Jun 22, 2012

ಕೊಳಲ ಬಗ್ಗೆ ಒಂದೆರೆಡು ಮಾತು.

     ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ, ಸಮುದ್ರದ ಬದಿಯಲ್ಲಿ ಹೀಗೆ ನಿಶ್ಶಬ್ಧ ಸ್ಥಳಗಳಲ್ಲಿ ಕೊಳಲು ನುಡಿಸುವಾಗ ಪ್ರಕೃತಿಯ ಭಾವಕ್ಕೆ ತಕ್ಕಂತೆ ಹೊರಡುವ ನಾದ ಅನುಭವಿಸಿಯೇ ತಿಳಿಯಬೇಕು. ಕೊಳಲ ದ್ವನಿಗೆ ನುಡಿಸದ ಜೀವಿಯೇ ಇಲ್ಲ. ಮಹಾಭಾರತದ ಕೃಷ್ಣನ ಕೊಳಲ ನಾದಕ್ಕೆ ಗೋಪಿಯರು, ದನ ಕರುಗಳು, ಪ್ರಾಣಿ ಪಕ್ಷಿಗಳು ಪ್ರತಿಕ್ರಿಯಿಸುತಿದ್ದದ್ದು ಅತಿರೇಕವಾಗಿಕಂಡರೂ ಅದು ನಿಜ ಕೊಳಲ ದ್ವನಿಯೇ ಅಂತದ್ದು.
    ಭಾರತ ವಿಶ್ವಕ್ಕೆ ಪರಿಚಯಿಸಿದ ಪುರಾತನ ಸಂಗೀತ ಸಾಮಗ್ರಿಗಳ ಮೂರು ರೂಪಗಳೆಂದರೆ ತಂತಿ ವಾದ್ಯ-ವೀಣೆ, ಬಡಿಯಬಲ್ಲ-ತಬಲ, ಊದುವ-ಕೊಳಲು, ಇಂದು ಕೊಳಲು ಅನೇಕ ರೂಪಗಳನ್ನು ತಳೆದು ಚೈನ, ಜಪಾನ್, ಟಿಬೆಟ್ ನಂತಹ ದೇಶಗಳಲ್ಲೂ ಬೇರೊಂದು ರೀತಿಯಲ್ಲಿ ಹಬ್ಬಿದೆ (ಬೌದ್ದ ಪ್ರಭಾವದಿಂದ ಇದ್ದರೂ ಇರಬಹುದು). ಸ್ಟೀಲ್ ಫ್ಲೂಟ್, ಗೊಲ್ಡ್ ಫ್ಲೂಟ್ ಏನೇ ಇದ್ದರೂ ಆಧಿಯ ಆ ಬ್ಯಾಂಬೂ ಫ್ಲೂಟ್ ನಿಜಕ್ಕೂ ಶ್ರೇಷ್ಟ ಏಕೆಂದರೆ ಅದರಲ್ಲಿ ಹೊರಹೊಮ್ಮುವ ನಾದದ ಅಲೆಗಳನ್ನು ಬೇರಾವ ಮೆಟಲ್ ಕೊಳಲಿನಿಂದ ತರಲಾಗದು.
    ಕೊಳಲಿಗೆ ಹಿಂದಿಯಲ್ಲಿ ಭಾಂಸುರಿ ಅಂತಾರೆ. ಭಾಂಸುರಿ ಅಂದೊಡನೆ ಮನಸ್ಸಿಗೆ ಬರೋದು ಪಂಡಿತ್ ಪನಲಾಲ್ ಗೋಶ್, ಹರಿಪ್ರಸಾದ್ ಚೌರಾಸಿಯ ಇನ್ನೂ ಕೆಲವರು. ಹರಿಪ್ರಸಾದರ ಚೌರಾಸಿಯವನ್ನೊಮ್ಮೆ ಕೇಳಿನೋಡಿ; ಕೇಳಿದಷ್ಟೂ ಕೇಳುವ ಅನಿಸುತ್ತೆ. ಆ ದ್ವನಿ ನಿಜಕ್ಕೂ ಅಲೌಕಿಕ.
    ಪನಲಾಲ್ ಗೋಶ್‍ರ ಬಗ್ಗೆ ಸ್ವಲ್ಪ ಆಳವಾಗೇ ಹೋಗೋಣ. ಗೋಶರು ಚಿಕ್ಕವರಿದ್ದಾಗ ಒಮ್ಮೆ ನದಿಯಲ್ಲಿ ಉದ್ದನೆಯ ಕೊಳಲು ಸಿಕ್ಕಿತಂತೆ. ಹೀಗೇ ಎಲ್ಲಿಂದಲೋ ತೇಲಿಬಂದ ಕೊಳಲು ಅದು. ಇದನ್ನು ಧೈವೇಚ್ಚೆಯೇ ಅನ್ನಿ. ಅಲ್ಲಿಂದ ಮುಂದೆ ಕೊಳಲೇ ಅವರ ಸಂಗಾತಿ. ತಾನು ಸನ್ಯಾಸ ಸ್ವೀಕರಿಸಿ ದೈವ ಜ್ಞಾನ ಪಡಿತೀನಿ ಧೀಕ್ಷೆ ಕೊಡಿ ಅಂತ ಗೋಶರು ಒಬ್ಬ ಸ್ವಾಮಿ ಬಳಿ ಕೇಳಿದಾಗ ಸ್ವಾಮೀಜಿ ಹೇಳಿದ್ದು ಹೀಗೆ "ನಿನಗೆ ಮೋಕ್ಷ ಕೊಳಲಲ್ಲೆ". ಅಂದರೆ ಮೋಕ್ಷ ಪಡೆಯಲು ವಿರಕ್ತಿ ಪಡೆದು ತಪಸ್ಸೇ ಮಾಡಬೇಕಿಲ್ಲ. ದೈವನಾದ ನುಡಿಸುತ್ತ ಭಾವನಾ ಸಮಾದಿಯೊ ಇದರಲ್ಲಿ ಸಾಧ್ಯ ಅಂತ. ಮುಂದೆ ಗೋಶರ ಜೀವನ ಕೊಳಲಿಗೇ ಮುಡಿಪು. ಭಾರತದಲ್ಲಿ ಕಣ್ಮರೆಯಾಗಬೇಕಿದ್ದ ಪುರಾತನ ಕೊಳಲಿನ ಪುನರ್ಜನ್ಮ ಅಂದು ಅವರಿಂದ ಆಗಿರಬಹುದು. ಗೋಶರು ಇಂದು ಬದುಕಿಲ್ಲ ಆದರೆ ಅವರ ಗುರುಶಿಶ್ಯ ಸಂಬಂಧ ಮುಂದುವರೆದಿದೆ; ಆಲ್ ಇಂಡಿಯ ರೇಡಿಯೊದಲ್ಲಿ ಪ್ರಸಾರವಾಗುತಿದ್ದು ಅವರ ಕೆಲ ಸ್ವರಗಳು ಉಳಿದಿವೆ.
    ಶಾಸ್ತ್ರೀಯ ಸಂಗೀತದಲ್ಲಿ ಎರೆಡು ವಿಧಗಳಾದ ಹಿಂದುಸ್ಥಾನಿ, ಕಾರ್ನಾಟಿಕ ಇದ್ದಂತೆ ಇದರಲ್ಲೂ ಅವೇ ಎರೆಡು ಬದಲಾವಣೆ. ಕರ್ನಾಟಕದ ಕೊಳಲಿಗೆ ಎಂಟು ಕಣ್ಣು ಅದರ ಹೆಸರು ವೇಣು. ಹಿಂದುಸ್ಥಾನಿ ಕೊಳಲಿಗೆ ಆರು+ಒಂದು ಕಣ್ಣು ಹೆಸರು ಭಾಂಸುರಿ.
    ಎಲ್ಲಿ ಸಿಗುತ್ತೆ?
ಮುಸಿಕ್ ಅಂಗಡಿಗಳಲ್ಲಿ ಕೊಳಲು ಲಭ್ಯ (ಪ್ರೊಫೆಶನಲ್ ಕೊಳಲು ಎನ್ನಲು ಮರೆಯಬೇಡಿ). ರಸ್ತೆ ಬದಿಗಳಲ್ಲೂ ಸಿಗುತ್ತವೆ ಆದರೆ ಇವೆಲ್ಲ ಮೇಣ ಹಾಕಿದ ಸುಲಭವಾಗಿ ನುಡಿಸಬಲ್ಲವು. ಇವುಗಳಲ್ಲಿ ಎಲ್ಲಾ ಸ್ವರಗಳನ್ನು ನುಡಿಸಲಾಗದು. ಪ್ರೊಫೆಶನಲ್ ಕೊಳಲು ತುಂಬಾ ಸಿಂಪಲ್ ಆಗಿದ್ದು ನುಡಿಸುವುದು ಕಠಿಣ. ಇದರಿಂದ ಹೊಮ್ಮುವ ನಾದ ನಿಮ್ಮ ಉಸಿರಿನ ತೀಕ್ಷ್ಣತೆ ಮತ್ತು ಬೆರೆಳುಗಳ ಚಲನೆಯನ್ನು ಅವಲಂಬಿಸಿರುತ್ತದೆ. ಪ್ರಾರಂಭದಲ್ಲಿ ವಿಷವಾಗಿದ್ದು ಕೊನೆಗೆ ಅಮೃತದಂತೆ. ಇದು ಎಷ್ಟೇ ಕಷ್ಟವಾದರೂ ಒಮ್ಮೆ ನುಡಿದರೆ ಮುಂದೆ ಅದು ನಿಮ್ಮನ್ನು ನುಡಿಸುತ್ತದೆ.
