Sep 26, 2012

೦=∞


ವಿಜ್ಞಾನ, ತರ್ಕ, ಸಿದ್ದಾಂತಗಳು ಕಲಿತಷ್ಟು ಕಠಿಣವಾಗಿ ದಿನೇ ದಿನೇ ಜಟಿಲವಾಗುತ್ತಿವೆ, ಉದಾಹರಣೆಗೆ  ನ್ಯೂಟನ್, ಕೆಪ್ಲರ್ ಸಿದ್ದಾಂತಗಳು ಆಕಾಶಕಾಯಗಳ ಗತಿಯನ್ನು ಗುರುತ್ವದ ತಳಹದಿಯ ಮೇಲೆ ವಿವರಿಸಿದೆ ಆದರೆ ಅದೇ ಸಮಯದಲ್ಲಿ ಗುರುತ್ವಕ್ಕೆ ಏನು ಕಾರಣ ಎಂಬ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಗುರುತ್ವಕ್ಕೆ ಕಾರಣ ಹುಡುಕುತ್ತಲೆ ಆ ಕಾರಣಕ್ಕೆ ಮತ್ತೊಂದು ಕಾರಣ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗೆ ಕಾರ್ಯ ಕಾರಣ ಸಿದ್ದಾಂತಗಳು ಎಲ್ಲೆ ಮೀರಿ ಬೆಳೆದು ನಿಂತು ನವಪೀಳಿಗೆ ತಮ್ಮ ಜೀವನದ ಅರ್ಧ ಭಾಗವನ್ನು ಕಲಿಕೆಯಲ್ಲೇ ಕಳೆಯ ಬೇಕಾಗಿದೆ.


ಧೈನಂದಿನ ವ್ಯವಹಾರದಲ್ಲಿ ಕೊಟ್ಟಿದ್ದು ತೆಗೆದುಕೊಂಡಿದ್ದು ಅಂತ ಲೆಕ್ಕ ಇಡಲು ಬೇಕಾಗಿ ಹುಟ್ಟಿದ್ದು ಸ್ವಾಭಾವಿಕ ಸಂಖ್ಯೆಗಳು ಒಂದು, ಎರೆಡು, ಮೂರು, ನಾಲ್ಕು ಅಂತ ಲೆಕ್ಕ ಹಾಕುತ್ತ ಹೋದ ನಾವು ತೆಗೆದು ಕೊಂಡದ್ದನೆಲ್ಲ ಕೊಟ್ಟಾಗ ಉಳಿದದ್ದೆ ಸೊನ್ನೆ(೦). ಹೀಗೆ ೦,,,,,,,೭... ಎಂಬ ಅಂಕಿ ಸಂಖ್ಯೆಗಳು ಜನ್ಮತಾಳಿ ಅಂತ್ಯವಿಲ್ಲದೆ ಮುಂದುವರೆದ  ಅನಂತತೆಗೆ ಹೆಸರೆ ಅನಂತ (∞). ಈ ಆಧುನಿಕ ಜಗತ್ತಿನಲ್ಲಿ ನಮ್ಮ ಆಟವು ಪ್ರಾರಂಭ, ಕೊನೆ ಎಂಬುದಿಲ್ಲದ ಬೆರಳೆಣಿಕೆಯ ಚಿನ್ಹೆಗಳೊಳಗೆ, ಶೇರ್ ಮಾರ್ಕೆಟೆ ಇರಲಿ, ಮಾಸ್ ಆಫ್ ದಿ ಆಟಮ್ ಇರಲಿ ಎಲ್ಲದರ ಆಟ ಅನಂತ ಎಂಬ ಬೌಂಡ್ರಿ ಒಳಗೆ ಆದರೆ ಈ ಬೌಂಡ್ರಿ ಕೈಗೆಸಿಗದಷ್ಟು ದೂರದಲ್ಲಿದೆ  ∞....-,-,-,-,-,-,,,,,,,೬....∞.

