Apr 24, 2026

ಬಾಸಮ್ಮನವರ ಬನಸುಗ್ಗಿ 2026

 ತ್ರಿಪುರ ಸಾವಿರ ಶ್ರೀ ಬಾಸಮ್ಮನವರ ಹಬ್ಬದ ಕೊನೆಯ ಭಾಗವೆ ಬನಸುಗ್ಗಿ. ಹಿಂದಿನ ದಿನ ಗುರುವಾರ ಹಗಲುಸುಗ್ಗಿ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಹಗಲೆಲ್ಲಾ ಭಕ್ತರಿಗೆ ದರ್ಶನ ಕೊಟ್ಟು, ಏಳೂರು ಮೆಟ್ಟಿದ ಬಾಸಮ್ಮನವರು ರಾತ್ರಿ ಬನಕಾಡಿನ ತನ್ನ ಗುಡಿಯಲ್ಲಿ ನಿಶ್ಶಬ್ದವಾಗಿ ರಾತ್ರಿ ಕಳೆದರು. ಕಾಡು ದೇವಿಗೆ ಕಾಡೆ ಅಲ್ಲವೆ ಪ್ರಿಯ!!. 


ಈ ದಿನ ಅಂದರೆ ಶುಕ್ರವಾರ 24 - ಎಪ್ರಿಲ್ - 2026ರ ರಾತ್ರಿ ಅಮ್ಮನವರ ನಿವಾಸ ಗುತ್ತಿಯ ಬನಕಾಡಿನಲ್ಲಿ ಬನಸುಗ್ಗಿ ನಡೆಯಿತು. ಹೆಸಗೂಡಿನ ನೆರಿಗಾಡಿನಲ್ಲಿ ತಂಗಿ ಸಬ್ಲಮ್ಮನವರ ಗುಡಿ ಇದ್ದು. ಅಲ್ಲಿ  ಮೊನ್ನೆ ಇರುಳು ಸುಗ್ಗಿ ಮುಗಿಸಿ ತಂಗಿದ್ದ ತಂಗಿ ಸಬ್ಲಮ್ಮ , ಇಂದು ಬನಕಾಡಿನ ಅಕ್ಕನಲ್ಲಿಗೆ ಬಂದರು. 


ಗುಡುಗು ಮಿಂಚು ಜಿಟಿ-ಜಿಟಿ ಮಳೆ ಬಂದು ಹೋಗಿ, ಪ್ರಕೃತಿಯಲ್ಲಿ ಉಲ್ಲಾಸ ತುಂಬಿತು. ಬನಕಾಡಿನ ತಂಪಾದ ಕಾನನದಲ್ಲಿ  ಅಮ್ಮಂದಿರು ಇಬ್ಬರು ಅಲಂಕಾರದಲ್ಲಿ ಕುಳಿತರು. ಹಬ್ಬ ಸೇವೆ, ಹಣ್ಣು ಕಾಯಿ ಮಗ ಕೊಮಾರರಿಗೆ ಸಮೇತ ನಡೆಯಿತು. ಅಮ್ಮನವರ ಸುತ್ತಲ ಭೂತ ಗಣಗಳು ಆವೇಶ ಎಲ್ಲವೂ ಭಕ್ತಿಯಲ್ಲಿ ತುಂಬಿತ್ತು. 


ಕೊನೆಗೂ ಹಬ್ಬದ ಮುಕ್ತಾಯ ಹತ್ತಿರ ಬಂದೇ ಬಿಟ್ಟಿತು. ಅರ್ಚಕರ ಗದ್ಗದಿತ ಧ್ವನಿಯನಲ್ಲಿ  "ಹೊನ್ನಾರದಿಂದ ಬನಸುಗ್ಗಿ ವರೆಗೆ.. ಯಾವುದೇ ಅಡಚಣೆಗಳಿಲ್ಲದೆ ಸಾಗಿದ ಹಬ್ಬದ ಕೃತಜ್ಞತೆ.. ಇನ್ನು ಮುಂದೆಯೂ ಸರ್ವರಿಗೂ ಬರಬೇಕೆಂದ ಶ್ರೇಯಸ್ಸು, ಪ್ರೇಯಸ್ಸು.. " ಹೀಗೆ ಎಲ್ಲಾ ಬಿನ್ನಹ ಗಳೊಂದಿಗೆ  2026ರ ಈ ವರ್ಷದ ತ್ರಿಪುರ ಸಾವಿರ ಸುಗ್ಗಿಯ ತೆರೆ ಬಿದ್ದಿತು. ದೀಪದ ಬೆಳಕಿನಲ್ಲಿ ಹೊಳೆಯುತಿದ್ದ ದೊಡ್ಡಮ್ಮ, ಸಣ್ಣಮ್ಮನವರ ಸ್ವರ್ಣ, ರಜತ ಮುಖಗಳು; ಕಾನನದ ಕಗ್ಗತ್ತಲೆಯನ್ನು ಛೇದಿಸುತಿದ್ದ ಪರಿ ವರ್ಣನಾತೀತ. ಸ್ಮೃತಿ ಪಟಲದಲ್ಲಿ ಈ ನೆನಪುಗಳನ್ನು ಅಚ್ಚೊತ್ತಿ 2027ರ  ಹಬ್ಬಕ್ಕೆ ಸಿಗುವ ಶುಭವಾಗಲಿ 🙏🙏🙏🥰🥰

Apr 22, 2026

ಬಾಸಮ್ಮನ ಭಕ್ತಿಯ ಬೆಳಕೊಂದೆ

 ಹಬ್ಬ ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು.. 

ಮುಂಗಾರು ಮಳೆಗೆ  ಜೀವ ಗೊಂಡ ಮಂಡೂಕ ವಟಗುವ ಪರಿ

ಸುಪ್ತವಾಗಿದ್ದ ಊರು ಸಾವಿರಗಳು ಜೀವ ತುಂಬಿವೆ. 

ತವರಿಗೆ ಮರಳಿದ ಮಕ್ಕಳು, ಕಂಕುಳ ಮರಿ ಪಿಳ್ಳೆಗಳು

ಚಿಲಿಪಿಲಿ ಗುಟ್ಟುತ ಅಳುತ ಚೀರುತ ಮುಡಿ ಕೊಡುವ ಗಮ್ಮತ್ತು. 

ಚಾಪೆಲಿ ಮಲಗಿ, ಚಪ್ಪಲಿ ತೊರೆದು, ಮಡಿ ಯಲಿ ಮಿಂದು, 

ತಿಂದು ತಂಬಿಟ್ಟು ಉಪವಾಸ ಮಿಕ್ಕೊತ್ತು. 


ತಾಯ ನೋಡಲು ಸೇರುವ ಜನ ಸಾವಿರ 

ವರುಷದಿ ಒಮ್ಮೆ ಹರ್ಷೋದ್ಗಾರ

ನೋಡಿ ಅಮ್ಮನ ಸಿರಿ ಸಿಂಗಾರ. 

ಹಗಲು, ಇರುಳು ಬನಸುಗ್ಗಿ, ಮುನ್ನ ನಡೆದ ಹೊನ್ನಾರ. 

ಮುಗಿಯದೆ ಹೋಗದೆ ಸುಗ್ಗಿ ಹಬ್ಬ!!

ಮುಡಿ ಇಳಿಯಲೊಲ್ಲರು ಅಮ್ಮಂದಿರು. 

ಬಿಟ್ಟು ಕಳಿಸುವ ಕಣ್ಣೀರು ಮಕ್ಕಳದು. 


ಮತ್ತೆ, ಬೇಸಿಗೆ ಮುಗಿದು, ಮಳೆ ಭಯಂಕರ

ಮಲೆನಾಡ ಮಳೆ, ಭೂ ಗರ್ಭದೊಳಗೆ ಇಳಿದರಷ್ಟೆ 

ವರುಷ ಪೂರ್ತಿ ಹರಿಯುವ ಹೊಳೆ. 

