ಮನೆಗೆಷ್ಟು ಬೆಲೆ?
ನಾಳೆಸಾಯಲು ಹೊರಟ ರೋಗಿಯ ಕೇಳಿರಿ ನಿನ್ನೆಗಿತ್ತೆಷ್ಟು ಬೆಲೆ?
ಕಳೆಯುವ ಮುನ್ನ ಇರುವನು ಅರಿಯಿರಿ
ಬದುಕಲಿ ಮೊದಲು ಬೆರೆವುದ ಕಲಿಯಿರಿ
ಕಾಲನ ಒಡಲಿಗೆ ಕಳೆದವರು ಸಿಗುವರೆ
ವ್ಯರ್ಥದಿ ಕಳೆದ ಕಾಲವು ಮರಳುದೆ
ಸಾವಿನ ಸುಳಿಯಲಿ ಸಿಲುಕಿದವನಿಗಷ್ಟೆ ಗೊತ್ತು ನಿನ್ನೆಯು ಕಳೆದ ನಿಮಿಷದ ಬೆಲೆ
ಮನೆ ಮಠ ಇಲ್ಲದೆ ಬೀದಿಲಿ ಮಲಗಿಹ ತಿರುಕನಿಗಷ್ಟೆ ಗೊತ್ತು ಹೊದ್ದ ಕಂಬಳಿಯ ಬೆಲೆ!
No comments:
Post a Comment