ಜೀವನದಲ್ಲಿ ನಡೆಯುವ ಸಕಲ ಆಗು ಹೋಗುಗಳು ನಮ್ಮ ಹಿಡಿತದಲ್ಲಿ ಇಲ್ಲ ಎಂಬುದು ಸಮಾನ್ಯ ವಾಗಿ ಎಲ್ಲರೂ ನಂಬಿರುವ ವಿಚಾರ. ನಮ್ಮ ಹಿಡಿತಕ್ಕೆ ನಿಲುಕದ ಬದುಕಿನ ಘಟನೆಗಳಿಗೆ ವಿಧಿಯಾಟ ಅನ್ನುವ ಒಂದು ಹೆಸರನ್ನೋ ನೀಡಿದ್ದೇವೆ. ಇಲ್ಲಿ ವಿಚಾರ ಮಾಡ ಹೊರಟ ವಿಷಯವೂ ಅದೇ. ವಿಧಿಯಾಟ ನಿಜವೆ? ಅಥವಾ ನಾವೇ ಸೃಷ್ಠಿಸಿಕೊಂಡಿರುವ ಸಾಮಾನ್ಯವಾಗಿ ಅರಿವಿಗೆ ಎಟುಕದ ಬ್ರಮೆಯೆ?
ಸದ್ಯಕ್ಕೆ ಕನಸನ್ನೇ ತೆಗೆದುಕೊಳ್ಳಿ ಕನಸಿಗೂ ಮತ್ತು ಎಚ್ಚರ ಅಂದುಕೊಡ ಈ ಸ್ಥಿತಿಗೂ ನಿಜವಾಗಿ ಯಾವುದೇ ಭೇದವಿಲ್ಲ ಎರೆಡೂ ಬ್ರಮೆಯೆ ಎರೆಡೂ ಮಾಯೆಯೆ ಎಂದು ತಮ್ಮ ಮಾಂಡುಕ್ಯ ಕಾರಿಕೆಯಲ್ಲಿ ನುಡಿದವರೆ ಆಧಿ ಶಂಕರರ ಗುರುಗಳಾದ ಗೌಡಪಾದರು. ಕನಸಿನಲ್ಲಿ ಕಂಡುಬರುವ ರಸ್ತೆ,ಕಾರು,ನಾಯಿ,ನರಿ,ತಿಂಡಿ ತಿನಿಸುಗಳು ಕನಸಿನಲ್ಲಿದ್ದಾಗ ಎಲ್ಲವೂ ನಿಜವೇ. ಅಲ್ಲಿ ಅನುಭವಿಸಿದ ಸುಖದುಃಖಗಳೂ ನಿಜವೆ. ಅಲ್ಲಿ ಕಂಡ ಸಹಪಾಠಿ ಅವನೊಡನೆ ನಡೆದ ಮಾತು ಕತೆ ಎಲ್ಲವೂ ನಿಜವೆ. ಆದರೆ ನಿದ್ದೆಯಿಂದ ಎದ್ದ ಬಳಿಕ ತಿಳಿಯುವುದು ಇವೆಲ್ಲ ತನ್ನದೇ ಸೃಷ್ಠಿ ಅಲ್ಲಿದ್ದದ್ದು ತನ್ನ ಹೊರತು ಮತ್ತೊಂದಿಲ್ಲ. ತಿನಿಸೋ ನಾನೆ,ತಿಂದವನೂ ನಾನು, ತಿನ್ನಲು ಕೊಟ್ಟಾತನೂ ತಾನೆ. ಈ ದೃಷ್ಠಿಯಿಂದ ಗಮನಿಸಿದಲ್ಲಿ ಕನಸು ತನ್ನದೇ ಸೃಷ್ಠಿ. ತನ್ನ ಸುಪ್ತ ಸಂಸ್ಕಾರಗಳು ಆಸೆ ಆಕಾಂಕ್ಷೆಗಳು ದಿನವಿಡೀ ಮಾಡಿದ ಯೊಚನೆಗಳು ಕೆಲಸ ಕಾರ್ಯಗಳ ಪರಿಣಾಮಯೇ ಕನಸು. ಇಲ್ಲಿ ವಿಕಲ್ಪ ಅಂದರೆ ಫ್ಯಾಂಟೆಸಿ ಕೋಡಾ ಸೇರಿ ಕೊಂಡಿರುತ್ತದೆ.
ಕನಸು ತನ್ನದೇ ಸೃಷ್ಠಿ ಮನಗೆ ಬೇಕಾದಂತೆ ನಾವು ಕನಸುಗಳನ್ನು ನೋಡಬಹುದು ಎಂದಮೇಲೆ ಈ ಎಚ್ಚರ ಅಂದು ಕೊಂಡ ಈ ಸ್ಥಿತಿಯಲ್ಲಿ ಆಗುವ ಪ್ರತಿಯೊಂದು ಘಟನೆಗಳೂ ನಮ್ಮದೇ ಸೃಷ್ಠಿ. ವಿಧಿ ಎಂದು ಕೈಬಿಟ್ಟದ್ದು ವಿದಿಯಲ್ಲ.
ರತ್ರಿ ಮಲಗುವಾಗ ಮಾಡಿದ ಸಂಕಲ್ಪಗಳು ಬೀಜ ರೂಪದಲ್ಲಿದ್ದು ಬೆಳಗ್ಗೆ ಎದ್ದೊಡನೆ ಪುಟಿದೇಳುತ್ತವೆ. ಹೀಗೆ ಬೆಳಗ್ಗೆ ಮಾಡಿದ ಶುಭಕಾಮನೆಗಳು ಸಲ್ಲಿಸಿದ ಪ್ರಾರ್ಥನೆಗಳು ದಿನವಿಡೀ ನಮ್ಮನ್ನು ಸಲಹುತ್ತಿರುತ್ತವೆ. ಆ ದಿನ ನಡೆಯುವ ಎಲ್ಲಾ ವಿದ್ಯಾಮಾನಗಳು ನಮ್ಮದೇ ಸೃಷ್ಠಿ ಎಂಬುದು ನಮಗೆ ಅರಿವಾಗುತ್ತದೆ.
ಯಜ್ಜಾಗ್ರತೋ ದೂರಮುದೈತಿ ದೈವಂ
ತದುಸುಪ್ತಸ್ಯ ತಥೈವೇತಿ
ದೂರಂಗಮಂ ಜ್ಯೋತಿಷಾಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು
No comments:
Post a Comment