ಕೇಳ ಬೇಕಿಲ್ಲ ಮಳೆಯ ಆರ್ಭಟ

ಮುಂಗಾರು ಮುಗಿದು ಬದುಕಿ ಬರುವ ಪ್ರತಿವರ್ಷ

ನಮಿಸದಿರರು ಮಲೆನಾಡ ಸಪ್ತ ಮಾತೆಯರ,ಅಷ್ಟ ಭೈರವರ


ಹಬ್ಬ  ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು

ಇಲ್ಲದೆ ಹೋದರೆ ಏನಿದೆ ಜೀವನ? ನಶ್ವರ, ನಿರಾಕರ. 

ಬಾಸಮ್ಮನ ಭಕ್ತಿಯ ಬೆಳಕೊಂದೆ ಕತ್ತಲ ಅಡವಿಯ ಜೀವನಾಧಾರ🙏

#TripuraSaviraSuggi #HagaluSuggi #Jatre #23rdApril2026 #Today #Basamma #Sablamma #komaraswami #Balalikamma

May 17, 2025

ತ್ರಿಪುರ ಸಾವಿರ ಸುಗ್ಗಿ ಬಲು ವಿಷೇಶ

ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಎಲ್ಲರೋಳಗೂ ಇದ್ದು ನಮ್ಮೂರ ಬಾಸಮ್ಮನೂ ಆಗಿರುವ ಆ ದೇವಿಗೆ ಕೋಟಿ ಪ್ರಣಾಮ ಗಳು. ಮಲೆಕುಡಿಯರಿಂದ ಪೂಜಿಸಲ್ಪಡುವ ದೇವಿ.  ಹೊಯ್ಸಳ ಬಲ್ಲಾಳನು ಇತ್ತ ಬಂಗಾರದ ಮುಖವನ್ನು ದರಿಸಿದ ದೇವಿ. ಸಪ್ತ ಮಾತೃಕೆಯರಾಗಿ ಅಕ್ಕನಿಗೆ ತಂಗಿಯೂ, ತಂಗಿಗೆ ಅಕ್ಕನೂ ತಾನಾಗಿ. ಕುಮಾರನೊಲ್ಮೆಯ ಅಮ್ಮ ಬಾಸಮ್ಮನಿಗೆ ಕೋಟಿ ಪ್ರಣಾಮಳು.

ಈ ವರ್ಷ 2025ರ ತ್ರಿಪುರ ಸಾವಿರ ಸುಗ್ಗಿ ಬಲು ವಿಷೇಶ. ಸ್ವರ್ಣ ಮುಖ ಮುದ್ರೆಯ ಅಕ್ಕ ಬಾಸಮ್ಮ ಜೊತೆಗೆ ತಂಗಿ ಸಬ್ಲಮ. ಇರ್ವರ ಸೆರಗ ಮರೆಯಲಿ ಪುಟ್ಟ ಕುಮಾರ. ಇವರ ಸಂಚಾರ ಹೊನ್ನಾರದ ದಿನ ಮಂಗಳವಾರ ನೋಡುವುದೇ ಸ್ವರ್ಗ. ತ್ರಿಪುರ ಸಾವಿರದ, ತ್ರಿಪುರ ಸುಂದರಿ ನಮ್ಮಮ್ಮ ಬಾಸಮ್ಮ. ಈಕೆಯ ಸ್ವರ್ಣ ಮುಖದ ಸೌಂದರ್ಯ, ನೋಡಿದವರಷ್ಟೇ ಬಲ್ಲರು. ನೋಡದವರು ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯನ್ನು ಒಮ್ಮೆ ಕಣ್ಣ ಎದುರು ತನ್ನಿ. ಆ ತಾಯಿಯ ಬಂಗಾರದ ಮುಖ ಮೂರ್ತಿ ಹೋಲಿಕೆಗೆ ಬರಬಹುದು!!

ರಾಜ ಬಲ್ಲಾಳನೊ? ಬ್ರಾಹ್ಮಣ ಜೋಯಿಸನೊ? ನಿರಾಕರಿಸಿ ನಿರ್ನಾಮರಾದ ಜೈನ ದೊರೆಗಳೊ? ಯಾರು ಹೊತ್ತಿಲ್ಲ, ಹೆಗಲು ಕೊಟ್ಟಿಲ್ಲ ಹೇಳಿಬಾಸಮ್ಮನ ಉತ್ಸವಕ್ಕೆ? ಸಾವಿರ ವರ್ಷಗಳಿಂದ ಸಾಗಿ ಬಂದ ಈ ಪರಂಪರೆ 2025ರ ಸುಗ್ಗಿಯಲ್ಲಿ ಕುಂಬಾರಸೆಟ್ಟರಿಂದ ಇಬ್ಬರು ಬ್ರಾಹ್ಮಣ  ಕುಮಾರರ ಮುಡಿ ಏರಿತು. ಅದರಲ್ಲೂ ವಿಶೇಷವಾಗಿ ತಾಯಿ ಪಾರ್ವತಿ ಅಮ್ಮನಿಗೆ ಸ್ವತಃ ಕಾಲಭೈರವೇಶ್ವರನೇ ನಂದಿಯ ಕಳುಹಿಸಿದಂತೆ ದೇವರಮನೆ ಅರ್ಚಕರು ಆವೇಶಗೊಂಡು ಬಾಸಮ್ಮನ ಹೊತ್ತು ತಂದಿದ್ದು ಅವಿಸ್ಮರಣೀಯ. ಗುರುವಾರ ಮದ್ಯಾಹ್ನ ಕೊಟ್ರಕೆರೆ ಹಗಲು ಸುಗ್ಗಿ ಮಂದಿಯಲ್ಲಿ ಸಾವಿರಾರು ಜನ ಸೇರಿ ತಾಯಿಯನ್ನು ನೊಡುವ ನಿರೀಕ್ಷೆಯಲ್ಲಿದ್ದರು. ಗುತ್ತಿ ಪೂಜೆಗುಡಿಯಲ್ಲಿ ತಾಯಿಗೆ ಅಲಂಕಾರ, ಆರತಿ ಮಾಡಿ ಆಕೆಯನ್ನು ಹೊರಡಿಸುತಿದದ್ದು ಹಿರಿಯರಾದ ದೇವರ ಮನೆ ಅರ್ಚಕರು. ನಂತರ ಅಂದು ಕೊಂಡಂತೆ ಬಾಸಮ್ಮತಾಯಿಯ ಉತ್ಸವ ಮೂರ್ತಿಯನ್ನು ಹೊರ ಬೇಕಾದದ್ದು ಹೊಸದಾಗಿ ನಿಯೋಜಿತರಾದ ಬ್ರಾಹ್ಮಣ ಕುಮಾರ. ಈ ನಡುವೆ ವಯೋಸಹಜ ಬೆನ್ನು, ಸೊಂಟನೊವು ಎನ್ನುವ ದೇವರಮನೆ ಭಟ್ರು ಏಕಾಏಕಿ ತಾನೇ ಆಕೆಯನ್ನು ಹೊತ್ತು ಓಡೋಡಿ ಕೊಟ್ರಕೆರೆ ಸುಗ್ಗಿ ಮಂದಿಗೆ ಬಂದದ್ದು ದೈವಿಕ ಪ್ರೇರಣೆ. ಇದನ್ನು ಕಣ್ಣಾರೆ ಕಂಡು ಆನಂದಿಸಿದವರೆೇ ಧನ್ಯರು 🙏

ಇನ್ನು ಹಗಲು ಸುಗ್ಗಿಯಲ್ಲಿ ಸಾವಿರಾರು ಹೆಜ್ಜೆೇನುಗಳು ಎದ್ದಿದ್ದು. ದೇವರ ಸುತ್ತಲೂ ನಿಂತವರ ಮೈ-ಮುಖದ ಮೇಲೆ ನೊರಾರು ಸಂಖ್ಯೆಯಲ್ಲಿ ಕುಳಿತಿದ್ದು. ಏನೂ ಮಾಡಲಾಗದೆ 'ತಾಯಿ ಬಾಸಮ್ಮ', 'ತಾಯಿ ಬಾಸಮ್ಮ' ಹೀಗೆ ಆಕೆಯನ್ನೇ ಆಶ್ರಯಿಸಿ ನಿಂತು ಪಾರಾಗಿದ್ದು 😇 ಎಲ್ಲವೂವರ್ಷ ತ್ರಿಪುರ ಸಾವಿರ ಸುಗ್ಗಿಯ ವಿಶೇಷ.

