ಅರಿವು ಉಳ್ಳವರು ಅರಿವರೆ?
ಅರಿವ ಮರೆಸುವ ಮಿಲನದಾಳದ ಮರ್ಮ.
ಪ್ರೀತಿಸಿಯೇ ತಿಳಿಯಬೇಕಲ್ಲದೆ
ಅರಿಯಲಾಗದು ಜೀವನದೊಳ ಗುಟ್ಟು
ಅವಳ ನೇತ್ರದಿ ಬೆರೆತ ನೋಟಕೆ
ಮಾರು ಹೋಯಿತು ರಶ್ಮಿಯು
ಪ್ರೀತಿ ಮಾಯೆಯ ಕಲಿಸಿಕೊಟ್ಟಿತು
ಇದೇ ಮೊದಲು ನನಗೀದಿನ
ಗಾಳಿಗೆ ತೂರಿದ ಕೇಶರಾಶಿಯು
ಋತುವಿಗೂ ಕಲಿಸಿತು ಕವನವ
ತಗ್ಗಿದ ನೋಟವು ತಿಳಿಸಿ ಹೇಳಿತು
ನಾಚಿದಾಕೆಯ ಮೈ ಮಾಟವ
ಮಾತೆ ಹೊರಡದು ಪ್ರೀತಿಹೇಳಲು
ನನ್ನಿಸ್ಥಿತಿಯ ಅವಳು ಅರಿಯಳು
ಹೇಗೆ ಹೇಳಲಿ ಪ್ರೀತಿಯ?
होशवालों को खबर क्या बेखुदी क्या चीज है
इश्क किजे फिर समझिये, जिन्दगी क्या चीज है
उनसे नज़रे क्या मिली, रोशन फिजायें हो गयी
आज जाना प्यार की जादूगरी क्या चीज है
खुलती जुल्फों ने सिखाई, मौसमो को शायरी
झुकती आँखों ने बताया, मयकशी क्या चीज है
हम लबोंसे कह ना पाए, उन से हाल-ए-दिल कभी
और वो समझे नहीं, ये खामोशी क्या चीज है
ಸಂಗೀತ ನಿರ್ದೇಶಕ: ಜತಿನ್-ಲಲಿತ್
ಸಿಂಗರ್: ಜಗಜಿತ್ ಸಿಂಗ್
ಶಾಯರಿ: ಸಮೀರ್
Good one
ReplyDeletethank u..:-)
Delete