಅವಿಷ್ಕಾರ ಅದರ ಹಿಂದಿನ ದೇವರ ಇರುವಿಕೆಯ ಅನುಭವ ಅನನಿಗಾಯಿತು.
  ವಸ್ತು ಒಂದೇ ಆದರೇನಂತೆ ನೋಡುವ ದೃಷ್ಟಿಗುಳು ವಿಧವಿಧವಾಗಿದೆ. '''ನಿರ್ಲಿಪ್ತನಾಗಿ ಗಳಿಕೆಯ ಆಸೆಗಳಿಲ್ಲದೆ,ಯಾವುದೇ ಒಂದು ಕ್ಷೇತ್ರಕ್ಕೆ ಅಂಟಿಕೊಳ್ಳದೆ ಒಂದು ವಸ್ತುವನ್ನು ನೋಡುವವನೇ ನಿಜವಾಗಿ ನೋಡುತ್ತಾನೆ'''. ನೋಡಿದ್ದನ್ನೆಲ್ಲಾ ಕಾವ್ಯಕ್ಕಿಳಿಸಬೇಕೆನ್ನುವ ಕವಿ; ಕಂಡದನ್ನೆಲ್ಲ ಚಿತ್ರೀಕರಿಸಿ ಪ್ರತಿಷ್ಠೆ ಪಡೆಯಲು ಪ್ರಯತ್ನಿಸುವ ಕಲಾವಿದ ಯಾವುದೋ ಒಂದು ವಿಧದಲ್ಲಿ ನಿಜವಾದ ನೋಟವನ್ನು ಕಳೆದುಕೊಂಡವರಂತಾಗುತ್ತಾರೆ.

ನಿಮ್ಮ ಮಕ್ಕಳಾಗಿದ್ರೆ ಹೀಗೆ ಮಾಡ್ತಿದ್ರ!

ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು. ಆ ಪ್ರಾಣಿ ಕೀಳು, ಒಂದೊತ್ತು ಉಪವಾಸ ಇದ್ರು ನಡಿತದೆ ಆದ್ರೆ ನಮ್ಗೆ ಆಗಲ್ಲ.
   ದಿನ ಕಳೆದಂತೆ ನಾವು ನಮ್ಮ ಸಹಜೀವಿಗಳಿಂದ ದೂರ ನಡಿತಿದೆವೆ. ಆನೆ,ಕೋಳಿ,ನಾಯಿ,ಹಂದಿ ಇವೆಲ್ಲ ನಮ್ಮೊಟ್ಟಿಗೆ ವಿಕಾಸ ಹೊಂದಿದವು. ನಮಗಿಂತ ಸಾವಿರ ವರ್ಷ ಬೇಗ ಹುಟ್ಟಿದವೂ ಇದ್ದಾವೆ ಆದರೆ ನಾವಿಂದು ಸರ್ವಾದಿಕಾರಿಗಳ ಹಾಗೆ ವರ್ತಿಸುತಿದ್ದೇವೆ. ಅಟ್ಟದಲ್ಲಿ ವಿಷ ಇಟ್ಟು ಇಲಿ ಕೊಲ್ಲೋದ್ರಿಂದ ಹಿಡಿದು ಹೊಲಕ್ಕೆ ವಿಧ್ಯುತ್ ಬೇಲಿ ಹಾಕಿ ಜಾನುವಾರುಗಳ ಕೊಲೆಯವರೆಗೆ ನಮ್ಮ ಕೆಲಸ ಸಾಗಿದೆ. ಇತ್ಲಗೆ ಸುಬ್ಬೇಗೌಡ್ರದ್ದು ಕಾಫಿ ತೋಟ ಅತ್ಲಗೆ ಕಾಳ್‌ಶೆಟ್ರದ್ದು ಏಲಕ್ಕಿ ತೋಟ ಇನ್ನು ದನ ಮೇಯುದಾದ್ರು ಎಲ್ಲಿ?
ಈಗಂತು ಬಸ್ಟಾಂಡು, ಹೋಟೆಲ್ಲು ಇಲ್ಲೆಲ್ಲ ಬಿದ್ದ ಪ್ಲಾಸ್ಟಿಕ್ ತೊಟ್ಟೆಯೆ ಇವಕ್ಕೆ ಆಹಾರ. ಆದ್ರೆ ಹಾಲು ಹೀರ್ಲಿಕ್ಕೆ ನಾವೆಲ್ಲ ರೆಡಿ ಇದ್ದೇವೆ.
  ಬರೆ ನಾಗರೀಕರ ಹಕ್ಕಿಗೆ ಚ್ಯುತಿ ಬಂದ್ರೆ ಸುಪ್ರಿಮ್ ಕೋರ್ಟ್‌ವರೆಗೆ ಹೋಗ್ತೆವೆ. ನಮ್ಗೆ ಸಂವಿದಾನದಲ್ಲೆ ಮೂಲಬೂತ ಹಕ್ಕುಗಳು ನಿರ್ಧಾರಿತವಾಗಿದೆ ಬಿಡಿ ಅದೆ ಪ್ರಾಣಿಗಳ ಮರಣ ಹೋಮ ನಡಿತಿದ್ರು ಧ್ವನಿ ಎತ್ತೊರಿಲ್ಲ. ಎಷ್ಟೋ ಪಕ್ಷಿಗಳ ಪ್ರಭೇದವೆ ನಶಿಸಿ ಹೊಗಿದೆ, ಜೂ$ ಅಲ್ಲಿರುವ ಪ್ರಾಣಿಗಳ ಬದುಕಂತು ನರಕ್ಕಕಿಂತ ಕಡೆಯಾಗಿದೆ  ಅವುಗಳ ಅನ್ನಕ್ಕೆ ನಿರ್ವಾಹಕರುಗಳ ಕನ್ನ ಬಿದ್ದಿದೆ. ಇಂದು ಭಾರತದಲ್ಲಿರುವ ಹುಲಿಗಳ ಸಂಖ್ಯೆ ಬರೆ ೧೪೫೧ ಇಷ್ಟು ಜನ ನಮ್ಮ್ ಊರಲ್ಲೆ ಇದ್ದಾರೆ. ಇದು ಹೀಗೆ ಮಂದುವರೆದ್ರೆ ನಮ್ಮ ರಾಷ್ಟ್ರಪ್ರಾಣಿ ಬೆಕ್ಕಾಗದ್ರಲ್ಲಿ ಸಂದೇಹವಿಲ್ಲ (ಸಿಂಹ ಇದ್ದದ್ದು ಹುಲಿಯಾಗಿತ್ತು).
  ಕಾಡಲ್ಲಿ ಶಿಕಾರಿ ಕಡಿಮೆ ಆಗ್ಬೇಕು, ಮರಕಡಿಯಲು ಪರ್ಮಿಟ್ ಕೊಡುವ ಅಧಿಕಾರಿಗಳನ್ನು ಮೂದ್ಲು ಮನೆಗ್ ಕಳಿಸ್‌ಬೇಕು. ಜೂ$ ಗಳಿಗಿಂತ ಅಭಯಾರಣ್ಯಗಳ ನಿರ್ಮಾಣವಾಗ್‌ಬೇಕು. ಇವೆಲ್ಲ ಆಗ್ಬೇಕು ವನ್ಯ ಜಿವಿಗಳು ಉಳಿಬೆಕು ಇಲ್ದೆಹೋದ್ರೆ ಅವುಗಳ ಜೋತೆಯಲ್ಲೆ ನಮ್ಮಚಟ್ಟ ರೆಡಿ ಮಾಡ್ಬೇಕು.

ಹೆತ್ತವ್ರ ದೊಡ್ಡ ತಪ್ಪು...

