Mar 29, 2016

ಟಾವ್ ಟೆ ಚಿನ್ಗ್

'ಟಾವ್ ಟೆ ಚಿನ್ಗ್' ಇದು ಚೀನೀಗಳ ಶ್ರೇಷ್ಠ ಗ್ರಂಥ. ಇದೊಂದು ಚೀನಾದೇಶದ ಉಪನಿಷದ್ ಎಂದರೆ ತಪ್ಪಿಲ್ಲ. ಲಾವ್ ಟ್ಸೊ ಎಂಬ ಚೀನೀ ಪುರುಷ ಇದರ ಕರ್ತೃ ಎಂದು ನಂಬಲಾಗಿದೆ. ಲಾವ್ ಟ್ಸೊ ತನ್ನ ಸಮಗ್ರ ಜ್ಞಾನವನ್ನೇಲ್ಲಾ ಬರೆದಿಟ್ಟು ಹೋಗು ಎಂದು ಜನರು ಬೇಡಿಕೊಂಡಾಗ ಈ ಮೇಧಾವಿ ಪುರುಷ 'ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ' ಎಂಬ ಉಪನಿಷತ್ತಿನ ಮಾತಿನಂತೆ ಆ ನಿಜ ಜ್ಞಾನವನ್ನು ಹೀಗೆ ಬರೆಯುತ್ತಾ ಹೋಗುತ್ತಾನೆ..
'ನಾನು ಇನ್ನು ಮುಂದೆ ಹೇಳಹೊರಟಿರುವುದನ್ನು ಸ್ಸದ್ಯಕ್ಕೆ ಟೊ ಎಂದು ಕರೆಯುತ್ತೇನೆ. ಟೊ ಎಂಬುದು ಒಂದು ರಾಂಡಮ್ ಆಗಿ ಹೊಳೆದಪದ.

ಅಧ್ಯಾಯ-1
ಯಾವುದು ಹೇಳಲು ಮತ್ತು ಕೇಳಲು ಸಾದ್ಯವೋ ಅದು ನಿಜವಾದ ಟೊ ಅಲ್ಲ. ಅದನ್ನು ಹೆಸರಿಸಲು ನಿಜವಾಗಿ ಸ್ಸದ್ಯವಿಲ್ಲ.
ಆ ಅನಾಮದೇಯವೇ ಈ ಸಮಗ್ರ ಸೃಷ್ಠಿಯ ಮೂಲ. ಹೆಸರಿಸಲು ಸಾದ್ಯವಾದರೆ ಅದು ಪ್ರಕೃತಿ. ಮನಸ್ಸು ತಟಸ್ಥವಾಗಿ ಯಾವೊಂದು ಭಯಕೆಯಿಲ್ಲದೆ ತನ್ನ ನಿಜಸ್ವರೂಪದಲ್ಲಿದ್ದಾಗ ಆ ಟೊ ವನ್ನು ಕಾಣಬಲ್ಲ. ಅದೆ ಮನಸ್ಸು ಚಂಚಲವಾದಗ ಕಾಣುವುದೆಲ್ಲ ಅದರ ಪ್ರಕೃತಿ. ಈ ಪುರುಷ ಮತ್ತು ಪ್ರಕೃತಿಯನ್ನು ಯಾರು ಅರಿಯುತ್ತಾರೋ ಅವರು ಎಲ್ಲವನ್ನೂ ಅರಿಯುತಾರೆ.

No comments:

Post a Comment