ಚಿತ್ರದಲ್ಲಿರೊ ಈ ಪುಣ್ಯಾತ್ಮರುಗಳು ಯಾರು ಅಂತ ತಿಳಿತಾ?
ಇಲ್ಲ ಅಲ್ವಾ?
ಒಂದೆ ಮಾತಲ್ಲಿ ಹೇಳಿದ್ರೆ "They are friends " ಎಡಬದಿಯಲ್ಲಿ ಕಾಣಿಸೊದು ಕೆನ್ ತಾಮ್ಸನ್ ಬಲಕ್ಕೆ ಡೆನಿಸ್ ರಿಚಿ.
'ಯಾರ್ರೀ ಇದು ರಿಚಿ-ಗಿಚಿ ಅಂತಿರಾ'? ಅಂದ್ರಾ..
ಇವರುಗಳು ಮತ್ಯಾರು ಅಲ್ಲಾ ಕಂಪ್ಯೂಟರ್ ಅನ್ನೊ ಕಾಲಿ ಡಬ್ಬಿಗೆ ಜೀವ ತುಂಬಿ, ಹಣೆಬರಹ ಬರೆದು, ನಮ್ಮಂತ ಸಾವ್ರಾರು ಜನ ದುಡಿತಾ ಇರೊ ಇವತ್ತಿನ ಸಾಫ್ಟ್ವೇರ್ ಫೀಲ್ಡ್ ಸೃಷ್ಟಿಸಿದ ಸೃಷ್ಟಿಕರ್ತರು.
C ಇವತ್ತಿಗೂ ಎಂಥಾ ಒಂದು ಪವರ್ ಫುಲ್ ಪ್ರೊಗ್ರಾಮಿಂಗ್ ಲಾಂಗ್ವೇಜ್ ಗೊತ್ತ?
ಈ ಪ್ರಶ್ನೆಗೆ ಉತ್ತರ ಬೇಕಿದ್ರೆ ಒಬ್ಬ ಸಿಸ್ಟಮ್ ಸಾಫ್ಟ್ವೇರ್ ಕರ್ತೃ ವನ್ನ ಪ್ರಶ್ನಿಸಿ ನೋಡಿ..
ಇಲ್ಲಾ ಅಂದ್ರೆ ಡಿವಯ್ಸ್ ಡ್ರೈವರ್ ಬರೆತಾ ಇರೊ ವ್ಯಕ್ತಿಯನ್ನ ಕೇಳಿ ನೋಡಿ.
ಇಂಥಹ C ಅನ್ನ ಸೃಷ್ಟಿ ಮಾಡಿದ್ದು ಈ ಗೆಳೆಯರೆ. ಇದೇ C ನಲ್ಲಿ ೧೯೬೯ ರಲ್ಲಿ 'ಯುನಿಕ್ಸ್' ಎಂಬ ಆಪರೇಟಿಂಗ್ ಸಿಸ್ಟಮ್ ಬರೆದು ಅದರ ಸೋರ್ಸ್ ಕೋಡನ್ನ ಉಚಿತವಾಗಿ ಹೊರಬಿಟ್ಟು ಯಾವುದೆ ಪ್ರತಿಫಲ ಬಯಸದೆ ಇದ್ದದ್ದೂ ಇವರುಗಳ ದೊಡ್ಡ ಮನಸ್ಸು ದೂರದೃಷ್ಟಿ.
ಬಿಲ್‍ಗೇಟ್ಸ್ ನಂತೆ ಅಂದು ಈ ಡೆನಿಸ್ ಅಜ್ಜ ಎಲ್ಲಾದ್ರು ಯುನಿಕ್ಸ್ ಅನ್ನ ಹಣಕ್ಕಾಗಿ ಮಾರಿದ್ರೆ ಅವ್ರು ಇವತ್ತು ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರ್ತಾ ಇದ್ರು, ಮಾತ್ರವಲ್ಲ ಈ ಲಿನಕ್ಸ್, ಸೊಲಾರಿಸ್, ಉಬುಂಟು, ತಗ್ಗುಂಟು ಎಲ್ಲಾ ಹುಟ್ಟಿಕೊಳ್ತನೆ ಇರ್ಲಿಲ್ಲ ಬಿಡಿ. ಎಲ್ಲಾ ಇರ್ಲಿ ಈ ಓಪನ್ ಸೋರ್ಸ್ ಅನ್ನೊ ಕ್ರೇಸೇ ನಮ್ಮ್ ಜನಕ್ಕೆ ಇರ್ತಾ ಇರ್ಲಿಲ್ಲ.
ಅಕ್ಟೊಬರ್ 5, 2011 ಸ್ಟೀವ್ ಜಾಬ್ಸ್ ನಮ್ಮನ್ನೆಲ್ಲ ಅಗಲಿದ ದಿನ. ನಮಗೆಲ್ಲ ಗೊತ್ತೇ ಇದೆ, ಅದೇ ತಿಂಗಳಲ್ಲಿ ಇಹಲೋಕ ತ್ಯಜಿಸಿದ ಇನ್ನೊಬ್ಬ ವ್ಯಕ್ತಿ ಈ ಡೆನಿಸ್ ಅಜ್ಜನ ಬಗ್ಗೆ ಯಾರಿಗಾದ್ರು ಗೊತ್ತಿತ್ತ? ಇಲ್ಲ ಅಲ್ವ, ಏಕೆ?
ಜಗತ್ತಿನ ಮರೆಯಲಾಗದ ಪ್ರೇಮ ಕತೆ 'ಟೈಟಾನಿಕ್' ಆದ್ರೆ ನನ್ನಪಾಲಿಗೆ ಜಗತ್ತಿನ ಮರೆಯಬಾರದ ಗೆಳೆತನ ಈ ಅಜ್ಜಂದಿರದ್ದು.
ನನಗಂತು ಇವರುಗಳು ರೋಲ್ ಮಾಡೆಲ್!
ನಿಮ್ಗೆ?
enu sundaravaada pada baLake vidyA ravare,
ReplyDelete"ಕಂಪ್ಯೂಟರ್ ಅನ್ನೊ ಕಾಲಿ ಡಬ್ಬಿಗೆ ಜೀವ ತುಂಬಿ, ಹಣೆಬರಹ ಬರೆದು, ನಮ್ಮಂತ ಸಾವ್ರಾರು ಜನ ದುಡಿತಾ ಇರೊ ಇವತ್ತಿನ ಸಾಫ್ಟ್ವೇರ್ ಫೀಲ್ಡ್ ಸೃಷ್ಟಿಸಿದ ಸೃಷ್ಟಿಕರ್ತರು."
aha idannu Odi manassu thumbi banthu..
Dennis matthu Thompson ajjanige saastaanga namaskaragalu..
:-)
ReplyDelete