ಹೆತ್ತವ್ರ ಕೆಲ್ಸ ಬರೇ ಹಡೆಯುದಲ್ಲ ಮಕ್ಕಳ್ನ ಓದ್ಸುದೂ ಹೌದು ನಿಜ. ಇವತ್ತು ಹೆತ್ತ್ ಮ್ಯಾಲೆ ಮಕ್ಕಳ್‍ನ ಶಾಲೆಗೆ ಸೇರ್ಸಿಯೇ ಸೇರ್ಸ್ತರೆ ಅದ್ರಲ್ಲೇನು ಡೌಟ್ ಇಲ್ಲ ಆದ್ರೆ ಸಮಸ್ಯೆ ಬರೊದು ಇಲ್ಲಿ, ಯಾವ್ ಶಾಲೆ?? ಹೆಂಗಸ್ರುಗಳು ಅಲ್ಲಿ, ಇಲ್ಲಿ ಗುಡ್ಡಿಗೆ ಕುತ್ಗೊಂಡ್ರಾಯ್ತು.."ನಿಮ್ಮ್ ಮಗ ಏನ್ ಓತಂಡ್ರಿ.. ಪಿ.ಯು ನಾ, ಯಾವ್ ಕಾಲೇಜು? ಏನ್ ಕೊಡ್ಸಿದಿರ...? ಆರ್ಟ್ಸ.. ಶೇ.. ಸ್ಕೋಪಿಲ್ಲ ಬಿಡಿ.. "ನಮ್ಮ್ ಭಾವುನ್ ಮಗ ಮುಂಬಾಯ್ಲಿರೊದು ಟೆಂತಲ್ಲಿ ೯೬ ಪರ್ಸೆಂಟು ಕಂಡ್ರಿ ಮೆಡಿಕಲ್ ಮಾಡ್ತಾಇದನೆ".
    ಎಲ್ಲಾ ರಾಕೆಟ್ ಸೈನ್ಸೇ ಓದ್ಬೆಕಾಗಿಲ್ಲ, ಇಂಜಿನಿಯರ್ಸ್, ಡಾಕ್ಟರ್ಸ್ ಆಗೇ ಅನ್ನತಿನ್‍ಬೆಕಾಗಿಲ್ಲ. ಓದೊ ಮಕ್ಳಿಗಿಂತ ಹೆತ್ತವ್ರಿಗೆ ಒಂದ್ ರೀತಿ ಹುಚ್ಚು. ಇವತ್ತು ನೋರಾರ್ ಜನ ಮಕ್ಕ್ಳು ಆತ್ಮಹತ್ಯೆ ಮಾಡ್ಕೋಳ್‍ತಿದ್ದಾರೆ ಅಂತಾದ್ರೆ ಅದಕ್ಕೆಲ್ಲ ಹೆತ್ತವ್ರೆ ನೇರ ಕಾರಣ. ಹೆತ್ತವ್ರೆ ಮುಗ್ದ ಮಕ್ಕಳ ಭವಿಷ್ಯ ಹಾಳು ಮಾಡೊ ಪಾತಕಿಗಳು.
     "ದೆವ್ವ ಹಿಡಿದಿದ್ರೆ ಬಿಡಿಸ್‍ಬಹುದು.. ಹಾವು ಕಚ್ಚಿದ್ರೆ ನುಡಿಸ್‍ಬಹುದು..ಆದ್ರೆ ಸಿರಿಗರ ಹೋಡೆದವರ ನುಡಿಸಲಾಗದು" ಎಂಬ ಬಸವಣ್ಣನ ಮಾತು ಎಷ್ಟೋಸತ್ಯ ಅನ್ಸುತ್ತೆ.. ನಾವು ಹಿಂಗೆ ನಮ್ ಮಕ್ಕ್ಳೂ ಹಿಂಗೇ ಆಗ್ಬೇಕು ಅಂದ್ರೆ ಆಗುತ್ತಾ, ಎಲ್ಲಾ ಬೆರ್ಳೂ ಒದೇ ತರ ಇರ್ತವ? ಸ್ಟಾಂಡರ್ಡ್ ಮೈಂಟೆನ್ ಮಾಡಕೋಗಿ ಒಂದ್ ಮುಗ್ದ ಜೀವ ಬಲಿತೆಗೊಳದು ಎಷ್ಟು ಒಳೇದು? SSLC exam ಇನ್ನೇನು ಹತ್ರ ಬಂತು, ಸತ್ಯ ತಿಳಿಬೆಕಿದ್ರೆ ಈ ಸಲ್ದ SSLC ಪರಿಕ್ಷೆ ಮೊದ್ಲು ಮತ್ತು ರಿಸಲ್ಟ್ ನಂತ್ರ ದಿನ ಪತ್ರಿಕೆಗಳ್ ಮೇಲೆ ಕಣ್ಣಾಡಿಸ್ತಾ ಇರಿ; ಎಷ್ಟು ಜನ ಜೀವ ಕಳ್ಕೋಳ್ ತ್ತಾರೆ ತಿಳಿತದೆ. ಇದು, ಈ ಸಲ ಮಾತ್ರ ಅಲ್ಲ ಪ್ರತೀ ವರ್ಷ ಇದೇ ಕೇಸು. ಮತ್ತೆ, ಇದೋ೦ದೆ ಗಡುವಲ್ಲ, ಕೆ.ಜಿ ಇಂದ ಪಿ.ಜಿ ತನ್ಕ ಇದೇ ಹಣೆಬರಹ. ಇನ್ನೂ ಪರೀಕ್ಷೆ ಮಾಡ್ಬೇಕು ಅಂತಾದ್ರೆ ಯಾವ್ದಾದ್ರು ಶಾಲೆಗೋ ಕಾಲೇಜಿಗೊ ಭೇಟಿ ಕೊಟ್ಟು ನೋಡಿ ಅಲ್ಲಿರೊ ಅರ್ಧಕ್ಕೂ ಹೆಚ್ಚು ಮಕ್ಳು ತಮ್ಗೆ ಇಷ್ಟವೇ ಇಲ್ಲದಿರೋ ಕೋರ್ಸ್ ತೆಗ್ದು, ತಮ್ಗೆ ಅರ್ಥವೇ ಆಗ್ದೇ ಇರೋ ಮಾಧ್ಯಮದಲ್ಲಿ ಓದ್ತಾ ಇರದು ಕಂಡು ಬರುತ್ತೆ ಇದು ಇಂದಿನ ಪರಿಸ್ತಿತಿ.
     ನಾವು ಜಪಾನಿಯರು ಅಥವಾ ಚೀನಾದ ಜನರಷ್ಟು ಸ್ವಾಭಿಮಾನಿಗಳಲ್ಲ ಎಂಬುದು ನಿಜಕ್ಕೂ ಧುರಾದೃಷ್ಟ, ನಾಚಿಕೆ ಗೇಡು, ನಮ್ಮ ಮಾತೃಭಾಷೆಯ ಮೇಲೇ ನಮಗೆ ಅಭಿಮಾನ ಇಲ್ಲ ಅದ್ರಲ್ಲಿ ವಿಧ್ಯಾಭ್ಯಾಸ ಬೇಡ. ಅರ್ಥ ಆಗ್ದೇ ಇದ್ರು ಆಂಗ್ಲ ಮಾಧ್ಯಮನೇ ಬೇಕು. ಜೊತೆಗೆ ಕನ್ನಡ ಶಾಲೆ ಗಳ್ನೆಲ್ಲ ಮುಚ್ಚ್ ಬೇಕು ಅಲ್ದೆ ಇನ್ನೋದು ಸರ್ಕಾರಿ ಶಾಲೆ ಬೇಡ್‍ವೇ ಬೇಡ ಎಷ್ಟು ಡೊನೇಷನ್ನಾದ್ರು ಪ್ರೈವೇಟೆ ಆಗ್ಬೇಕು.     