ಶನಿವಾರಕ್ಕಾಗಲೆ ಹಬ್ಬ ಮುಗಿದೇ ಹೋಯಿತಾ !  ಎನ್ನುವ ಬೇಸರ. ಅಷ್ಟರಲ್ಲೇ ಮುಂಗಾರಿನ ಹನಿಗಳು ತೊಟ್ಟಿಕ್ಕಿವೆ💧. ಈ ಮಳೆಗೆ☔💦 ಉಳಿವವರೆಷ್ಟು ಅಳಿವವರೆಷ್ಷು ಗೊತ್ತಿಲ್ಲ. (ಮಲೆನಾಡಿನಲ್ಲಿ ಮಳೆಗೆ ಪರಲೋಕದ ಕಡೆಗೆ ಪಯಣಿಸುವವರೆ ಹೆಚ್ಚು) ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಹಾಗೆತಾಯಿಯ ಮೇಲೆ ನಂಬಿಕೆ ಇಟ್ಟು ಮುಂದೆ ಬದುಕೋಣ. ಬರುವ ಬೇಸಿಗೆಯ ಅಂತ್ಯಕ್ಕೆ ಅದೇ ಬಸವ ಜಯಂತಿಯನ್ನು ಕ್ಯಾಲೆಂಡರ್ನಲ್ಲಿ ಹುಡುಕಿ ಶನಿವಾರ ಹಬ್ಬ ಮಿಂದು, ಹಬ್ಬ ಮೆಟ್ಟಿ, ಮಂಗಳವಾರ ಕುಮಾರನ ಒಡಗೂಡಿ ತಾಯಿಯ ಪರಿವಾರವನ್ನು ಪರಿವಾರ ಸಮೇತ ನೋಡೋಣ 🥰 
ವರ್ಷಕ್ಕೊಮ್ಮೆ ಕಾಣುವ ಆಕೆಯ ಮುಖದ ಹೊಳಪನ್ನು ಮತ್ತೆ ಸ್ಮರಿಸುತ್ತ, ಯಾವ ದೇವಿ ಬಾಸಮ್ಮ, ಸಬ್ಲಮ್ಮ, ಬಳಲಿಕಮ್ಮ, ದೇವಿರಮ್ಮ, ಪದ್ಮಾವತಮ್ಮ ಹೀಗೆ ಸಹಸ್ರ ಹೆಸರುಗಳಲ್ಲಿ ವಿಷೇಶವಾಗಿ ಮಲೆನಾಡಿನಾದ್ಯಂತ ಪೂಜಿಸಲ್ಪಡುವಳೊ ಆಕೆಗೆ ಕೋಟಿ, ಕೋಟಿ ನಮನಗಳು. ☺🙏

Sep 2, 2022

Gravitational lensing ಗುರುತ್ವಾಕರ್ಷಣೆಯ ದರ್ಪಣ

ಬ್ರಹ್ಮ ಸತ್ಯ ಜಗತ್ತು ಮಿತ್ಯ ಎಂಬ ವೇದಗಳಲ್ಲಿ ಕಾಣ ಸಿಗುವ ಸತ್ಯಕ್ಕೆ ಒಂದು ಉದಾಹರಣೆ. ಇದು ಇತ್ತೀಚೆಗೆ ತೆಗೆದ ಗ್ಯಾಲಾಕ್ಸಿ SGAS J143845+145407 ಇದರ ಚಿತ್ರ. ಇದನ್ನು ಭೂಮಿಯ ಹೊರಗೆ ಸುತ್ತುತ್ತಾ ಇರುವ 'ಹಬಲ್ ದೂರದರ್ಶಕ' ಇದರ ಮುಖಾಂತರ 18 July 2022, 06:0AM ಗೆ ತೆಗೆಯ ಲಾಗಿದೆ.

ಈ ಚಿತ್ರದ ಕುತೂಹಲಕಾರಿ ಅಂಶ ವೆಂದರೆ. ಒಂದೇ ಗ್ಯಾಲಾಕ್ಸಿ ಮೂರು ಕಡೆಗೆ ಕಾಣಿಸಿಕೊಳ್ಳುತ್ತಿರುವುದು. ಇದನ್ನು 'ಗುರುತ್ವಾಕರ್ಷಣೆಯ ದರ್ಪಣ/ಕನ್ನಡಿ' Gravitational lensing ಎಂದು ವಿಜ್ಞಾನಿಗಳು ಕರೆದಿದ್ದಾರೆ.

ನಾವು ಆಕಾಶದಲ್ಲಿ ನೋಡುವ ಎಷ್ಟೋ ನಕ್ಷತ್ರಗಳು, ಗ್ಯಾಲಾಕ್ಸಿಗಳು ಅಲ್ಲಿ ಇರಲೂ ಬಹುದು ಇಲ್ಲದೆಯೂ ಇರಬಹುದು. ಅವುಗಳಿಂದ ಹೊರಟ ಬೆಳಕು ನಮ್ಮನ್ನು ತಲುಪಲು ಕೊಟ್ಯಾಂತರ ಬೆಳಕಿನ ವರ್ಷಗಳು ತಗಲುವ ಕಾರಣ. ನಾವು ನೋಡುತ್ತಿರುವುದೆಲ್ಲ ಅವುಗಳ ಭೂತಕಾಲ past tense.



ಇದನ್ನೇ ವೇದಗಳು ಜಗತ್ತು ಒಂದು ಮಾಯೆ. ಇದೆಲ್ಲ ದೇವರ ಲೀಲೆ ply. ಎಂದಿರುವುದು. ಈ ವೇದ ವಾಕ್ಯಗಳನ್ನು ಪುಷ್ಟೀಕರಿಸುವ ಆದಿ ಶಂಕರಾಚಾರ್ಯರ ದಕ್ಷಿಣಾ ಮೂರ್ತಿ ಸ್ತೋತ್ರ ಇಲ್ಲಿ ವಿಶೇಷ.

ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ |

ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ

World is but the mirror image of what's within. ಜಗತ್ತು ಕನ್ನಡಿಯೊಳಗೆ ಕಾಣುವ ಒಂದು ಪ್ರತಿಬಿಂಬ ಅದರ ಬಿಂಬ ತಮ್ಮೊಳಗೇ ಇದೆ. ಅದು ಸತ್ಯ,ಜ್ಞಾನ ಮತ್ತು ಅನಂತವಾದ ಬ್ರಹ್ಮ.