ಪರಿಪೂರ್ಣ ಎಂದು ನಂಬಲಾಗಿದ್ದ ಗಣಿತದಲ್ಲಿ ಅನಿಶ್ಚಯಗಳು ತಲೆಯೆತ್ತಿದಾಗ ಉದಾಹರಣೆಗೆ ಒಂದು ಸ್ವಾಭಾವಿಕಸಂಖ್ಯೆಯನ್ನು ಶೂನ್ಯದೊಡನೆ ವಿಭಾಗಿಸ ಹೋಗಿ ದಿಕ್ಕು ತೋಚದೆ ನೀಡಿದ ಚಿನ್ಹೆ ಅನಂತ ೧/೦=∞.
ಒಂದು ಅಂಕಿಯನ್ನು ಕೇಕ್ ಕತ್ತರಿಸಿದಂತೆ ಕತ್ತಿರಿಸಿ ಹಂಚ ಹೋಗಿ ಸೂಕ್ಷ್ಮದೆಡೆಗೆ ಜಾರಿ ಪಾಲು ಸರಿಯಾಗದ್ದು ಹೀಗೆ ೨೨/೭=೩.೧೪೨೮೫೭೧೪....?? ಆದರೆ ಒಂದಂತು ನಿಜ ಈ ಅಂಕಿ ಸಂಖೆಯ್ಯ ಅಪರಿಪೂರ್ಣತೆ ನಮಗೆ ಚಿಂತನೆಗೆ ಹಚ್ಚಬಲ್ಲ ನಮ್ಮನ್ನು ಪರಿಪೂರ್ಣತೆಗೆ ನಡೆಸಬಲ್ಲ ತತ್ವಗಳು.

ಪ್ರತಿಯೊಂದು ಅಣುವಿನಲ್ಲೂ ಅನಂತ ವಿಶ್ವ ಅಡಗಿದೆ ಎನ್ನುವ ವೇದಾಂತ ನಮಗೆಲ್ಲಗೊತ್ತಿದೆ. ಹಾಗಿದ್ದಲ್ಲಿ ಒಂದು ಧೂಳಿನ ಕಣ ಒಂದು ಗ್ಯಾಲಾಕ್ಸಿಗೆ ಸಮಾನ. ಉದಾಹರಣೆಗೆ ಒಬ್ಬ ಗಗನಯಾತ್ರಿ ನಮ್ಮ ಸೌರಮಂಡಲದ ಒಂದು ತುದಿಯಿಂದ ಪ್ರಯಾಣ ಬೆಳೆಸಿ ತನ್ನ ಪ್ರಯಾಣವನ್ನು ಒಂದು ಅತೀ ಸೂಕ್ಷ್ಮ ವಸ್ತುವನ್ನು ತಲುಪುವ ವರೆಗೆ ಮಾಡುವುದಾಗಿ ನಿರ್ಧರಿಸಿದ. ಆತ ತನ್ನ ಪ್ರಯಾಣವನ್ನು ಪ್ರಾರಂಬಿಸಿ ಎಲ್ಲಾ ಗ್ರಹಗಳ ಕಕ್ಷೆಯನ್ನು ಛೇದಿಸಿ ಭೂಮಿಗೆ ತಲುಪಿದ ಮುಂದೆ ಒಬ್ಬ ಮಾನವನೊಳಗೆ ಹೊಕ್ಕ ಮಾನವನ ಹೃದಯದೊಳಗೆ ಪ್ರವೇಶಿಸಿದ, ರಕ್ತದ ಕಣದೊಳಗೆ ಹೊಕ್ಕು ಇನ್ನೇನು ತನ್ನ ಪ್ರಯಾಣ ಮುಗಿತು ಅಂದ ಅಷ್ಟೆ ಆಗ ಅವನಿಗೆ ಅಲ್ಲಿ ಕಂಡದ್ದು ಒಂದು ಅಣು ಮುಂದೆ ಗೋಚರಿಸಿದ್ದು ಪೊಟ್ರಾನ್, ನಿವ್ಟ್ರಾನ್ ಗಳ ಅನಂತ ವಿಶ್ವ ಮತ್ತೆ ಅದೇ ಅಖಂಡ ಭಯಾನಕ ಖಗೋಳ. ಒಂದು ವೇಳೆ ೩/೦= ಹಾಗೆ ೯೯೯೯/೦=ಆದಲ್ಲಿ
೩/೦=೯೯೯೯/೦
ಆದಕಾರಣ
೩=೯೯೯೯
ಅಂಡಾಂಡ=ಬ್ರಮ್ಹಾಂಡ  
ಅಣುವಿನ ಆಳಕ್ಕೆ ಇಳಿಯುತ್ತಾ ಹೋದಂತೆ ವಿಶ್ವದ ಎತ್ತರಕ್ಕೆ ಏರುತ್ತ ಹೋಗುವ ನಮ್ಮ ವಿಜ್ಞಾನಿಗಳ ಪ್ರಯಣ ಇಪ್ಪತೆರೆಡನ್ನು ಏಳರಲ್ಲಿ ಭಾಗಿಸಿದಂತೆ ಇಲ್ಲಿ ೨೨ ಒಂದು ಅಣು ೭ ಅದನ್ನು ವಿಭಾಗಿಸಹೊರಟ ವಿಜ್ಞಾನಿಗಳ ತಂಡ ೨೨/೭=೩.೧೪೨೮೫೭೧೪....??.
ಇದರ ಬಗ್ಗೆ ಚಿಂತಿಸುವಾಗ ನಮ್ಮ ನೆನಪಿಗೆ ಬರುವುದು ಒಂದು ಪುರಾಣ ಕತೆ ಪಟಗಳಲ್ಲಿ ದೇವರನ್ನು ಪೂಜಿಸುವ ನಮಗೆ ಶ್ರೀಮನ್ ನಾರಾಯಣನ ನಾಬಿಯಲ್ಲಿ ಕಮಲದ ಹೂವು ಅದರ ಮೇಲೆ ಸೃಷ್ಟಿಕರ್ತ ಬ್ರಮ್ಮ ಇರುವುದು ಗೊತ್ತೇ ಇದೆ ಒಮ್ಮೆ   ಬ್ರಮ್ಮ  ತನ್ನ ಮೂಲವನ್ನು ತಿಳಿಯಲು ಕಮಲದ ಮೇಲಿಂದ ಬುಡಕ್ಕೆ ಇಳಿಯಲು ಪ್ರಾರಂಬಿಸಿದನಂತೆ ಹೀಗೇ ಮುಂದುವರೆದು ಕಲ್ಪಗಳೇ ಕಳೆದರು ಬುಡ ಸಿಗಲಿಲ್ಲ. ಪುನಃ ದಿಕ್ಕುಬದಲಿಸಿ ಬಂದದಾರಿಯಲ್ಲಿ ಹಿಂತಿರುಗಿದರೂ ಆರಂಭ ಸಿಗಲಿಲ್ಲ ಹೀಗೆ ಆಧಿ ಅಂತ್ಯ ವಿಲ್ಲದ ಅನಂತ ನಾಳದಲ್ಲಿ ಸಿಲುಕಿದ್ದ ಬ್ರಮ್ಮನಿಗೆ ಸತ್ಯದ ಜ್ಞಾನೋದಯ ವಾದಾಗ ಕಮಲದ ಮೇಲಿದ್ದನಂತೆ. ಬ್ರಮ್ಮನ ಪ್ರಯಣದ ದಾರಿ ಆ ಅನಂತ ಪಧ್ಮನಾಬಿ ನಮ್ಮ ತರ್ಕಕ್ಕೆ ನಿಲುಕಿದ್ದಲ್ಲಿ ಅದು ಇದು ∞....-,-,-,-,-,-,,,,,,,೬....∞. 

