ಅಂದೊಂದು ಮದುವೆಯಲಿ
ನಿಂತು ತೆಗೆಸಿದ ಚಿತ್ರ;
ಅಜ್ಜಿ ತಾತರು ಮಾವ ನೆಂಟರು
ಇನ್ನು ಅನೇಕರು;
ಮದ್ಯ ತಾ ನುಸುಳಿ ನಕ್ಕೊಡನೆ
ತೆಗೆದ ಚಿತ್ರ ನಗುತಲಿದೆ ಸದಾ;
ಮಾಡಿನಡಿಯಲ್ಲಿ ಸಕ್ಕಿದ್ದ ಚಿತ್ರ;
ಸ್ವಲ್ಪ ಹರಿದಿದೆ ಬಣ್ಣ ಕದಡಿದೆ
ಆದರೂ ನಗುತಿದೆ ಹಾಗೇ ಸ್ವಲ್ಪ;
ಮೆಲುಕಿದರು ನೆನಪುಗಳ
ಸಿಗಲಿಲ್ಲ ಚಿತ್ರ;
ನೋಡಲೆಂದರೆ ಅವರು ಇರುವರೇ ಹತ್ರ;
ಕಾಲ ಗತಿಸಿದೆ ದೇಹ ಕ್ಷೀಣಿಸಿದೆ
ನೆನಪುಗಳು ಮಬ್ಬಾಗಿದೆ;
ಆದರೂ ಚಿತ್ರ ನಗುತಿದೆ;
ತಾತ ಅಜ್ಜಿಯ ಮುಖವು ಅರಳಿದೆ.
ಅಂದೊಂದು ಮದುವೆಯಲಿ ನಿಂತು ತೆಗೆಸಿದ ಚಿತ್ರ
ಸದಾನಗುತಿದೆ.
No comments:
Post a Comment