ತಂಪಾದ ಕಾನನದೊಳಿಂಪಾದ ಕೋಗಿಲೆಯ ಕೂಗು
ಅತ್ತಿತ್ತ ಸುತ್ತೆಲ್ಲ ಈಚಲು ಗುತ್ತಿಗಳ ಸೋಗು
ಏರಿ ಬರುತಲಿದೆ ದೂರದೂರಿನ ಭಕ್ತಸಾಗರವು
ಏಳು ಎದ್ದೇಳು ಏಳುಸಾವಿರ ಸೀಮೆ ಒಡೆಯ
ನಿನ್ನಡಿಗೆ ಬಿದ್ದಿಹೆವು ನೋಡು ದೇವರ ದೇವ
ದೇವರಮನೆ ಶ್ರೀ ಕಾಲಭೈರವ ದೇವ
ಕ್ಷೇತ್ರ ಪಾಲನೆ ನಿನ್ನ ಕ್ಷೇತ್ರದ ಅಂದ
ಅದನೇರಿ ಬರುವುದೆ ಚಂದ
No comments:
Post a Comment