Apr 22, 2026

ಬಾಸಮ್ಮನ ಭಕ್ತಿಯ ಬೆಳಕೊಂದೆ

 ಹಬ್ಬ ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು.. 

ಮುಂಗಾರು ಮಳೆಗೆ  ಜೀವ ಗೊಂಡ ಮಂಡೂಕ ವಟಗುವ ಪರಿ

ಸುಪ್ತವಾಗಿದ್ದ ಊರು ಸಾವಿರಗಳು ಜೀವ ತುಂಬಿವೆ. 

ತವರಿಗೆ ಮರಳಿದ ಮಕ್ಕಳು, ಕಂಕುಳ ಮರಿ ಪಿಳ್ಳೆಗಳು

ಚಿಲಿಪಿಲಿ ಗುಟ್ಟುತ ಅಳುತ ಚೀರುತ ಮುಡಿ ಕೊಡುವ ಗಮ್ಮತ್ತು. 

ಚಾಪೆಲಿ ಮಲಗಿ, ಚಪ್ಪಲಿ ತೊರೆದು, ಮಡಿ ಯಲಿ ಮಿಂದು, 

ತಿಂದು ತಂಬಿಟ್ಟು ಉಪವಾಸ ಮಿಕ್ಕೊತ್ತು. 


ತಾಯ ನೋಡಲು ಸೇರುವ ಜನ ಸಾವಿರ 

ವರುಷದಿ ಒಮ್ಮೆ ಹರ್ಷೋದ್ಗಾರ

ನೋಡಿ ಅಮ್ಮನ ಸಿರಿ ಸಿಂಗಾರ. 

ಹಗಲು, ಇರುಳು ಬನಸುಗ್ಗಿ, ಮುನ್ನ ನಡೆದ ಹೊನ್ನಾರ. 

ಮುಗಿಯದೆ ಹೋಗದೆ ಸುಗ್ಗಿ ಹಬ್ಬ!!

ಮುಡಿ ಇಳಿಯಲೊಲ್ಲರು ಅಮ್ಮಂದಿರು. 

ಬಿಟ್ಟು ಕಳಿಸುವ ಕಣ್ಣೀರು ಮಕ್ಕಳದು. 


ಮತ್ತೆ, ಬೇಸಿಗೆ ಮುಗಿದು, ಮಳೆ ಭಯಂಕರ

ಮಲೆನಾಡ ಮಳೆ, ಭೂ ಗರ್ಭದೊಳಗೆ ಇಳಿದರಷ್ಟೆ 

ವರುಷ ಪೂರ್ತಿ ಹರಿಯುವ ಹೊಳೆ. 

ಕೇಳ ಬೇಕಿಲ್ಲ ಮಳೆಯ ಆರ್ಭಟ

ಮುಂಗಾರು ಮುಗಿದು ಬದುಕಿ ಬರುವ ಪ್ರತಿವರ್ಷ

ನಮಿಸದಿರರು ಮಲೆನಾಡ ಸಪ್ತ ಮಾತೆಯರ,ಅಷ್ಟ ಭೈರವರ


ಹಬ್ಬ  ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು

ಇಲ್ಲದೆ ಹೋದರೆ ಏನಿದೆ ಜೀವನ? ನಶ್ವರ, ನಿರಾಕರ. 

ಬಾಸಮ್ಮನ ಭಕ್ತಿಯ ಬೆಳಕೊಂದೆ ಕತ್ತಲ ಅಡವಿಯ ಜೀವನಾಧಾರ🙏

#TripuraSaviraSuggi #HagaluSuggi #Jatre #23rdApril2026 #Today #Basamma #Sablamma #komaraswami #Balalikamma