ಶೋನ್ಯ ಮತ್ತು ಅನಂತ ಎನ್ನುವ ಕಲ್ಪನೆಯು ವೇದಕಾಲದ್ದು ಭಾರತ ನೀಡಿದ ಶೂನ್ಯದ ಚಿನ್ಹೆ ಸರಿಸಾಟಿ ಇಲ್ಲದ ಸಮಗ್ರವಾದ ಪ್ರತಿರೊಪ. ಶೂನ್ಯಕ್ಕೆ ಪೂರ್ಣ ಎಂದಿದ್ದೂ ಉಂಟು ಒಂದೇ ಸಮಯಕ್ಕೆ ಇದು ನತಿಂಗ್ ಅಂಡ್ ಎವೆರಿತಿಂಗ್. ಒಮ್ಮೆ ಈ ಸೊನ್ನೆಯನ್ನು ಗಮನಿಸಿ ''. ಚಕ್ರಾಕಾರವಾದ ಇದು ಆಧಿ ಮತ್ತು ಅಂತ್ಯದ ಸಂಗಮ. ಗಾಡ್ ಕ್ರಿಯೇಟೆಡ್ ಎವೆರಿತಿಂಗ್ ಫ್ರಂಮ್ ನತಿಂಗ್ ಇದನ್ನೇ ವೈಜ್ಞಾನಿಕವಾಗಿ ಹೇಳುವುದಾದರೆ ಬಿಗ್ ಭ್ಯಾಂಗ್ ಮೊದಲು ಶೂನ್ಯ ನಂತರ ಅನಂತ ಪುನಃ ಶೂನ್ಯ ೦=∞.