Jan 7, 2019

ಅನಿವಾರ್ಯ

"ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಂದು ನೀವು
ಯಾರು ಕೇಳಲಿ ಎಂದು ನಾ ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ"

ಈ ಹಾಡು ಯಾಕೊ ನೆನಪಿಗೆ ಬಂತು, ಅದರಲ್ಲಿ ಹಾಡುವವಗೆ ಹಾಡು ಅನಿವಾರ್ಯ ಕರ್ಮ ಯಾರು ಕಿವಿ ಮುಚ್ಚಿದರೂ ಆತನಿಗಿಲ್ಲ ಚಿಂತೆ
ನನಗೆ ಈ ಬರವಣಿಗೆಯೇ ಒಂದು ಬಗೆಯ ಅನಿರ್ಧಿಷ್ಠ ಅಸಂಗತ ಕೇಮೆ. ಯಾಕೆ ಬರೆಯುತ್ತಿದ್ದೇನೆ ನನಗಂತು ಗೊತ್ತಿಲ್ಲ ಯಾರಾದರು ಒದಿದರೋ ಇಲ್ಲವೋ
ಎಂಬುದೂ ನನ್ನ ಮೇಲೆ ಅಷ್ಟೊಂದು ಪರಿಣಾಮ ಬಿದ್ದಹಾಗೆ ಕಾಣುವುದಿಲ್ಲ. ಆದರೆ ಒಂದಂತೂ ನಿಜ! ಎಷ್ಟೋ ದಿನಗಳ ಅಥವಾ ಕೆಲವೊಮ್ಮೆ ವರ್ಷಗಳ ಬಳಿಕ
ಇವೇ ಬರಹಗಳು ನನ್ನ ಕಣ್ಣಿಗೆ ಬಿದ್ದಾಗ ಒಂದು ಬಗೆಯ ಹಳೆಯ ಫೋಟೊಗಳನ್ನು ನೋಡಿದ ಅನುಭವ ನನಗಾಗುತ್ತದೆ! ಕೆಲವೊಮ್ಮೆ ಆ ಬರಹಗಳು ನಗೆ ತರಿಸಿದರೆ
ಮತ್ತೊಮ್ಮೆ  ಹೆಮ್ಮೆ ಮಗದೊಮ್ಮೆ ನಾನೆಂತಾ ಎಮ್ಮೆ ಆಗಿದ್ದೆ ಅನ್ನಿಸುತ್ತೆ.

Dec 9, 2018

Let this post be a reminder


Today I went for a ‘chawdi pooja’ in one of our relatives coffee farm where the pig is offered to the deity and all the invited relatives and neighbors happily chop the pig into pieces. Later they offer the delicious meat recipe and liqueur to the so goddess. For me at least all that seems like a drama, because god never gets satisfied with your liqueur or meat, all that is for the people alone, done in the name of divine. Being in these events one can experience the great amount of negative energy radiating around the people. Most of the times we get negatively influenced by them.

I want to write this particular thing in my blog so that I will remember it. One of our uncle to whom I initially had a great respect was already standing at the venue saw me coming. I was very humbly and happily approached him and greeted. But the same did not came from him “hey I heard you have come back whats wrong” he questioned, instead of at least saying Hi. “of course yes I have been outside for more than 15 years 10 in mangalore as a student then in bangalore now I feel like to be in my home with my parents” I said. But he did not satisfied “oh! you came back to look after your estate is it?” and he smiled with a quip. Well I am not an estate owner I don't inherit one but a small holder which I need not tell him as he was already aware of that. “why you came from Dubai? The same reason I am back (I meant the affection towards ones birth place & my father is ill but he never understood)”. “At least I made lot of money. How much did you make? Can you make so much” I got frustrated because even if I have abundance I wouldn't be giving him. And bothering about others!!! that is none of his business rather that was the mixture of his greed and jealousy.

I met some of these kind of people and keep meeting in the future. Who criticize for being essentialist and self satisfied. “You struggled to qualify as an engineer, but I make the money just like that what good is your education” and they laugh. Whom should I say about the passion and the interest in the subject. Majority of the people in the world is just like my uncle. I think I can not and need not change them. Even if I try its not worth rather I decided to change my self. The next time I meet him I will show what an educated can do over an idiot. And I want to show him the real wealth! Let this post be a reminder.

Dec 7, 2018

ಪ್ರೀತಿಯ ಕುಳ್ಳ

    ಕುಳ್ಳ ನಮ್ಮ ಮನೆಯವರಲ್ಲಿ ಒಬ್ಬ, ನಾಲ್ಕು ವರ್ಷಗಳ ಹಿಂದೆ ನನ್ನ ತಂಗಿ ತ್ರಿಪುರ ಚನ್ನಕೇಶವ ರವರ ಮನೆಯಿಂದ ಆ ಪುಟ್ಟ ಬುಲ್ಡಾಕ್ ನಾಯಿಮರಿಯನ್ನು ತಂದು ಕುಳ್ಳ ಅಂತಾ ಕರೆದಿದ್ದಳು. ಅಲ್ಲಿಂದ ಇಲ್ಲಿಗೆ ಕುಳ್ಳ ಮನೆಮಗನಂತೇ ಬೆಳೆದು ಮನೆಯ ಎಲ್ಲಾ ನೋವು ನಲಿವಿಗೆ ಬಾಗಿಯಾಗಿತ್ತು. ಪೇಟೆಯಿಂದ ಬಂದ ಅಪ್ಪನ್ನನ್ನು ವೆಲ್-ಕಮ್ ಮಾಡೋದು, ದನಗಳನ್ನು ಹಟ್ಟಿಗೆ ಕೂಡೊದು, ನಾವು ಕಾಫಿ ಕುಡಿದ್ರೆ ಬೇಡದಿದ್ದ್ರೂ ತನಗೂ ಬೇಕು ಅಂತಾ ಹಾಕಿಸಿಕೊಂಡು ಅಲ್ಲೇ ಉಳಿಸುವುದು ಆ ಮೇಲೆ ಬೈದೊಡನೆ ನೆಕ್ಕಿ ಬಿಡೋದು ಹೀಗೆ ಅದು ಆಡದ ಆಟವಿಲ್ಲ. ನಾನೂ ನನ್ನ ತಂಗಿ
ಕ್ಯಾಚ್ ಆಡ್ತ ಇದ್ರೆ ಬಾಲ್ ಬಿದ್ದಾಗ ಹೆಕ್ಕಿತಂದು ನಮ್ಮ ಗಮನ ಸೆಳೆದು ಒಂದು ಮುತ್ತು ಗಿಟ್ಟಿಸಿಕೊಳ್ಳದೆ ಬಿಡುತ್ತಿರಲಿಲ್ಲ.

    ನನಗೂ ನನ್ನ ತಂಗಿಗಿಂತಲೂ ಹೆಚ್ಚಿಗೆ ನನ್ನ ಅಪ್ಪ ಅಮ್ಮ ನೊಂದಿಗೇ ಅದು ಇದ್ದಿದು ಹೆಚ್ಚುಕಾಲ. ನಾನಾದರೂ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೆ, ನನ್ನ ತಂಗಿ ವಿದ್ಯಾಶ್ರೀ ಮೂಡಿಗೆರೆಯಲ್ಲಿ ಎಮ್.ಎಸ್ಸಿ ಓದುತಿದ್ದಳು ಹೀಗೆ ಅವಳು ಮನೆಗೆ ಬರುತಿದ್ದದ್ದು ಎರೆಡುವಾರಕ್ಕೊಮ್ಮೆ ನಾನಂತೂ ಬಹಳ ವಿರಳವೆ. ಅಂದು ತನ್ನ ತಾಯಿಂದ ಬೇರ್ಪಟ್ಟು ನನ್ನ ತಂಗಿಯೊಂದಿಗೆ ತಂದಿದ್ದ ಕುಳ್ಳ ಕ್ಯೂಟ್ ಆಗಿ ಒಂದು ಮುಷ್ಠಿಯಷ್ಟು ಗಾತ್ರವಿತ್ತು. ಇಂದು ಅಮ್ಮನ ಕೈಯಲ್ಲಿ ಹಾಲು-ಮೊಸರು, ಅಪ್ಪನ ಶಿಕಾರಿ ಮಾಂಸ ತಿಂದು ಬೆಳೆದು ಮುಷ್ಟಿ ಗಾತ್ರದಿಂದ ಮೂರಡಿ ಉದ್ದ ಬೆಳೆದಿದೆ ಆದರೆ ಎತ್ತರ ಅಷ್ಟೆ, ಅದೇ ಕುಳ್ಳ, ಅದೇ ಬುದ್ದಿ. ಎಸ್ಟೋ ದಿನ ಬಿಟ್ಟು ಮನೆಗೆ ಬರುವ ನನ್ನ ಗುರುತು ಸದಾ ಹಿಡಿಯುವ ಅದರ ಮನಸ್ಸಿನ ಪರೀದಿಯೇ
ನನಗೆ ಅರ್ಥವಾಗಿಲ್ಲ.

