Oct 31, 2012

ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು..


ರಾಗವಾಗಿದ್ದ ಸಹ್ಯಾದ್ರಿ
ಇಬ್ಬಾಗವಾಗಿದೆ.
ಭೀತಿ ಇಲ್ಲದೆ ಸಂಚರಿಸುತಿದ್ದ ವನ್ಯ ಸಂಕುಲಕ್ಕೆ
ಜೀವ ಭಯ ಬಾದಿಸಿದೆ.
ಸ್ವತಂತ್ರವಾಗಿ ಹಾರುತಿದ್ದ ಹಕ್ಕಿಗಳು
ವಿದ್ಯುತ್ ತಂತಿ ತೊಡರಿ ಸಾಯಬೇಕಾಗಿದೆ.
ಸಹ್ಯಾದ್ರಿ ಹರಿದು ಹಂಚಿ ಅಂಟಿಸಲಾಗದ ಗಾಯವಾಗುತ್ತಿದೆ
ಆದರೂ ವಿದ್ಯುತ್ ಹರಿಯುತ್ತಲೇ ಇದೆ.
ಬೇಲಿಯೆ ಎದ್ದು ಹೊಲ ಮೈದಾಗ ನಂಬುವುದಾರನ್ನು.
ಸರ್ಕಾರದ ಒಳ್ಳೆ ಕೆಲಸಕ್ಕೆ ಕುದುರೆ ಮುಖಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಇನ್ನೂ ಅನೇಕ ಒಳ್ಳೆ ಕೆಲಸ ಮಾಡಲು ಹೊರಟಿರುವ
ಸರ್ಕಾರವನ್ನ ನಿಲ್ಲಿಸುವವರಾರು.
ನೊಂದವರಿಗೆ ನ್ಯಾಯ ನೀಡಬಲ್ಲ ಕೋರ್ಟ್ ಇದ್ರೆ ಹೇಳಿ
ಕಾಡಾನೆ ಕಾಯ್ತಾ ಇವೆ.
ಪಾಪ ಅವಕ್ಕೆ ನಮ್ಮ ಖಡತಗಳ, ಕಾಂಸ್ಟಿಟ್ಯೂಷನ್ಗಳ ಜ್ಞಾನ ಇಲ್ಲ.


ಅಂದು ಬರೆದವುಗಳು..
ಪ್ರಯೋಜನಕ್ಕೆ ಬಾರದೆ ಅವ್ಟ್ ಡೇಟೇಡ್ ಆಗಿವೆ. ಮಾಹಿತಿಗಿರ್ಲಿ ಅಂತ.
ಇಂದನ ಪರಿಸ್ಠಿತಿ ಹೀಗಿದೆ.. ನಾಳೆ, ಯೋಚಿಸುವುದೂ ಕಸ್ಟ.
ಬಾರಿಮಲೆಯ ಒಂದು ಸುಂದರ ದೃಶ್ಯ

ಗೂಗಲ್ ಮ್ಯಾಪ್ - ಪರ್ವತಕೇಂದ್ರಿತ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.
ಗೂಗಲ್ ಮ್ಯಾಪ್ - ಉಪಗ್ರಹ ದೃಶ್ಯ- ಉಡುಪಿಯ ನಾಡಿಕೂರು ವಿಧ್ಯುತ್ ಘಟಕದಿಂದ ಹಾಸನದ ಶಾಂತಿಗ್ರಾಮ ವಿಧ್ಯುತ್ ಸಂಗ್ರಹಕಕ್ಕೆ ಜೋಡಿಸುವ ಟವರ್ನ ಹಾದಿ.

ಟವರ್ನ ಬುಡದಲ್ಲಿ ಮಬ್ಬಾಗಿ ಕಾಣುವ ಅಪರಿಚಿತ ವ್ಯಕ್ತಿಗಳು 

ಹಸಿರು ಹಾಸಿನ ಮೇಲೆ.. ಕೆದಕಿದ ಕೆಮ್ಮಣ್ಣು..

ಸರಪಣಿಯಂತೆ ಕಾಣುವ ವಿದ್ಯುತ್ ಟವರುಗಳು

ಟವರ್ ಹತ್ತಿರದ ನೋಟ

ಗೂಗಲ್ ಮ್ಯಾಪ್ ಇಲ್ಲಿದೆ.



ಗೂಗಲ್ ಮ್ಯಾಪ್ ದೊಡ್ಡದಾಗಿಸಲು ಇಲ್ಲಿ ಕ್ಲಿಕ್ ಮಾಡಿ

Oct 15, 2012

ಸಾಫ್ಟ್ ವೇರ್ ಜಗತ್ತಿನಲ್ಲೊಂದು ಮರೆಯಬಾರದ ಗೆಳೆತನ!

