Jul 1, 2014

ಬಟರ್ ಫ್ಲೇ ಎಫೆಕ್ಟ್



ಚಿಕ್ಕ ಚಿಟ್ಟೆಯ ರೆಕ್ಕೆಯ ಬಡಿತ
ಹಬ್ಬಿಸೀತು ಚಂಡ ಮಾರುತ
ಚಿಕ್ಕ ಚಿಂತೆ ಮನದಿ ಕೊಳೆತು
ಚಿತೆಗೆ ಹತ್ತಿಸೀತು ಬೆಂಕಿ
ಚೊಚ್ಚಲ ನಗುವ ಮುಖದ ಮನುಜ
ನಗಿಸಿಯಾನು ಜಗವ ಒಸುಗ
ಬೆಳೆಯುವಾಗ ಬಿದಿರೂ ಸಸಿ
ಗಿಡದಿ ಮರ ಮರದಿ ಹೆಮ್ಮರ
ಹಣಿಯದಿರು ಚಿಕ್ಕದೆಂದು
ಮರುಗದಿರು ಮನದಿ ಎಂದು
ಮರುಕ ಅದೆ ಬೆಳೆದು ಮುಂದೆ
ಬಾದಿಸೀತು ಬೆನ್ನಹಿಂದೆ
ಚಿಂತೆ ಬಿಟ್ಟು ನಗುವ ತೊಟ್ಟು
ಬದುಕ ನಡೆಸು ಹೃದಯ ಮಿಡಿಸು
ಇರುವುದೊಂದೆ  ಒಂದು ಬಾಳು
ಕಳೆದು ಕೊಳೆ ಬಾರದಿರದು ನೋಡು



Inspired by Chaos theory and psychological phenomenon’s

“As small as the flutter of a butterfly's wing can ultimately cause a typhoon halfway around the world” - Chaos Theory

No comments:

Post a Comment