ತಲೆ ಇಲ್ಲದ ಸರ್ಕಾರ ಓಟಿಗೋಸ್ಕರ ಏನೆಲ್ಲ ಮಾಡುತ್ತೆ ಅನ್ನೋದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. "ಅಲ್ಪ ಸಂಖ್ಯಾತ ಮಕ್ಕಳಿಗೆ ಉಚಿತ ಟ್ಯೂಷನ್" ಅಂತ ರೇಡಿಯೋ ಟಿ.ವಿ ಯಲ್ಲಿ ಹೇಳ್ತರಲ್ಲ ಎಷ್ಟೋ ಸರ್ಕಾರಿ ಶಾಲೆಲಿ ಶಿಕ್ಷಕರೇ ಸರಿಯಾಗಿಲ್ಲ ಇನ್ನು ಶಾಲೆಹೋರಗೆ ಟ್ಯೂಷನ್ ಚಿಂತೆ ಬೇರೆ ಕೇಡು.
    ಕೊನೆದಾಗಿ ವಿದ್ಯಾರ್ಥಿಗಳು ಒಂದು ತಿಳಿದಿರೋದು ಅವಶ್ಯ Follow the interest ಅಷ್ಟೆ. ಅಪ್ಪ ಅಮ್ಮ ಸಾವ್ರ ಹೇಳ್ತರೆ ತಲೆಕೆಡ್ಸ್ಕೊಬೆಡಿ ನಿಮ್ಮ ಭವಿಷ್ಯ ನಿಮ್ಮ ಜೀವನ. ಆಸಕ್ತಿ ಒಂದಿದ್ರೆ ಎಲ್ಲವೂ ಸುಲಭ ಆಸಕ್ತಿಯೇ ಮುಖ್ಯ. ಆಸಕ್ತಿ ಇದ್ದದ್ದಕ್ಕೇ ನೀವೀಗ ಈ ಲೇಖನ ಓದ್ತಿದ್ದೀರಿ ಅರ್ಥ ತನ್ನಷ್ಟಕ್ಕೇ ಆಗ್ತ ಇದೆ ಅನ್ನೋದನ್ನ ಮರಿಬೆಡಿ. ಮತ್ತೋದೇನಂದ್ರೆ ನಮ್ಮ್ Education system ಒಂದು memory test ಅಷ್ಟೆ ಕಡಿಮೆ ಮಾರ್ಕ್ ಬಂದ್ರೆ ಕೀಳರಿಮೆ ಬೇಡ practical’sಗೆ ಹೆಚ್ಚು ಒತ್ತು ಕೊಡಿ. ಹೆತ್ತವ್ರು ಜಾಸ್ತಿ ಮಗನ/ಮಗಳ ಭವಿಷ್ಯದ ಬಗ್ಗೆ ವರಿ ಮಾಡ್ಬೇಡಿ, "ಹುಟ್ಟಿಸ್ದವ್ನು ಹುಲ್ಲು ಮೇಯಿಸೇ ಮೇಯಿಸ್ತಾನೆ" ಅಷ್ಟಕ್ಕೂ ಮಾರ್ಕ್ಸ್ ಹೆಚ್ಚು ಕಡ್ಮೆ ಆದ್ರೇನು ಸುನಾಮಿ ಬರಲ್ಲ...!!, ತಣ್ಣಗೆ ಇದ್ಬಿಡಿ.
 ಏನಂತಿರಾ..