ಚಿತ್ರದಲ್ಲಿರೊ ಈ  ಪುಣ್ಯಾತ್ಮರುಗಳು ಯಾರು ಅಂತ ತಿಳಿತಾ?
ಇಲ್ಲ ಅಲ್ವಾ?
ಒಂದೆ ಮಾತಲ್ಲಿ ಹೇಳಿದ್ರೆ "They are friends " ಎಡಬದಿಯಲ್ಲಿ ಕಾಣಿಸೊದು ಕೆನ್ ತಾಮ್ಸನ್ ಬಲಕ್ಕೆ ಡೆನಿಸ್ ರಿಚಿ.
'ಯಾರ್ರೀ ಇದು ರಿಚಿ-ಗಿಚಿ ಅಂತಿರಾ'? ಅಂದ್ರಾ..
ಇವರುಗಳು ಮತ್ಯಾರು ಅಲ್ಲಾ ಕಂಪ್ಯೂಟರ್ ಅನ್ನೊ ಕಾಲಿ ಡಬ್ಬಿಗೆ ಜೀವ ತುಂಬಿ, ಹಣೆಬರಹ ಬರೆದು, ನಮ್ಮಂತ ಸಾವ್ರಾರು ಜನ ದುಡಿತಾ ಇರೊ ಇವತ್ತಿನ ಸಾಫ್ಟ್ವೇರ್ ಫೀಲ್ಡ್ ಸೃಷ್ಟಿಸಿದ ಸೃಷ್ಟಿಕರ್ತರು.
C ಇವತ್ತಿಗೂ ಎಂಥಾ ಒಂದು ಪವರ್ ಫುಲ್ ಪ್ರೊಗ್ರಾಮಿಂಗ್ ಲಾಂಗ್ವೇಜ್ ಗೊತ್ತ?
ಈ ಪ್ರಶ್ನೆಗೆ ಉತ್ತರ ಬೇಕಿದ್ರೆ ಒಬ್ಬ ಸಿಸ್ಟಮ್ ಸಾಫ್ಟ್ವೇರ್ ಕರ್ತೃ ವನ್ನ ಪ್ರಶ್ನಿಸಿ ನೋಡಿ..
ಇಲ್ಲಾ ಅಂದ್ರೆ ಡಿವಯ್ಸ್ ಡ್ರೈವರ್ ಬರೆತಾ ಇರೊ ವ್ಯಕ್ತಿಯನ್ನ ಕೇಳಿ ನೋಡಿ.

ಇಂಥಹ C ಅನ್ನ ಸೃಷ್ಟಿ ಮಾಡಿದ್ದು ಈ ಗೆಳೆಯರೆ. ಇದೇ C ನಲ್ಲಿ ೧೯೬೯ ರಲ್ಲಿ 'ಯುನಿಕ್ಸ್' ಎಂಬ ಆಪರೇಟಿಂಗ್ ಸಿಸ್ಟಮ್ ಬರೆದು ಅದರ ಸೋರ್ಸ್ ಕೋಡನ್ನ ಉಚಿತವಾಗಿ ಹೊರಬಿಟ್ಟು ಯಾವುದೆ ಪ್ರತಿಫಲ ಬಯಸದೆ ಇದ್ದದ್ದೂ ಇವರುಗಳ ದೊಡ್ಡ ಮನಸ್ಸು ದೂರದೃಷ್ಟಿ.

ಬಿಲ್‍ಗೇಟ್ಸ್ ನಂತೆ ಅಂದು ಈ ಡೆನಿಸ್ ಅಜ್ಜ ಎಲ್ಲಾದ್ರು ಯುನಿಕ್ಸ್ ಅನ್ನ ಹಣಕ್ಕಾಗಿ ಮಾರಿದ್ರೆ ಅವ್ರು ಇವತ್ತು ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರ್ತಾ ಇದ್ರು, ಮಾತ್ರವಲ್ಲ ಈ ಲಿನಕ್ಸ್, ಸೊಲಾರಿಸ್, ಉಬುಂಟು, ತಗ್ಗುಂಟು ಎಲ್ಲಾ ಹುಟ್ಟಿಕೊಳ್ತನೆ ಇರ್ಲಿಲ್ಲ ಬಿಡಿ. ಎಲ್ಲಾ ಇರ್ಲಿ ಈ ಓಪನ್ ಸೋರ್ಸ್ ಅನ್ನೊ ಕ್ರೇಸೇ ನಮ್ಮ್ ಜನಕ್ಕೆ ಇರ್ತಾ ಇರ್ಲಿಲ್ಲ.

ಅಕ್ಟೊಬರ್ 5, 2011 ಸ್ಟೀವ್ ಜಾಬ್ಸ್ ನಮ್ಮನ್ನೆಲ್ಲ ಅಗಲಿದ ದಿನ. ನಮಗೆಲ್ಲ ಗೊತ್ತೇ ಇದೆ, ಅದೇ ತಿಂಗಳಲ್ಲಿ ಇಹಲೋಕ ತ್ಯಜಿಸಿದ ಇನ್ನೊಬ್ಬ ವ್ಯಕ್ತಿ ಈ ಡೆನಿಸ್ ಅಜ್ಜನ ಬಗ್ಗೆ ಯಾರಿಗಾದ್ರು ಗೊತ್ತಿತ್ತ? ಇಲ್ಲ ಅಲ್ವ, ಏಕೆ?

ಜಗತ್ತಿನ ಮರೆಯಲಾಗದ ಪ್ರೇಮ ಕತೆ 'ಟೈಟಾನಿಕ್' ಆದ್ರೆ ನನ್ನಪಾಲಿಗೆ ಜಗತ್ತಿನ ಮರೆಯಬಾರದ ಗೆಳೆತನ ಈ ಅಜ್ಜಂದಿರದ್ದು.
ನನಗಂತು ಇವರುಗಳು ರೋಲ್ ಮಾಡೆಲ್!
ನಿಮ್ಗೆ?