Jan 21, 2013

ಮಲೆನಾಡಲ್ಲೊಂದು ಅಂಗ್ಡಿ



ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.
ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಉಗ್ಗೆಳ್ಳಿ ಅಂಗ್ಡಿ.
ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ.
ಇಂದು ಅದು ಉಗ್ಗೆಳ್ಳಿ ಅಂಗ್ಡಿ, ಇದೇ ಹಳೆಯ ಹೊಯ್ಸಳ ರಾಜದಾನಿ.
ಮುಂದೆ ರಾಜದಾನಿ ಬೇಲೂರಿಗೆ ಶಿಫ್ಟ್ ಆಗಿತ್ತಷ್ಟೆ!!

ಇವತ್ತಿನ ಅಂಗಡಿ ಹಳೆಯ ಸೊಸೆಊರಿನಂತಿಲ್ಲ ಇಲ್ಲಿ ಇಂದು ಕಾಣಸಿಗುವುದು ಅಳಿದುಳಿದ ದೇವಾಲಯಗಳು, ಅಸ್ಪಷ್ಟ ಶಾಸನಗಳು, ಶಿತಿಲಗೊಂಡ ಶಿಲ್ಪಗಳು. ನಿಮಗೆ ಗತ ವೈಭವದ ಮೆಲುಕು ಹಾಕಲು ಬೇಕಿದ್ದಲ್ಲಿ ಸ್ವಲ್ಪ ವರ್ಕ್ ಅವ್ಟ್ ಮಾಡ್ಬೇಕಾಗಬಹುದು!!. ತಂಪಾದ ಕಾಫಿತೋಟದೊಳಗೆ ನುಸುಳಿ, ತಲೆಗೆ ಮಡ್ಡೆ ಹೊಡೆಯದಂತೆ ಬಗ್ಗಿಕೊಂಡು ಸಂಚರಿಸಿ ಅಲ್ಲಿಲ್ಲಿ ಹಂಚಿಹೋಗಿರುವ ಶಾಸನಗಳ ಮತಿಸಬೇಕಾಗಬಹುದು. ಇದರಲ್ಲೂ ಒಂದು ತೃಪ್ತಿ ಇದೆ ಅಲ್ವಾ?.

ಅಂಗಡಿಗೆ ಬೇಟಿ ಇತ್ತವರಿಗೆ ಮನ ವರಿಕೆಯಾಗುವ ಪ್ರಮುಖ ವಿಷಯ ಇಲ್ಲಿಯ ಜನರ ಸರಳ ಸಜ್ಜನಿಕೆ, ಇನ್ನೂ ಮಾಸದ ಮಣ್ಣಿನ ಕ್ಷಾತ್ರ ತೇಜ, ಮಲೆನಾಡ ಸುಂದರ ಪರಿಸರ.

ಮುಂದೊದು ದಿನ ನೀವು ಬೇಲೋರಿಗೆ ಬಂದಲ್ಲಿ ಅಂಗಡಿಗೆ ಬರಲು ಮರೆಯಬೇಡಿ. ಬೇಲೂರು ಇವತ್ತಿನ ಬೆಂಗಳೂರು ಅಂದ್ಕೊಂಡ್ರೆ ಅಂಗ್ಡಿ ಅಂದಿನ ಮೈಸೂರು!!!

ಅಂಗಡಿ ತಲುಪುವುದು ಹೇಗೆ??
ಮಂಗಳೂರಿಂದ ಬರುವವರಿಗೆ
ಚಾರ್ಮಡಿ->ಕೊಟ್ಟಿಗೆ ಹರ->ಮೂಡಿಗೆರೆ-> ಜೆನ್ನಾಪುರ->ಅಂಗ್ಡಿ.
ಬೆಂಗಳೂರಿಂದ ಬರುವವರಿಗೆ
ಹಾಸನ -> ಬೇಲೂರು ->ಮೂಡಿಗೆರೆ (ಜೆನ್ನಾಪುರ)->ಅಂಗ್ಡಿ

 ಶ್ರೀ ಆದಿ ಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ ಅಂಗಡಿ

ಮೊದಲಿಗೆ ತಾಯಿ ವಸಂತ ಪರಮೇಶ್ವರಿ ದರ್ಶನ 

ಗುಡಿಯೊಳಗೆ ತೋರುವ ಶಿವಲಿಂಗ

 ಶ್ರೀ ತ್ರೀ ತೀರ್ಥಂಕರ ಬಸದಿ

ಚೆನ್ನಕೇಶವ ಸ್ವಾಮಿ

                                                                 ಭಗವಾನ್ ಮಹಾವೀರ

                                             ದೇವಾಲಯಗಳ ಹಿಂಬದಿಯ ಕೆತ್ತನೆಗಳು ಕಂಡದ್ದು ಹೀಗೆ   


ಕಾಫಿ ತೋಟದೊಳಗಿರುವ ದೇವಾಲಯಗಳಿಗೆ ಹತ್ತಿಬರಲು ಮೆಟ್ಟಿಲುಗಳು

                                                  ನವೀಕರಿಸಲ್ಪಡುತ್ತಿರುವ ದೇವಾಲಯಗಳು

ದೂರದಲ್ಲಿ ನಿಂತು ದಿಟ್ಟಿಸಿದಾಗ  

ಇದು ನನ್ನ್ ತಂಗಿ ಕ್ಲಿಕ್ಕಿಸಿದ ಸುಂದರ ಚಿತ್ರ...
Back to Home…ಆಗ್ಲೆ ಸಂಜೆಯಾಗಿದೆ.. 

 

No comments:

Post a Comment