    ಮೊನ್ನೆ ಎಂದಿನಂತೆ ಬೆಳಿಗ್ಗೆ ಎದ್ದು ಕತ್ತಿ ಹಿಡಿದುಕೊಂಡು ಗುಡ್ಡದ ಕಾಫಿ ತೂಟಕ್ಕೆ ಹೊರಟೆ, ನಾನೂ ಬರುತ್ತೇನೆಂದು ಕುಳ್ಳನೂ ನನ್ನೊಂದಿಗೆ ಹೊರಟಿತು. ಇನ್ನೂ ಸರಿಯಾಗಿ ಬೆಳಕಾಗದ ಕಾರಣ ದೂರದಲ್ಲಿ ಕಾಡಿನ  ಪೊದೆಯಲ್ಲಿ ಅವಿತಿದ್ದ ಕರಡಿ ನನ್ನ ಗಮನಕ್ಕೆ ಬಂದಿರಲಿಲ್ಲ. ಅಂದು ಜೊತೆಗೆ ಕುಳ್ಳ ಇರದೆ ಹೋಗಿದ್ದರೆ ಅದು ಬೊಗಳದೆ ಹೋಗಿದ್ದರೆ ನನಗೊಂದು ಅಪಾಯ ಕಾದಿತ್ತು. ಚಾರ್ಜಿಗೆ ಹಾಕಿದ್ದ ಮೊಬೈಲ್ ಕೂಡ ಮನೆಯಲ್ಲೇ  ಬಾಕಿ ಇದ್ದ ಕಾರಣ ನನ್ನ ಕುಳ್ಳನೇ ಅಂದು ನನಗಿದ್ದ ಬಲ. ಅಲ್ಲಿ ಆ ದಿನ ಅರ್ದ ಗಂಟೆ ಹೊಳತೆಗೆಯುತಿದ್ದ ನನಗೆ ಹಾವೊದು ಕಂಡಿತು, ಹಿಂದಿನ ದಿನವೂ ಬೇರೊದು ಬಣ್ಣದ ಹಾವು ಅಲ್ಲೇ ಆಸು ಪಾಸಿನಲ್ಲಿತ್ತು. "ಅದನ್ನು ಹೊಡೆದು ಸಾಯಿಸು", "ಬಿಟ್ಟರೆ ಮುಂದೊಂದು ದಿನ ಕಚ್ಚೀತು", ಈ ಮಾತು ನನ್ನ ಮನಸಲ್ಲಿ ಬಂತು. "ಅದೇನು ಕಚ್ಚಿಲ್ಲ ವಲ್ಲಾ, ಸುಮ್ಮನೆ ಹೊಗುವ ಹಾವನ್ನೇಕೆ ಹೊಡೆಯುವುದು" ಹೀಗೆ ಅಂದು ಕೊಂಡು ಸುಮ್ಮನಾದೆ. ನಂತರ ಕೆಲವು ಸಮಯ ಅಲ್ಲೇ ಇದ್ದು ಮನೆಯಕಡೆ ಹಿಂದೆ ಬಂದೆ, ದಾರಿಯಲ್ಲಿ ಹಳ್ಳದಾಟುವಾಗ ಕುಳ್ಳ ಕಾಲು ಜಾರಿ ದಡಕ್ಕನೆ ನೀರಿಗೆ ಬಿದ್ದು ಮೇಲೆದ್ದಿತು, ಅದರಬಗ್ಗೆ ನಾನು ಅಸ್ಟೇನು ತಲೆಗೆಹಾಕಿ ಕೊಳ್ಳಲಿಲ್ಲ. ಮರುದಿನವೂ ಹೀಗೆಯೇ ಆದದ್ದು ನನ್ನ ಗಮನಕ್ಕೆ ಬಂತು "ಕುಳ್ಳನಿಗೆ ತಲೆ ತಿರುಗಿತೇ?", "ಕಣ್ಣು ಮಂಜಾಯಿತೆ? ಚೆನ್ನಾಗೇ ಇತ್ತಲ್ಲಾ? ಏನಾಯ್ತು" ಅಂದುಕೊಂಡೆ.

    ಮರುದಿನ ಕುಳ್ಳ ಊಟಮಾಡಲಿಲ್ಲ. ಹೀಗೆ ಊಟ  ಬಿಡುವುದು ತಿಂಗಳಿಗೊಮ್ಮೆ ಅದಕ್ಕೆ ಮಾಮೂಲಾಗಿದ್ದರೂ ಈ ಬಾರಿ ಅದರ ಮುಖದ ಕಳೆಗುಂದಿತ್ತು. "ಯಾಕೋ ಕುಳ್ಳ ಸಪ್ಪಗಿದ್ಯಲ್ಲಾ" ಅಂತ ಅಪ್ಪ ಕೇಳಿತು. ಏಕೋ ಯಾರಿಗೂ ಗೊತ್ತಿಲ್ಲ! ಅಷ್ಟೇ ಅಲ್ಲಾ ಇದ್ದಕ್ಕಿದ್ದಂತೆ ಮುಂಗಾಲನ್ನು ತುರಿಸಲು ಪ್ರಾರಂಬಿಸಿತು. ಮೈಗೇನಾದರು ಚಿಗುಟ ಹತ್ತಿರಬಹುದೆಂದು ನಾನು ಅಪ್ಪ ಸೇರಿ ಕುಳ್ಳನಿಗೆ ಸ್ನಾನ ಮಾಡಿಸಿದೆವು. ಆದರೂ ತುರಿಕೆ ನಿಲ್ಲಲಿಲ್ಲ. "ಕೊಳಕು ಮಂಡಲ ಹಾವು ಏನಾದ್ರು ಕಚ್ಚಿರಬಹುದಾ" ಅಂದುಕೊಂಡ್ರು ಅಮ್ಮ. ಈ ಹಿಂದೆ ಅಪರಿಚಿತ ನಾಯಿಯೊಂದು ಕಚ್ಚಿತ್ತು
ಅದಕ್ಕೆ ಹುಚ್ಚು ಹಿಡಿದಿರ ಬಹುದೇ ಎಂದು ಅಪ್ಪ ಅನುಮಾನಿಸಿದರು. ಕುಳ್ಳ ವಿಚಿತ್ರವಾಗಿ ವರ್ತಿಸುತಿತ್ತು ತುರಿಸಿಕೊಳ್ಳುವುದು ಒಂದು ಕಡೆಯಾದರೆ, ಮನೆ ಒಳಗೆ ಬರುವುದು ಕತ್ತಲಲ್ಲಿ ಇರಬಯಸುವುದು ಇನ್ನೊಂದು. ಆ ದಿನ ರಾತ್ರಿ ಏನನ್ನೂ ತಿನ್ನದೆ ಕುಳ್ಳ ಬೇರೆಡೆ ಮಲಗಲು ಹೋಗಿತ್ತು.
    
