ಕಾಡು,ಪ್ರಾಣಿ,ಪಕ್ಷಿಗಳು.... Computerಗಳು, Artificial Intelligenceಗಳು.. ಹಾರುವ ತಟ್ಟೆ-ಲೋಟಗಳು ಇನ್ನೂ ಏನೇನೊ....!! ತೋಚಿದ್ದು ಗೀಚಿದ್ದು.
May 17, 2016
ಈ ಕ್ಷಣ ಈ ಜನ
ವ್ಯಾಸಾಂಗ ಮುಗಿಸಿ ಹಲವು ವರ್ಷಗಳಾದ ಮೇಲೆ ನೀವು ನಿಮ್ಮ ಹಳೆಯ ಫೋಟೊ ಗಳನ್ನೊಮ್ಮೆ ನೋಡುತ್ತಿದ್ದೀರಿ ಅಥವಾ ಅದೇ ಹಳೆಯ ತರಗತಿ ಯೊಳಗೆ ಹೋಗಿದ್ದೀರಿ ಎಂದೆಣಿಸಿ. ಇವು ಯಾವುವೂ ನಿಮಗೆ ಆ ಕ್ಷಣ ಆ ಜನರನ್ನು ಮರಳಿ ಕೊಡಬಲ್ಲವೆ? ಜೀವನ ಎಷ್ಟು ವಿಚಿತ್ರ ಮತ್ತು ವಿಶೇಷ ಗಮನಿಸಿ. ಎಲ್ಲಾ ಚರಾಚರವೂ ಬದಲಾವಣೆ ಹೊಂದುತ್ತಿರುತ್ತವೆ ಈ ಜಗತ್ತಿನಲ್ಲಿ ಬದಲಾವಣೆಯೇ ಸ್ಥಿರವಾದ ವಸ್ತು. ಕಾಲನೇ ಎಲ್ಲರ ಎಲ್ಲದರ ಜನಕ ಎಲ್ಲದರ ಭಕ್ಷಕ. ನಾವು ನಮ್ಮವರು ಈ ಸಂಭಂದಗಳು ಎಲ್ಲವೂ ತಾತ್ಕಾಲಿಕ ಎಂಬ ಒಂದೇ ಕಾರಣದಿಂದ ಇವೆಲ್ಲ ಅತ್ಯಮೂಲ್ಯ ಎಲ್ಲದಕ್ಕೂ ಒಂದು ಬೆಲೆ. ಶಾಶ್ವತ ನಾವು ನೀವಲ್ಲದ ಕಾರಣ ಅಶಾಶ್ವತರಾದ ನಮ್ಮೊಳಗೆ ಪ್ರೀತಿ ಮೋಹ. ಟೂ ಸೈಡ್ಸ್ ಆಫ್ ಅ ಕಾಯಿನ್ ಆರ್ ಕಾಂಪ್ಲಿಮೆಂಟಿಂಗ್ ಈಚ್ ಅದರ್. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವ ಇಲ್ಲ. ಸಾವಿನಿಂದಲೇ ಜೀವನಕ್ಕೆ ಅರ್ಥ ಒಮ್ಮೆ ಯೋಚಿಸಿ. ನೀವು ಮತ್ತು ನಿಮ್ಮ ಸುತ್ತಲಿನ ಎಲ್ಲವೂ ಕಾಲನ ಕಾವಿಗೆ ಬಾಡುತ್ತಿರುವುದನ್ನು ಗಮನಿಸಿ. ಈ ಕ್ಷಣ ಈ ಜನ ಸುಂಧರ ವಾಗಿ ಅರಳಿನಿಂತಿಲ್ಲವೇ? ಹಾಗಿದ್ದಲ್ಲಿ ಈ ಗಳಿಗೆ ಈ ಗೆಳೆತನದಲ್ಲಿ ನೀವಾಗಿರಿ. ಮುಂದೊಂದು ದಿನ ಇದೇ ಶಾಲೆಗೆ ಮರಳಿದಾಗ ಸ್ಥಾವರ ನಿಂತಿರಬಹುದು ಕಂಬಗಳು ಮೇಜು ಕುರ್ಚಿಗಳು ಹಾಗೆಯೆ ಇರಬಹುದು ಆದರೆ ಆ ಕ್ಷಣ ಆ ಜನ ಆ ಒಡನಾಟ ಮರಳಿ ಬಂದೀತೆ?
Subscribe to:
Post Comments (Atom)
No comments:
Post a Comment