ಕಾಡು,ಪ್ರಾಣಿ,ಪಕ್ಷಿಗಳು.... Computerಗಳು, Artificial Intelligenceಗಳು.. ಹಾರುವ ತಟ್ಟೆ-ಲೋಟಗಳು ಇನ್ನೂ ಏನೇನೊ....!! ತೋಚಿದ್ದು ಗೀಚಿದ್ದು.
Aug 17, 2014
ಟೂವ ಇಂತೊಂದು ದೇಶ
ಟೂವ ಇಂತೊಂದು ದೇಶ
ದೇಶ ಎಂದರೆ ತಪ್ಪಾಗುವುದು
ಅದಕಿಲ್ಲ ಆ ವೇಶ
ಕಾಡು ಬೆಟ್ಟದ ನಡುವೆ
ನಾಗರೀಕತೆ ಎಂಬ ಅನಾಗರೀಕತೆಗೆ
ದೂರವೇ ಉಳಿದು ಹಾಡುತಿಹ
ಆದಿ ಮಾನವರ ಲೋಕ
ಟೂವ ಇಂತೊಂದು ಲೋಕ
ಭೂಪಟದಿ ಸಿಗದು ಅದರ ಹೆಸರು
ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು
ಪರತಂತ್ರವಾದರೂ ಸ್ವಾತಂತ್ರವೇ ಆಗಿತ್ತು
ಸ್ವಾತಂತ್ರ್ಯವೇ ಆಗಿಹುದು
ಟೂವ ಎಂಬೀ ಲೋಕ
ಟೂವನ ಕಂಠದ ಕೂಗಿಗೆ
ತನು ತನ್ನ ಮರೆತಿಹುದು
ಮನ ಸ್ಥಬ್ದವಾಗಿಹುದು
ಕೃತಜ್ಞನಾಗಿಹುದು
ಈ ಡಾಕ್ಯುಮೆಂಟರಿ ನೋಡಲು ಮರೆಯದಿರಿ: ದಿ ಲಾಸ್ಟ್ ಜರ್ನಿ ಆಫ್ ಅ ಜೀನಿಯಸ್ (ರಿಚರ್ಡ್ ಫ಼ೆಯ್‍ನ್ಮನ್)
ಟೂವದ ಬಗ್ಗೆ ವಿಕಿಪೀಡಿಯದಲ್ಲಿ ಸ್ವಲ್ಪ ಮಾಹಿತಿ: ಟೋವ
ಇತರ ಖಡತಗಳು: ೧ THE THROAT SINGERS OF TUVA ೨ REISE INS ASIATISCHE TUWA
Subscribe to:
Post Comments (Atom)
No comments:
Post a Comment