    ಮರುದಿನ ಬೆಳಗಾಯಿತು ಆದರೆ ಬಾಗಿಲಿನಲ್ಲಿ ಕುಳ್ಳ ಕಾಣಸಿಗಲಿಲ್ಲ "ಅಮ್ಮ ಕುಳ್ಳ ಎಲ್ಲಿ" ಎಂದೆ. "ಅಪ್ಪನ ಜೊತೆ ದನ ಬಿಡಲು ಗದ್ದೆಗೆ ಹೋಗಿರಬಹುದು" ಅಂದಿತು ಅಮ್ಮ. ಮರುಗಳಿಗೆ ಅಪ್ಪನೂ ವಾಪಾಸಾದರು "ಕುಳ್ಳ ಬಂದಿತ್ತಾ, ಡ್ಯಾಡಿ" ಅಂದೆ. "ಇಲ್ಲಾ" ಎಂಬ ಉತ್ತರ ಬಂತು. "ರಾತ್ರಿ ಊಟವನ್ನೂ ತಿಂದಿರಲಿಲ್ಲ. ಹಾಗಾದರೆ ಎಲ್ಲಿ ಹೋಯಿತು" ಎಂದುಕೊಂಡೆ. ಸುಮಾರು ಬೆಳಿಗ್ಗೆ 10 ಗಂಟೆ ಹೊತ್ತಿಗೆ ಅದು ನಿದಾನವಾಗಿ ಮನೆ ಕಡೆಗೆ ಅತ್ತಿ ಬರುವುದು ಕಂಡಿತು. ಕುಳ್ಳನ ಮೈಯಲ್ಲಿ ಬಲವಿರಲಿಲ್ಲ, ಕಂಣ್ಣು ಮಂಜಾಗಿದ್ದವು, ತುರಿಸಿಕೊಂಡಲ್ಲಿ ಗಾಯಗಳಾಗಿ ರಕ್ತ ಸೋರುತಿತ್ತು. ಕುಳ್ಳನನ್ನು ನೋಡಿದೊಡನೆ "ಬಾ ಕುಳ್ಳಾ ಬಾ" ಎಂದೆ. ಎರೆಡು ಹೆಜ್ಜೆ ಪ್ರೀತಿಯಿಂದ ಬಾಲ ಅಲುಗಾಡಿಸುತ್ತ ನನ್ನೆಡೆಗೆ ಬರಲು ಹೊರಟ ಕುಳ್ಳ ಯಾಕೋ ಹೆದರಿದಂತಾಗಿ ಹಿಂದೆಸರಿದು ಹೊರಟೇ ಬಿಟ್ಟಿತು. "ಕುಳ್ಳ ಕುಳ್ಳಾ" ಎಂದು ಎಷ್ಟೇ ಕರೆದರು ಕುಳ್ಳ ಹಿಂದಿರುಗಲಿಲ್ಲ. ಅದು ಎತ್ತ ಹೊಯಿತೊ ನಮಗೂ ತಿಳಿಯಲಿಲ್ಲ.

    "ಹುಚ್ಚು ಹಿಡಿದಾಗ ಸ್ನಾನ ಮಾಡಿಸಬಾರದಿತ್ತೇ? ನಾನು ಅಂದು ಆ ಹಾವಿಗೆ ಕನಿಕರ ತೋರಬಾರದಿತ್ತೆ? ಅದೇ ಹಾವು ಕಚ್ಚಿರಬಹುದೆ? ಮನೆಯಲ್ಲೇ ಪ್ರಾಣ ಬಿಡಬಹುದಿತ್ತಲ್ಲ? ಹುಚ್ಚು ಮನೆಯನ್ನೇ ಮರೆಸಿತೆ?
ಅಥವಾ ತಾನಿರುವ ಸ್ಥಿತಿಗೆ ಬೇಸರ ಗೊಂಡು ಕುಳ್ಳ ಹೊರಟೇ ಹೊಯಿತೆ? ಒಂದು ಹೆಣ್ಣು ನಾಯಿಯಾದರು ಇದ್ದಿದ್ರೆ ಕುಳ್ಳನ ಮರಿಗಳನ್ನಾದರು ಬೆಳೇಸಬಹುದಿತ್ತಲ್ಲ".
    
    "ಕುಳ್ಳ ಈ ಮನೆಗೆ ನೀನು ಮಾಡಿದ ಸೇವೆ, ನಾವಿಲ್ಲದಾಗ ಅಮ್ಮ ನೊಂದಿಗೆ ಜೊತೆಯಾಗಿದ್ದು, ಎಲ್ಲರಿಗೂ ಖುಷಿಯನ್ನೇ ಕೊಟ್ಟು ಪ್ರಾಮಾಣಿಕವಾಗಿ ಬದುಕಿದ ನಿನ್ನ ಸ್ವಾಮಿ ನಿಷ್ಟೆಗೆ ನಾವು ಎಂದೆಂದಿಗೂ ಋಣಿ"
07-12-2018
A photo with kulla in august 2018, taken by vidyashree

Nov 27, 2018

Out of memory!


We had this chemistry lecturer who always asked me the questions... like What is the chemical formula for benzene what is the standard name for it.. ? You know questions like that. But my poor memory always refused to recollect because first and foremost it never ever used to register!. The reason I always fond of the concept of alchemy made me disbelieve in periodic chart itself. But in order to pass chemistry I had to remember the stuffs which I could not easily do. My mind only remembered the logically deducible things.

Our chemistry lecturer was very good at memorizing,  he used to ask the question and make fun of me in the class. I also enjoyed it and never took it seriously as long as he gave the appropriate marks in the internals.

The funny thing I wanted to share you with was this, he got married!! yes suddenly he got married and went for a week long honey moon. During those period some of his colleagues used to take the classes at-least 3 to 4 of them also constantly changing faces of physics lectures as our physics madam was also pregnant!!

After two-three weeks chemistry lecture of 7th batch alloysius was back in action. He walked strait on to the dais with a chalk and a duster in his hands as always he never had the reference! Why a book when everything is stuffed in the memory? Well he stopped!! stopped at stoichiometry, calculation of reactants and products in chemical reactions did not balance, could remember neither the names nor the formulas! stoichiometry paused!

With a smile he borrowed a book from the front row! “well! I forgot the names & equations! After the week long vacation I don't recollect any thing!” said he and smiled, we the class laughed out loud! “Bio chemistry worked!!” whispered an anonymous voice.

Thanks to honey moon..! We were happy,  at least I was happy at that time hoping at least from then on I wont be asked any questions out of memory! 

Apr 14, 2017

beautiful dream

What a beautiful dream!
Oh God! You are a beautiful lie
And the pleasant dream of the mankind I thought!
It took me a millionth of a life time to realize that
‘I too am a dream’! What a beautiful dream I was!
Where was I before the start and where will I after the end
From when did all this appeared and when will it disappear
Is the world ever existent and I is just a quantum leap!
Or the world itself is the makeup which emerged out of me.
What a beautiful dream!
I, you, he, she, multiple of me!
And being involved in the dream, never want to wakeup!



Feb 13, 2017

ಇದ್ದದ್ದೊಂದೇ

ಎಲ್ಲವೂ ಅಶಾಶ್ವತವೀ ಜಗದೊಳು
ಮುಂಜಾನೆ ಕಾಣ್ವ ಕನಸಿನಂದದಿ
ಎಲ್ಲವೂ ನಡೆದೂ ನಡೆಯದಿರುವುದು
ನಾನು ನೀನು ಆನು ತಾನುಗಳು
ತನಿ ನಿದ್ರೆಯೊಳು ತಾವಾಗೇ ತೆರೆದು ಕೋಂಬವು
ನಾನು ಇಲ್ಲ ನೀನು ಇಲ್ಲ
ಇದ್ದದ್ದೊಂದೇ ಕನಸು ಕಾಣ್ವ ಆ ಕಲೆಗಾರ

Jan 10, 2017

..

Sometimes...
The silence...
Is more melodies
More poetic…
..
Words are but noise
They link memories...