    ನೀವೇ ಸ್ವತಃ ಕೊಳಲನ್ನು ಮಾಡಬಹುದು.ಅದರಲ್ಲೂ ಒಂತರ ಮಜ ಸಿಗುತ್ತೆ. ಬೇಕಾದ ಸಾಮಗ್ರಿಗಳು ಇಷ್ಟು ೧.ವೋಟೆ (ಬಿದಿರಲ್ಲ) ೨.ಕಬ್ಬಿಣದ ರಾಡ್ ಅಥವ ಮೊಳೆ ೩.ಬಟ್ಟೆ (ಕೈ ಸುಡದಂತೆ)  ೪.ಬೆಂಕಿ. ವೋಟೆ ಅಂದ್ರೆ ಬಿದಿರಂತೆ ಕಾಣುವ ಸಣ್ಣ ಜಾತಿಯ ಕುರುಚಲು. ಇದು ಸಾಮಾನ್ಯವಾಗಿ ಹಳ್ಳದ ಬದಿಯಲ್ಲಿರುತ್ತೆ (ನಮ್ಮೂರಾಚೆ ಇದರ ಏಳೆ ಸಸಿಯನ್ನು ಕಳಿಲೆ ಎಂದು ಪದಾರ್ತ ಮಾಡಿ ತಿಂನ್ನೋದು ರೂಡಿ). ವಾಟೆಯಲ್ಲಿ ಭೂದೋಟೆ, ಬಳ್ಳೋಟೆ, ಕಾರೋಟೆ ಅಂತ ಅನೇಕ ವಿಧ. ಇವುಗಳಲ್ಲಿ ಭೂದೋಟೆ ಕೊಳಲಿಗೆ ಯೋಗ್ಯ (ಉದ್ದನೆಯ ಹಾಗು ಸುಲಭವಾಗಿ ಸಿಗಿಯದ ಗುಣಗಳಿರುವ ಕಾರಣ). ಮೊದಲಿದೆ ತೂತು ಹಾಕುವ ಜಾಗಕ್ಕೆ ಮಾರ್ಕಿಂಗ್ ಮಾಡಿ ನಂತರ ಬಿಸಿ ಕಬ್ಬಿಣದಿಂದ ಅರಿಚಿದರೆ ಸಾಕು ನಿಮ್ಮ ಕೊಳಲು ರೆಡಿ.
    ಕೊಳಲು ಚಿಕ್ಕದಾದಷ್ಟು ತೀಕ್ಷ್ಣವಾದ ಸ್ವರಗಳನ್ನೂ ಉದ್ದವಾದಷ್ಟು ಕಠಿಣವಾದ ಸ್ವರಗಳನ್ನು ನುಡಿಸುವುದು ಸುಲಭ. ನಾನು ಇಷ್ಟ ಪಟ್ಟಿದ್ದು ೩೨ ಇಂಚಿನ ಹಿಂದುಸ್ಥಾನಿ ಶೈಲಿಯ 'ಎಫ್' ಕೊಳಲು. ಇದನ್ನೊಮ್ಮೆ ನುಡಿಸಿನೋಡಿ ನಿಜಕ್ಕೂ ಮೊಕ್ಷಕ್ಕೆ ಮೂರೇ ಗೇಣು.
    ಚಿತ್ರದಲ್ಲಿರುವ ಮೊದಲ ಮೂರು ಕೊಳಲು ಹೊರಗಿನಿಂದ ತಂದಿದ್ದು. ಉಳಿದ ಎರೆಡು ನಾನೇ ಸ್ವತಃ ತಯಾರಿಸಿದ್ದು. ಕೊಳಲನ್ನು ಇಷ್ಟ ಬಂದಾಗೆ ನುಡಿಸುವುದು ರೂಡಿ. ಆದರೂ ಇದರ ಬಗ್ಗೆ ಶಾಸ್ತ್ರೀಯವಾಗಿ ಕಲಿಯಬೇಕೆಂಬ ಆಸಕ್ತಿ. ಗುರುಗಳಿಗಾಗಿ ಹುಡುಕುತ್ತಾ ಇದ್ದೇನೆ ಇನ್ನೂ ಸಿಕ್ಕಿಲ್ಲ. ನನ್ನ ಊರು ಚಿಕ್ಕಮಗಳೂರು ಓದು ಮಂಗಳೂರು ಏಕೆ ಹೇಳಿದೆ ಅಂದ್ರೆ ನಿಮಗೇನಾದ್ರು ಭಾಂಸುರಿ ಶಾಲೆಗಳ ಬಗ್ಗೆ ಮಾಹಿತಿ ತಿಳಿದಿದ್ರೆ ಇಲ್ಲಿ ಬರೆತಿರ ಅನ್ನೊ ನಂಭಿಕೆಯಲ್ಲಿ:-)
play the flute and feel the difference.

Some use full links
http://en.wikipedia.org/wiki/Hariprasad_Chaurasia
http://www.youtube.com/watch?v=R5w7ToxsrUw

http://en.wikipedia.org/wiki/Pannalal_Ghosh
http://www.youtube.com/watch?v=B4EuV_y3niU 



No comments:

Post a Comment