ಕಾರಿಂಜ

ಕಾರಿಂಜ ವಗ್ಗ, ಮಂಗಳೂರಿನಿಂದ ಬಿ.ಸಿ ರೋಡ್ ಮಾರ್ಗವಾಗಿ ೪೩ ಕಿಮಿ ದೂರದಲ್ಲಿದೆ.  ಪರಿಸರಪ್ರಿಯರಿಗೆ, ಶಿವಭಕ್ತರಿಗೆ ಅಥವಾ ಏಕಾಂತ ಬಯಸುವ ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಇವರಿಗಷ್ಟೆ ಅಲ್ಲ ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ನಿಮಗೂ ವಾರಾಂತ್ಯದಲ್ಲಿ ಕಾಲಕಳೆಯಲು ಆಗಬಹುದು.

ಕಾರಿಂಜೇಶ್ವರ ದೇವಸ್ಥಾನ ಬೆಟ್ಟದ ತುದಿಯಲ್ಲಿದ್ದು ೫೦೦ಕ್ಕೂ ಹೆಚ್ಚುಮೆಟ್ಟಿಲುಗಳನ್ನೇರಿ ಬರಬೇಕಾಗಿದೆ. ಬೆಟ್ಟವು ಬೃಹತ್ ಭಂಡೆಗಳಿಂದ ಮಾಡಲ್ಪಟ್ಟಿದು ಕಪಿಗಳಿಗೆ ಆಶ್ರಯವಾಗಿದೆ. ಬೆಟ್ಟದ ಬುಡದಲ್ಲಿ ಸುಂಧರವಾದ ಕೆರೆಯಿದ್ದು ದೊಡ್ಡಗಾತ್ರದ ಮೀನುಗಳನ್ನು ಹೊಂದಿದೆ. ಕೆರೆಯಪಕ್ಕದಲ್ಲಿ ವಿಶಾಲವಾದ ಅಶ್ವತ್ತವೃಕ್ಷ; ಅಲ್ಲೇ ಬಲಕ್ಕೆ ಹುಲ್ಲುಹಾಸಿದ ಹರ ಮತ್ತು ಕಾಡು ಮುಚ್ಚಿಹೋದ ಪುರಾತನ ಗುಹೆಯೊಂದಿದೆ. ಬೆಟ್ಟವನ್ನು ಏರುತ್ತ ಮೋದಲಿಗೆ ಸಿಗುವುದು ಪಾರ್ವತಿದೇವಿಯ ಗುಡಿ ಹಾಗು ಸಣ್ಣಪುಟ್ಟ ತೀರ್ಥಗಳು ಅಲ್ಲಲ್ಲಿ ನಿಮ್ಮನ್ನು ಸ್ವಾಗತಿಸುವ ವಾನರ ಸೈನ್ಯ. ಕ್ರಮೇಣ ಬೆಟ್ಟದ ತುದಿಯಲ್ಲಿ ಕಾರಿಂಜೇಶ್ವರನ ಧರ್ಶನ.

ಕಾರಿಂಜೇಶ್ವರನ ಸುತ್ತ ೧೨೦೦ ಎಕರೆ ರಕ್ಷಿತ ಅರಣ್ಯ ಇರುವುದು ನಿಜಕ್ಕೂಸಂತೋಷದ ಸಂಗತಿ. ಬೆಳೆಯುವ ನಗರದ ಆರ್ಭಟಕ್ಕೆ ತತ್ತರಿಸುತ್ತಿರುವ ವನ್ಯ ಜೀವಿಗಳಿಗೆ ಈ ತುಂಡು ಭುವಿಯಾದರು ಸಹಾಯಕವಾಗಲಿ.

Apr 12, 2014

ನಿದ್ದೆಯೊಳಗಣ ನಿದ್ದೆ

ಗಾಡ ನಿದ್ದೆಯಿಂದೆದ್ದೆ
ಎದ್ದವನೆ ಯೋಚಿಸಿದೆ
ನಿದ್ರೆಯಲ್ಲೂ ಯೋಚಿಸುತಿದ್ದೆ!
ಇದ್ದಿರ ಬಹುದೆ ಎಚ್ಚರವೂ ಒಂದು ನಿದ್ದೆ?


ದೂರದೂರಗಳ ಕಡೆಗೆ
ಹಗಲು ರಾತ್ರಿಗಳು ನಡೆದೆ
ಎದ್ದಾಗ ಇದ್ದಲ್ಲೇ ಇದ್ದೆ!
ಎದ್ದೆನೋ ಕನಸಲ್ಲೇ ಇದ್ದೆನೊ
ತಿಳಿಯದೊಂದೀ ನಿದ್ದೆ!
ನಿದ್ದೆಯೊಳಗಣ ನಿದ್ದೆ
ಎಚ್ಚರವೂ ನಿದ್ದೆ!
ನಿದ್ದೆ ಎದ್ದೆ, ಎದ್ದೆ ನಿದ್ದೆ
ಜೀವನವೇ ಸವೆಸಿದ್ದೆ
ಎದ್ದೆನೆಂದೀ ನಿದ್ದೆ
ಕೊನೆಗೂ ನಿದ್ದೆಯಲ್ಲೇ ಇದ್ದೆ!

