ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟು
ಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತ
ಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ
ದಿನ ದಿನವೂ ನವ ದಿನದಂತೆ
ನವೊಲ್ಲಾಸ ನವ ಹುರುಪಿನಿಂದ
ದುಡಿಯುತಿಹರು
ಮುಂಜಾವ ಕತ್ತಲಲೆ
ಚಿಲಿ ಪಿಲಿ ಗುಟ್ಟುತ ಹರುಷದಲಿ
ಹಕ್ಕಿ ಹೊರಡುವುದು ದುಡಿಮೆಗೆ
ಅದೆಂತ ಜೀವನ ಹುರುಪು
ಅದೆಂತ ಜೀವನ ಉತ್ಸಹ
No comments:
Post a Comment