ಸರಾಗವಾಗಿದ್ದ
ಸಹ್ಯಾದ್ರಿ
ಇಬ್ಬಾಗವಾಗಿದೆ.
ಭೀತಿ ಇಲ್ಲದೆ
ಸಂಚರಿಸುತಿದ್ದ ವನ್ಯ ಸಂಕುಲಕ್ಕೆ
ಜೀವ ಭಯ ಬಾದಿಸಿದೆ.
ಸ್ವತಂತ್ರವಾಗಿ
ಹಾರುತಿದ್ದ ಹಕ್ಕಿಗಳು
ವಿದ್ಯುತ್ ತಂತಿ
ತೊಡರಿ ಸಾಯಬೇಕಾಗಿದೆ.
ಸಹ್ಯಾದ್ರಿ ಹರಿದು
ಹಂಚಿ ಅಂಟಿಸಲಾಗದ ಗಾಯವಾಗುತ್ತಿದೆ
ಆದರೂ ವಿದ್ಯುತ್
ಹರಿಯುತ್ತಲೇ ಇದೆ.
ಬೇಲಿಯೆ ಎದ್ದು ಹೊಲ
ಮೈದಾಗ ನಂಬುವುದಾರನ್ನು.
ಸರ್ಕಾರದ ಒಳ್ಳೆ
ಕೆಲಸಕ್ಕೆ ಕುದುರೆ ಮುಖಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಇನ್ನೂ ಅನೇಕ ಒಳ್ಳೆ
ಕೆಲಸ ಮಾಡಲು ಹೊರಟಿರುವ
ಸರ್ಕಾರವನ್ನ
ನಿಲ್ಲಿಸುವವರಾರು.
ನೊಂದವರಿಗೆ ನ್ಯಾಯ
ನೀಡಬಲ್ಲ ಕೋರ್ಟ್ ಇದ್ರೆ ಹೇಳಿ
ಕಾಡಾನೆ ಕಾಯ್ತಾ
ಇವೆ.
ಪಾಪ ಅವಕ್ಕೆ ನಮ್ಮ
ಖಡತಗಳ, ಕಾಂಸ್ಟಿಟ್ಯೂಷನ್ಗಳ ಜ್ಞಾನ
ಇಲ್ಲ.
ಅಂದು ಬರೆದವುಗಳು..
ಪ್ರಯೋಜನಕ್ಕೆ
ಬಾರದೆ ಅವ್ಟ್ ಡೇಟೇಡ್ ಆಗಿವೆ. ಮಾಹಿತಿಗಿರ್ಲಿ ಅಂತ.
ಇಂದನ ಪರಿಸ್ಠಿತಿ
ಹೀಗಿದೆ.. ನಾಳೆ, ಯೋಚಿಸುವುದೂ ಕಸ್ಟ.
ಬಾರಿಮಲೆಯ ಒಂದು ಸುಂದರ ದೃಶ್ಯ |
ಗೂಗಲ್ ಮ್ಯಾಪ್ - ಪರ್ವತಕೇಂದ್ರಿತ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ. |
ಗೂಗಲ್ ಮ್ಯಾಪ್ - ಉಪಗ್ರಹ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ. |
ಟವರ್ನ ಬುಡದಲ್ಲಿ ಮಬ್ಬಾಗಿ ಕಾಣುವ ಅಪರಿಚಿತ ವ್ಯಕ್ತಿಗಳು |
ಹಸಿರು ಹಾಸಿನ ಮೇಲೆ.. ಕೆದಕಿದ ಕೆಮ್ಮಣ್ಣು.. |
ಸರಪಣಿಯಂತೆ ಕಾಣುವ ವಿದ್ಯುತ್ ಟವರುಗಳು |
ಟವರ್ ಹತ್ತಿರದ ನೋಟ |
ಗೂಗಲ್ ಮ್ಯಾಪ್ ಇಲ್ಲಿದೆ.
ಗೂಗಲ್ ಮ್ಯಾಪ್ ದೊಡ್ಡದಾಗಿಸಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment