Jan 7, 2017

ಕಲಾವಿದ

ನಾನೊಬ್ಬ ಕಲಾವಿದ ಕತೆಗಳನು ಹೆಣೆಯುವ
ಹಾಡಿಗೆ ದ್ವನಿಗೊಡುವ ಭಾವನೆಗಳಿಗೆ ಬಣ್ಣ ಹಚ್ಚಿ
ಕಲ್ಪನಾಲೋಕದಲ್ಲಿ ನಗುವ ಸುಂದರವಾದದ್ದನ್ನು ಕಳೆದುಕೊಳ್ಳಲು ಇಚ್ಚಿಸದ
ವಿವಿಧ ಕಲೆಗಳಲ್ಲಿ ಕಲ್ಪಿಸ ಹೋರಾಟ ಕಲಾ ವಿವಿಧ
ಒಮ್ಮೆ ಕವನದಲ್ಲಿ ಮತ್ತೊಮ್ಮೆ ಹಾಡಿನ ಗುನುಗಿನಲ್ಲಿ
ಮಗದೊಮ್ಮೆ ಮನದಲ್ಲೇ ಕಲ್ಪನಾಲೋಕದಲ್ಲಿ..

ಕಲೆಗೆ ಕೊನೆಯಿಲ್ಲ ಕಲೆಗಾರನ ಬದುಕಿಗೆ ಅರ್ಥವೂ ಇಲ್ಲಾ
ಗೊತ್ತು ಗುರಿಯೂ ಇಲ್ಲ, ನೋಡಿದನ್ನು ನೋಡುತ್ತಾ
ಹಾಡಿದ್ದನ್ನು ಹಾಡುತ್ತ, ಮೈಮರೆಯುವ ಕಲಾವಿದ.
ಕೊನೆಗೂ ಜೀವನಕ್ಕೆ ನಿರ್ಧಿಷ್ಟ ಗುರಿಯಾದರು ಏಕಿರಬೇಕು?
ಅದರ ಪಾಡಿಗೆ ಅದೇ ತೆರೆದುಕೊಳ್ಳುವ ಹೊಸ ಹೊಸ ಹಾದಿ
ಕಂಡು ಕೇಳರಿಯದ ಯೋಚಿಸದ ಬದುಕಿಗೊಂದು ಹೊಸ ತಿರುವು.


No comments:

Post a Comment