ಮಾಂಡುಕ್ಯ ಹೇಳಿತ್ತು ಮೂರವಸ್ಥೆ
ಮುಂದಿಡುತ ನಾಲ್ಕನೆ ಅವಸ್ಥೆ
ಆದರೂ ನಿದ್ದೆಬಿಟ್ಟೇಳದೇ ಇದ್ದೆ
ಕನಸಿನಲ್ಲಿ ಕೇಳಿಸಿತ್ತು ಓಂಕಾರ
ಅಕಾರದಲ್ಲಿ ಎದ್ದೆನೆಂದಿದ್ದೆ
ಉಕಾರದಲ್ಲಿ ನಿದ್ದೆಯಲ್ಲಿದ್ದೆ
ಮಕಾರದಲ್ಲಿ ಸುಮ್ಮನಿದ್ದೆ
ಕೊನೆಗೂ ಓಂಕಾರವನರಿಯದೆ
ಮಲಗೇ ಇದ್ದೆ
ತುರಿಯವನರಿಯದೆ ಇದ್ದೆ
ಎದ್ದೆ ನಿದ್ದೆ, ನಿದ್ದೆ ಎದ್ದೆ
ಕನಸಿನಲ್ಲೇ ಕಳೆದಿದ್ದೆ ಎದ್ದೆನೆಂಬೀ ನಿದ್ದೆ
ನಿದ್ದೆಯೊಳಗಣ ನಿದ್ದೆ.

ಈ ಮೇಲಿನ ಕವನ ಈ ಕೆಳಗೆ ಹೇಳಿರುವ ಉಪನಿಷತ್ತಿನ ತುಣುಕಷ್ಟೆ!
ಯೋಗಿಯ ಮುಕ್ತಿಗೊಂದೇ ಸಾಕು ಮಾಂಡುಕ್ಯೋಪನಿಷತ್ ಎಂದಿರುವುದು ಇದರ ಹಿರಿಮೆಗೊಂದು ಗರಿ. ಆಧಿ ಶಂಕರರ ಗುರುಗಳಾದ ಗೌಡಪಾದರು ಇದಕ್ಕೆ ಕಾರಿಕೆಗಳ ರಚಿಸಿದ್ದಾರೆ ಎಂದಮೇಲೆ ಈ ಉಪನಿಷತ್ತಿನ ಮಹತ್ವ ಎಷ್ಟಿರಬೇಕು ಗಮನಿಸಿ. ಸರಳವಾಗಿ ಅವಸ್ಥಾತ್ರಯಗಳಾದ ಎಚ್ಚರ, ನಿದ್ರೆ, ಸುಷುಪ್ತಿಗಳ ಮೂಲಕ ಅರಿವಿಗೆ ನಿಲುಕದ ತುರಿಯವನ್ನು ಓಂಕಾರದೊಂದಿಗೆ ಹೋಲಿಸಿ ಸೃಷ್ಟಿಯನ್ನೇ ವಿಶ್ಲೇಷಿಸಿ  ಅಲ್ಲಗಳೆಯುವ ಅತ್ಯಮೂಲ್ಯವಾದ ಈ ವೇದಾಂತವನ್ನ ಜೀವನದಲ್ಲೊಮ್ಮೆ ಆದರೂ ಓದಲೇ ಬೇಕು. ದೇವರೆಂಬುವವನ ಹೆಸರನ್ನೇ ತರದೆ ದೈವಿಕತೆಗೆ ದೂಡುವ  ಪರಿಯೆ ಈ ಮಾಂಡುಕ್ಯದ ಮಹತ್ವ.

Life is but a dream within a dream. A dream of Vishnu sleeping deep in the infinite pealing ocean, says the scriptures. God may not be the dreams of men but men may be the dreams of God. It is the one you call it God, soul or consciousness or anything that is which dreams and whole universe appears to be manifested!

Apr 8, 2014

ಮಳೆ ಸುರಿಯಲಿ

ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ

ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ

ದಣಿದಿದೆ ದರಣಿ ಸುರಿಯಲಿ ಮಳೆಹನಿ
ಬಾಯಾರಿದೆ ಭುವನದಿ ಜೀವನ

ಸುರಿಯಲಿ ಮಳೆಹನಿ ಸುರಿಯಲಿ ಮಳೆಹನಿ
ಹಸಿರುಸಿರಲಿ ಚಿಗುರಲಿ ಮರಗಿಡ
ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ
ಮಳೆ ಸುರಿಯಲಿ ಮಳೆ ಸುರಿಯಲಿ.