ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು. ಮಗುವಿನ
ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ.
ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ ಬೇರೆಯಾಗಿತ್ತು ಆತನಿಗೆ ಮಗುವಿನ ದುಂಡನೆಯ
ಮೊಗ, ಹೊಳೆಯುವ ಕಣ್ಗಳು, ದೀಪದ ಬೆಳಕಿಗೆ ರೂಪುಗೊಂಡಿದ್ದ ಕಪ್ಪು ಬಿಳುಪಿನ ಸಂಯೋಜನೆಗಳು
ಹೀಗೆ ಇವೇ ಕಂಡು ಬಂದವು.ಅದರಲ್ಲೇ ಒಬ್ಬ ಅದ್ಯಾತ್ಮಿಕವಾದಿಗೆ ಮಗುವಿನ ಅಲೌಕಿಕ ನಗು ಗಮನ
ಸೆಳೆಯಿತು. ಕಾರಣವೇಯಿಲ್ಲದ ಕಾರ್ಯಗಳ ಆಚೆಗೆ ಮೂಡಿಬಂದ ಆ ನಗು ಮತ್ತು ಅದನ್ನು
ಚಿತ್ರೀಕರಿಸಲು ಸಾದ್ಯವಾದ ಮಾನವನ ಅವಿಷ್ಕಾರ ಅದರ ಹಿಂದಿನ ದೇವರ ಇರುವಿಕೆಯ ಅನುಭವ
ಅನನಿಗಾಯಿತು.
ವಸ್ತು ಒಂದೇ ಆದರೇನಂತೆ ನೋಡುವ ದೃಷ್ಟಿಗುಳು ವಿಧವಿಧವಾಗಿದೆ.
'''ನಿರ್ಲಿಪ್ತನಾಗಿ ಗಳಿಕೆಯ ಆಸೆಗಳಿಲ್ಲದೆ,ಯಾವುದೇ ಒಂದು ಕ್ಷೇತ್ರಕ್ಕೆ ಅಂಟಿಕೊಳ್ಳದೆ
ಒಂದು ವಸ್ತುವನ್ನು ನೋಡುವವನೇ ನಿಜವಾಗಿ ನೋಡುತ್ತಾನೆ'''. ನೋಡಿದ್ದನ್ನೆಲ್ಲಾ
ಕಾವ್ಯಕ್ಕಿಳಿಸಬೇಕೆನ್ನುವ ಕವಿ; ಕಂಡದನ್ನೆಲ್ಲ ಚಿತ್ರೀಕರಿಸಿ ಪ್ರತಿಷ್ಠೆ ಪಡೆಯಲು
ಪ್ರಯತ್ನಿಸುವ ಕಲಾವಿದ ಯಾವುದೋ ಒಂದು ವಿಧದಲ್ಲಿ ನಿಜವಾದ ನೋಟವನ್ನು
ಕಳೆದುಕೊಂಡವರಂತಾಗುತ್ತಾರೆ.
No comments:
Post a Comment