Sep 2, 2022

Gravitational lensing ಗುರುತ್ವಾಕರ್ಷಣೆಯ ದರ್ಪಣ

ಬ್ರಹ್ಮ ಸತ್ಯ ಜಗತ್ತು ಮಿತ್ಯ ಎಂಬ ವೇದಗಳಲ್ಲಿ ಕಾಣ ಸಿಗುವ ಸತ್ಯಕ್ಕೆ ಒಂದು ಉದಾಹರಣೆ. ಇದು ಇತ್ತೀಚೆಗೆ ತೆಗೆದ ಗ್ಯಾಲಾಕ್ಸಿ SGAS J143845+145407 ಇದರ ಚಿತ್ರ. ಇದನ್ನು ಭೂಮಿಯ ಹೊರಗೆ ಸುತ್ತುತ್ತಾ ಇರುವ 'ಹಬಲ್ ದೂರದರ್ಶಕ' ಇದರ ಮುಖಾಂತರ 18 July 2022, 06:0AM ಗೆ ತೆಗೆಯ ಲಾಗಿದೆ.

ಈ ಚಿತ್ರದ ಕುತೂಹಲಕಾರಿ ಅಂಶ ವೆಂದರೆ. ಒಂದೇ ಗ್ಯಾಲಾಕ್ಸಿ ಮೂರು ಕಡೆಗೆ ಕಾಣಿಸಿಕೊಳ್ಳುತ್ತಿರುವುದು. ಇದನ್ನು 'ಗುರುತ್ವಾಕರ್ಷಣೆಯ ದರ್ಪಣ/ಕನ್ನಡಿ' Gravitational lensing ಎಂದು ವಿಜ್ಞಾನಿಗಳು ಕರೆದಿದ್ದಾರೆ.

ನಾವು ಆಕಾಶದಲ್ಲಿ ನೋಡುವ ಎಷ್ಟೋ ನಕ್ಷತ್ರಗಳು, ಗ್ಯಾಲಾಕ್ಸಿಗಳು ಅಲ್ಲಿ ಇರಲೂ ಬಹುದು ಇಲ್ಲದೆಯೂ ಇರಬಹುದು. ಅವುಗಳಿಂದ ಹೊರಟ ಬೆಳಕು ನಮ್ಮನ್ನು ತಲುಪಲು ಕೊಟ್ಯಾಂತರ ಬೆಳಕಿನ ವರ್ಷಗಳು ತಗಲುವ ಕಾರಣ. ನಾವು ನೋಡುತ್ತಿರುವುದೆಲ್ಲ ಅವುಗಳ ಭೂತಕಾಲ past tense.



ಇದನ್ನೇ ವೇದಗಳು ಜಗತ್ತು ಒಂದು ಮಾಯೆ. ಇದೆಲ್ಲ ದೇವರ ಲೀಲೆ ply. ಎಂದಿರುವುದು. ಈ ವೇದ ವಾಕ್ಯಗಳನ್ನು ಪುಷ್ಟೀಕರಿಸುವ ಆದಿ ಶಂಕರಾಚಾರ್ಯರ ದಕ್ಷಿಣಾ ಮೂರ್ತಿ ಸ್ತೋತ್ರ ಇಲ್ಲಿ ವಿಶೇಷ.

ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ |

ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ

World is but the mirror image of what's within. ಜಗತ್ತು ಕನ್ನಡಿಯೊಳಗೆ ಕಾಣುವ ಒಂದು ಪ್ರತಿಬಿಂಬ ಅದರ ಬಿಂಬ ತಮ್ಮೊಳಗೇ ಇದೆ. ಅದು ಸತ್ಯ,ಜ್ಞಾನ ಮತ್ತು ಅನಂತವಾದ ಬ್ರಹ್ಮ.

Jan 7, 2019

ಅನಿವಾರ್ಯ

"ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಂದು ನೀವು
ಯಾರು ಕೇಳಲಿ ಎಂದು ನಾ ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ"

ಈ ಹಾಡು ಯಾಕೊ ನೆನಪಿಗೆ ಬಂತು, ಅದರಲ್ಲಿ ಹಾಡುವವಗೆ ಹಾಡು ಅನಿವಾರ್ಯ ಕರ್ಮ ಯಾರು ಕಿವಿ ಮುಚ್ಚಿದರೂ ಆತನಿಗಿಲ್ಲ ಚಿಂತೆ
ನನಗೆ ಈ ಬರವಣಿಗೆಯೇ ಒಂದು ಬಗೆಯ ಅನಿರ್ಧಿಷ್ಠ ಅಸಂಗತ ಕೇಮೆ. ಯಾಕೆ ಬರೆಯುತ್ತಿದ್ದೇನೆ ನನಗಂತು ಗೊತ್ತಿಲ್ಲ ಯಾರಾದರು ಒದಿದರೋ ಇಲ್ಲವೋ
ಎಂಬುದೂ ನನ್ನ ಮೇಲೆ ಅಷ್ಟೊಂದು ಪರಿಣಾಮ ಬಿದ್ದಹಾಗೆ ಕಾಣುವುದಿಲ್ಲ. ಆದರೆ ಒಂದಂತೂ ನಿಜ! ಎಷ್ಟೋ ದಿನಗಳ ಅಥವಾ ಕೆಲವೊಮ್ಮೆ ವರ್ಷಗಳ ಬಳಿಕ
ಇವೇ ಬರಹಗಳು ನನ್ನ ಕಣ್ಣಿಗೆ ಬಿದ್ದಾಗ ಒಂದು ಬಗೆಯ ಹಳೆಯ ಫೋಟೊಗಳನ್ನು ನೋಡಿದ ಅನುಭವ ನನಗಾಗುತ್ತದೆ! ಕೆಲವೊಮ್ಮೆ ಆ ಬರಹಗಳು ನಗೆ ತರಿಸಿದರೆ
ಮತ್ತೊಮ್ಮೆ  ಹೆಮ್ಮೆ ಮಗದೊಮ್ಮೆ ನಾನೆಂತಾ ಎಮ್ಮೆ ಆಗಿದ್ದೆ ಅನ್ನಿಸುತ್ತೆ.