Mar 31, 2016

ವೃಕ್ಷ

ನಾನೆಳೆಯನಿದ್ದಾಗ ನೀ ಬೆಳೆಯುತಿದ್ದಿ
ನಿನ್ನ ತೊಳಿಗೆ ನನ್ನ ಜೋಕಾಲಿ ತೂಗಿದ್ದಿ
ಕಿಟಕಿ ಇಣುಕಿ ನಾ ನಿನ್ನ ಕಂಡಾಗ
ಬಸ್ಸು ಮುಂದೆ ನೀ ಹಿಂದೆ ಓಡಿದ್ದಿ
ಓಡಿದ್ದು ನಾನೇ ನೀ ನಲ್ಲೇ ಉಳಿದಿದ್ದಿ
ಬದುಕೆಲ್ಲ ಓಡಿ ದಣಿದು ತಲುಪದೆ ಮತ್ತೆಲ್ಲೂ
ಮರಳಲು ಮನೆ ಕಡೆಗೆ ನೀನಲ್ಲೆ ಕುಳಿತಿದ್ದಿ
ನಿನ್ನ ಮುಂಡವ ಕತ್ತರಿಸಿ ರುಂಡವ ಬಿಟ್ಟಿಹರೆ
ಓನನ್ನ ಬಾಲ್ಯದ ಸವಿನೆನಪೆ ನೀನೆಲ್ಲಿ?
ಬಾರಿ ಎತ್ತರಕ್ಕೆ ಬೆಳೆದವ ಗತ್ತಿನಲಿ ನಿಂತವ
ಸದಾ ನಮ್ಮ ಅಣಕಿಸುತ ಬಾಲ್ಯ ಬಂಗಾರ ಮಾಡಿದವ ನಿನ್ನ ಋಣವ ಹೊರಿಸಿ ಹೋದೆ ಎಲ್ಲಿ?
ಮಲಗಿದ್ದ ಮೊಮ್ಮಗ ಗಕ್ಕನೆ ಎದ್ದು
ಬಸ್ಸಿನ ಕಿಟಕಿಯ ಇಣುಕಿ
ಅಜ್ಜ ನೋಡಲ್ಲಿ ಮರವೇಕೆ ಓಡಿಹುದು?
ನಿಂತಲ್ಲಿ ನಿಲ್ಲದೇ?



No comments:

Post a Comment