Jan 7, 2017

ಕಲಾವಿದ

ನಾನೊಬ್ಬ ಕಲಾವಿದ ಕತೆಗಳನು ಹೆಣೆಯುವ
ಹಾಡಿಗೆ ದ್ವನಿಗೊಡುವ ಭಾವನೆಗಳಿಗೆ ಬಣ್ಣ ಹಚ್ಚಿ
ಕಲ್ಪನಾಲೋಕದಲ್ಲಿ ನಗುವ ಸುಂದರವಾದದ್ದನ್ನು ಕಳೆದುಕೊಳ್ಳಲು ಇಚ್ಚಿಸದ
ವಿವಿಧ ಕಲೆಗಳಲ್ಲಿ ಕಲ್ಪಿಸ ಹೋರಾಟ ಕಲಾ ವಿವಿಧ
ಒಮ್ಮೆ ಕವನದಲ್ಲಿ ಮತ್ತೊಮ್ಮೆ ಹಾಡಿನ ಗುನುಗಿನಲ್ಲಿ
ಮಗದೊಮ್ಮೆ ಮನದಲ್ಲೇ ಕಲ್ಪನಾಲೋಕದಲ್ಲಿ..

ಕಲೆಗೆ ಕೊನೆಯಿಲ್ಲ ಕಲೆಗಾರನ ಬದುಕಿಗೆ ಅರ್ಥವೂ ಇಲ್ಲಾ
ಗೊತ್ತು ಗುರಿಯೂ ಇಲ್ಲ, ನೋಡಿದನ್ನು ನೋಡುತ್ತಾ
ಹಾಡಿದ್ದನ್ನು ಹಾಡುತ್ತ, ಮೈಮರೆಯುವ ಕಲಾವಿದ.
ಕೊನೆಗೂ ಜೀವನಕ್ಕೆ ನಿರ್ಧಿಷ್ಟ ಗುರಿಯಾದರು ಏಕಿರಬೇಕು?
ಅದರ ಪಾಡಿಗೆ ಅದೇ ತೆರೆದುಕೊಳ್ಳುವ ಹೊಸ ಹೊಸ ಹಾದಿ
ಕಂಡು ಕೇಳರಿಯದ ಯೋಚಿಸದ ಬದುಕಿಗೊಂದು ಹೊಸ ತಿರುವು.


Oct 24, 2016

Than halfway up one you don't

 "It's better to be at the bottom of a ladder you want to climb, than halfway up one you don't."
the question one must always ask him/her self is "am i doing what i want do?". As i have seen with many of my friends, colleagues, class mates, is that when they did not follow what their heart said they ended up in failure lost their confidence and eventually lost themselves. most of the people did not chose the subject they loved to study. They just listened to their parents or relatives saying that this has no scope no career opportunity but that has, take that not this etc. But once if you start ignoring the cry of your heart the purpose of your life and start full filling some one eases views and opinions you are on the way up their ladder. 

the decision you make now however small or big has impeccable consequences on your life. you have chosen to study commerce but you wanted science. as you have not studied science you are not able to take up engineering that you have wished for. hence you opted for a commerce degree. as you have got no science degree you missed a opportunity to work in a research center which was you passion. so the small decision which you took wrongly because of the influence of people and circumstances you lost the direction of your life. you had to sacrifice the whole of your life. you had to lead a miserable life with sadness and dissatisfaction.

what do you want in this life? what is your dream? what is that you are confident of achieving? what is your heart saying? follow you self. chose the path wisely. if you want to reach home at the north then you must not take the route of the office. if you are at least on the same direction (north) then there is a hope of convergence but if you heading south then there is no hope. if you have not got a seat in engineering go for diploma that is be on the same direction so that you may get in to the engineering through the diploma. 

Do not bother about what other say! do not bother about your present condition! you may be sleeping on the streets wearing torn cloths. nothing matters much! as long as you have kept your head high and following your heart doing what is right to do.!  

                

Oct 19, 2016

ಶಿವಸಂಕಲ್ಪಮಸ್ತು

ಜೀವನದಲ್ಲಿ ನಡೆಯುವ ಸಕಲ ಆಗು ಹೋಗುಗಳು ನಮ್ಮ ಹಿಡಿತದಲ್ಲಿ ಇಲ್ಲ ಎಂಬುದು ಸಮಾನ್ಯ ವಾಗಿ ಎಲ್ಲರೂ ನಂಬಿರುವ ವಿಚಾರ. ನಮ್ಮ ಹಿಡಿತಕ್ಕೆ ನಿಲುಕದ ಬದುಕಿನ ಘಟನೆಗಳಿಗೆ ವಿಧಿಯಾಟ ಅನ್ನುವ ಒಂದು ಹೆಸರನ್ನೋ ನೀಡಿದ್ದೇವೆ. ಇಲ್ಲಿ ವಿಚಾರ ಮಾಡ ಹೊರಟ ವಿಷಯವೂ ಅದೇ. ವಿಧಿಯಾಟ ನಿಜವೆ? ಅಥವಾ ನಾವೇ ಸೃಷ್ಠಿಸಿಕೊಂಡಿರುವ ಸಾಮಾನ್ಯವಾಗಿ ಅರಿವಿಗೆ ಎಟುಕದ ಬ್ರಮೆಯೆ?

ಸದ್ಯಕ್ಕೆ ಕನಸನ್ನೇ ತೆಗೆದುಕೊಳ್ಳಿ ಕನಸಿಗೂ ಮತ್ತು ಎಚ್ಚರ ಅಂದುಕೊಡ ಈ ಸ್ಥಿತಿಗೂ ನಿಜವಾಗಿ ಯಾವುದೇ ಭೇದವಿಲ್ಲ ಎರೆಡೂ ಬ್ರಮೆಯೆ ಎರೆಡೂ ಮಾಯೆಯೆ ಎಂದು ತಮ್ಮ ಮಾಂಡುಕ್ಯ ಕಾರಿಕೆಯಲ್ಲಿ ನುಡಿದವರೆ ಆಧಿ ಶಂಕರರ ಗುರುಗಳಾದ ಗೌಡಪಾದರು. ಕನಸಿನಲ್ಲಿ ಕಂಡುಬರುವ ರಸ್ತೆ,ಕಾರು,ನಾಯಿ,ನರಿ,ತಿಂಡಿ ತಿನಿಸುಗಳು ಕನಸಿನಲ್ಲಿದ್ದಾಗ ಎಲ್ಲವೂ ನಿಜವೇ. ಅಲ್ಲಿ ಅನುಭವಿಸಿದ ಸುಖದುಃಖಗಳೂ ನಿಜವೆ. ಅಲ್ಲಿ ಕಂಡ ಸಹಪಾಠಿ ಅವನೊಡನೆ ನಡೆದ ಮಾತು ಕತೆ ಎಲ್ಲವೂ ನಿಜವೆ. ಆದರೆ ನಿದ್ದೆಯಿಂದ ಎದ್ದ ಬಳಿಕ ತಿಳಿಯುವುದು ಇವೆಲ್ಲ ತನ್ನದೇ ಸೃಷ್ಠಿ ಅಲ್ಲಿದ್ದದ್ದು ತನ್ನ ಹೊರತು ಮತ್ತೊಂದಿಲ್ಲ. ತಿನಿಸೋ ನಾನೆ,ತಿಂದವನೂ ನಾನು, ತಿನ್ನಲು ಕೊಟ್ಟಾತನೂ ತಾನೆ. ಈ ದೃಷ್ಠಿಯಿಂದ ಗಮನಿಸಿದಲ್ಲಿ ಕನಸು ತನ್ನದೇ ಸೃಷ್ಠಿ. ತನ್ನ ಸುಪ್ತ ಸಂಸ್ಕಾರಗಳು ಆಸೆ ಆಕಾಂಕ್ಷೆಗಳು ದಿನವಿಡೀ ಮಾಡಿದ ಯೊಚನೆಗಳು ಕೆಲಸ ಕಾರ್ಯಗಳ ಪರಿಣಾಮಯೇ ಕನಸು. ಇಲ್ಲಿ ವಿಕಲ್ಪ ಅಂದರೆ ಫ್ಯಾಂಟೆಸಿ ಕೋಡಾ ಸೇರಿ ಕೊಂಡಿರುತ್ತದೆ.

ಕನಸು ತನ್ನದೇ ಸೃಷ್ಠಿ ಮನಗೆ ಬೇಕಾದಂತೆ ನಾವು ಕನಸುಗಳನ್ನು ನೋಡಬಹುದು ಎಂದಮೇಲೆ ಈ ಎಚ್ಚರ ಅಂದು ಕೊಂಡ ಈ ಸ್ಥಿತಿಯಲ್ಲಿ ಆಗುವ ಪ್ರತಿಯೊಂದು ಘಟನೆಗಳೂ ನಮ್ಮದೇ ಸೃಷ್ಠಿ. ವಿಧಿ ಎಂದು ಕೈಬಿಟ್ಟದ್ದು ವಿದಿಯಲ್ಲ.

ರತ್ರಿ ಮಲಗುವಾಗ ಮಾಡಿದ ಸಂಕಲ್ಪಗಳು ಬೀಜ ರೂಪದಲ್ಲಿದ್ದು ಬೆಳಗ್ಗೆ ಎದ್ದೊಡನೆ ಪುಟಿದೇಳುತ್ತವೆ. ಹೀಗೆ ಬೆಳಗ್ಗೆ ಮಾಡಿದ ಶುಭಕಾಮನೆಗಳು ಸಲ್ಲಿಸಿದ ಪ್ರಾರ್ಥನೆಗಳು ದಿನವಿಡೀ ನಮ್ಮನ್ನು ಸಲಹುತ್ತಿರುತ್ತವೆ. ಆ ದಿನ ನಡೆಯುವ ಎಲ್ಲಾ ವಿದ್ಯಾಮಾನಗಳು ನಮ್ಮದೇ ಸೃಷ್ಠಿ ಎಂಬುದು ನಮಗೆ ಅರಿವಾಗುತ್ತದೆ.

ಯಜ್ಜಾಗ್ರತೋ ದೂರಮುದೈತಿ ದೈವಂ
ತದುಸುಪ್ತಸ್ಯ ತಥೈವೇತಿ
ದೂರಂಗಮಂ ಜ್ಯೋತಿಷಾಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು

Oct 4, 2016

The stillness of mind

In a similar way short circuit occurs in a circuit and burns itself in the same way when
Multiple thoughts with no relation with preceding thought pop-ups which eventually burns
You. That is what is known as wondering of the  mind,  in yoga sutra it is termed  ‘ vritti ‘.
When too much of vrittis arises and makes one restless and it start controlling
The man, then it is leading to madness. Eventually death!

Always being in the meditative state or what is known as being in yoga
Is the only relief from the bottom less pit of thought world. But in order
To reach the above mentioned state of mind one has to begin with the
Mind again. It is like killing the killer himself! When you try to sit for a meditation
Your mind starts murmuring! It pings you it kicks in your buts. Mind whispers
‘hey man! What are you doing you don't have time!’ ‘get up you have
Lot of work pending'  ‘hey some one texted you go see it'.

These thoughts of mind are infinite in its nature there will always be something
When you thought you finished thinking everything it's like a random number
Generator in a computer. Bubbles rising from the depth of a ocean and it's at
Your mind which is the surface of the ocean and leads you to perform action.
What makes the bubbles to be different in size and colour is depends
On the sanskaras (subtle impressions) of the ocean. Here ocean is the
Mind and coloured bubbles are the varieties of thoughts. The wise man
Blames not the outcomes but the subtle impressions within. It's the seeds though looks
Alike leads to the different trees the different outcomes.

So it's clear that previous impression leads to the present thoughts. How
To come out from this end less cycles of this action reaction impression action And on on.
It is through practise perseverance and self-realisation of true self.


Aug 23, 2016

Illusion of time

Have you ever wondered why you are Losing time faster As you getting older? Days into week, weeks into a month, Months to a year, just like that your losing time, as you get up One morning it's an other year! It was probably not the case When u was a child! What is time? Does it have to do any Thing with individual? Is time a linear thing! Wait in reality As you feel it the time moves! In reality which you can not Comprehend time is just an other dimension. Time moves into the inner loops, which means like the Value of a pi which neither losses to 3 nor gains to 4, but which Moves for ever.
If you are expecting salary on the end of every month you will end the rest of your days Quickly and unnoticeably. Because you have kept your mind and sole in the future So you lose this present. Things were not the same when you was a kid, weren't they?


Aug 20, 2016

Who moved my cheese!

I was riding a motor cycle on a high way with 60 km speed. I always maintained left lane but suddenly a car from the opposite direction took the you turn through a divider and entered my lane. And there was a kid crossing the road. I just got confused and hit by the car. The accident was
horrific, I am critically ill admitted to the hospital. I also do not have insurance to claim.

Now whom to blame?
Is it a fault of the kid crossing the road?
Is it the my fault of not slowing down at the divider?
Or is this the car drivers mistake?
Whom should I blame? Insurance company?

Within a minute all my problems got solved just like that. I didn't have to claim any
Insurance. I was all well! Neither have to blame car driver nor to blame kid. What had just happened
It's a out of box solution can you guess it?
I just woke up from the dream!

All of our day today troubles are like this there is none to blame other than you.
Yes it you who created the high way. It is you who crossed at the divider as a car driver.
It is you who comes as a kid. It's you and you alone in this universe of you. Though the
Universe and people appears in multiple having names and forms. Though the world seems
In motion. In reality no body moved your cheese! Your self is cheese! Wake up you impersonal self!

Aug 18, 2016

ಕಳೆದ ನಿಮಿಷ

ರಸ್ತೆ ಬದಿಯಲಿ ಮಲಗಿದವನ ಕೇಳಿರಿ
ಮನೆಗೆಷ್ಟು ಬೆಲೆ?
ನಾಳೆಸಾಯಲು ಹೊರಟ ರೋಗಿಯ ಕೇಳಿರಿ ನಿನ್ನೆಗಿತ್ತೆಷ್ಟು ಬೆಲೆ?

ಕಳೆಯುವ ಮುನ್ನ ಇರುವನು ಅರಿಯಿರಿ
ಬದುಕಲಿ ಮೊದಲು ಬೆರೆವುದ ಕಲಿಯಿರಿ
ಕಾಲನ ಒಡಲಿಗೆ ಕಳೆದವರು ಸಿಗುವರೆ
ವ್ಯರ್ಥದಿ ಕಳೆದ ಕಾಲವು ಮರಳುದೆ
ಸಾವಿನ ಸುಳಿಯಲಿ ಸಿಲುಕಿದವನಿಗಷ್ಟೆ ಗೊತ್ತು ನಿನ್ನೆಯು ಕಳೆದ ನಿಮಿಷದ ಬೆಲೆ
ಮನೆ ಮಠ ಇಲ್ಲದೆ ಬೀದಿಲಿ ಮಲಗಿಹ ತಿರುಕನಿಗಷ್ಟೆ ಗೊತ್ತು ಹೊದ್ದ ಕಂಬಳಿಯ ಬೆಲೆ!

Aug 15, 2016

The game of getting lost

Only when you get lost only then you would know the value of being found.i have been playing this game since time immemorial. I always took the different path to the same destination as long as the direction is right there is always a hope of reaching it. Some times getting lost helplessly and then
Converging to the right path. This little habit of adventure has now grown like a tree and rooted
In depth with me. Along the new way I choose there is always new places to explore new people to
Meet. More then everything happiness of getting your self found! Before I had a cycle this was done
By a long walk. Now it is different kind of fun  with my bike. This too has the fear of puncture, fear of
Getting exhausted but this makes the journey still more adventurous.!