ಅನಂತ ಪದ್ಮನಾಬ ಎಂಬ ಪವಿತ್ರನಾಮ ಭಜಿಸುವಲ್ಲಿ, ದೇವಾಲಯ ವನ್ನು ವೃತ್ತಾಕಾರವಾಗಿ ಸುತ್ತುವಲ್ಲಿ, ಗಡಿಯಾರದ ಮುಳ್ಳು ಪ್ರತಿಬಾರಿ ಸಂದಿಸುವಲ್ಲಿ, ಸೂರ್ಯ ಮುಳುಗಿ ಏಳುವಲ್ಲಿ, ವರ್ಷಾರಂಬದಲ್ಲಿ, ಅಧ್ವೈತದಲ್ಲಿ. ಆಕಸ್ಮಿಕ ಏನೆಂದರೆ ನಮಗೇ ತಿಳಿಯದಂತೆ ಅದೆಷ್ಟೋ ವಿಚಾರದಲ್ಲಿ ಶೂನ್ಯದಿಂದ ಅನಂತತೆಯ ಕಲ್ಪನೆ ನಮ್ಮೊಂದಿಗೆ ಬದುಕಿಬಂದಿದೆ ಆದರೂ ನಮಗೆ ಅದರ ಅರಿವಿಲ್ಲ ಇಂದಿನಿದಲಾದ್ರು ಬಿಟ್ಟಕಣ್ಣನ್ನು ತೆರೆದುನೋಡೋಣ.  
ಜಗತ್ತಿನ ಎಲ್ಲಾ  ಸಂಖ್ಯಾಪದ್ದತಿಯಲ್ಲಿ ಸಾಮಾನ್ಯವಾಗಿರುವ ಬೆರೆತು ಮರೆತು ಹೋದ ಭಾರತೀಯ 'ಚಕ್ರ'. ನಿಮ್ಮ ಕುತೂಹಲ ಕೆದಕಲು ಇಲ್ಲಿ ಪಟ್ಟಿಮಾಡಿದ್ದೇನೆ ಒಮ್ಮೆ ಕಣ್ಣು ಹಾಯಿಸಿ. ಇದನ್ನು ಪಟ್ಟಿ ಮಾಡುವಾಗ ನನಗೂ ನಂಬಲಾಗಲಿಲ್ಲ ಅದ್ರೂ ನಂಭಲೇ ಬೇಕು ಅಲ್ವ!!
ಇನ್ಕ್ರೆಡಿಬಲ್ ಇಂಡಿಯ!!!!    
                        


                  0             1             2             3             4             5             6             7             8             9
Arabic         ٠             ١             ٢             ٣             ٤             ٥             ٦             ٧             ٨             ٩
Bengali       ০     ১     ২     ৩    ৪     ৫     ৬    ৭     ৮    ৯
Chinese     〇           一           二           三           四           五           六           七           八           九
Devanagar  ०      १      २      ३      ४      ५      ६      ७      ८    ९
Ge'ez                                                                                                                       
Gujarati        ૦       ૧       ૨       ૩       ૪       ૫       ૬       ૭       ૮       ૯
Gurmukhi      ੦        ੧        ੨        ੩        ੪        ੫        ੬        ੭        ੮        ੯
Kannada         ೦        ೧        ೨        ೩        ೪        ೫        ೬        ೭        ೮        ೯
Khmer                                                                                                                      
Lao                  ໐         ໑         ໒          ໓         ໔          ໕          ໖         ໗         ໘         ໙
Malayalam   ൦    ൧   ൨   ൩   ൪   ൫    ൬   ൭   ൮   ൯
Mongolian                                                                                    
Oriya            ୦          ୧          ୨          ୩          ୪          ୫          ୬          ୭          ୮          ୯                                   
Roman                        I              II             III           IV           V             VI           VII          VIII         IX
Tamil        ௦     ௧     ௨    ௩    ௪     ௫    ௬    ௭     ௮    ௯
Telugu        ౦        ౧        ౨        ౩         ౪        ౫        ౬        ౭         ౮        ౯
Thai            ๐                  ๑                  ๒                 ๓                 ๔                 ๕                 ๖                 ๗                 ๘                 ๙
Tibetan                                                                                                                                            
Urdu           ۰             ۱             ۲             ۳             ۴             ۵             ۶             ۷             ۸             ۹



 ಪೂರ್ಣಮದಂ ಪೂರ್ಣಮಿದಂ ಪೂರ್ಣತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೆ ||

  (ಅದೂ[ಜಗನ್ನಿಯಾಮಕ ಶಕ್ತಿ] ಪೂರ್ಣ, ಇದೂ[ಜಗತ್ತು] ಪೂರ್ಣ, [ಆ] ಪೂರ್ಣದಿಂದಲೇ [ಈ] ಪೂರ್ಣವು ಬಂದಿದೆ, ಪೂರ್ಣದಿಂದ[ಜಗನ್ನಿಯಾಮಕ ಶಕ್ತಿ] ಪೂರ್ಣವು[ಜಗತ್ತು] ಬಂದ ನಂತರವೂ ಪೂರ್ಣವೇ [ಜಗನ್ನಿಯಾಮಕ ಶಕ್ತಿ ಪೂರ್ಣವಾಗಿಯೇ]  ಉಳಿಯುತ್ತದ)
).

3 comments: