May 20, 2016

ಕನ್ನಡದಲ್ಲಿ ವೈದಿಕ ಗಣಿತ ಭಾಗ-1 : ಸೂತ್ರಗಳು

१. एकाधिकेन पूर्वेण आनुरूप्येण
२. निखिलं नवतश्चरमं दशतः शिष्यते शेषसंज्ञः
३. ऊर्ध्वतिर्यग्भ्याम् आद्यमाद्येनान्त्यमन्त्येन
४. परावर्त्य योजयेत् केवलैः सप्तकं गुण्यात्
५. शून्यं साम्यसमुच्चये वेष्टनम्
६. (आनुरूप्ये) शून्यमन्यत् यावदूनं तावदूनम्
७. संकलनव्यवकलनाभ्याम् यावदूनं तावदूनीकृत्य वर्गं च योजयेत्
८. पूरणापूरणाभ्याम् अन्त्ययोर्दशकेऽपि
९. चलनकलनाभ्याम् अन्त्ययोरेव
१०. यावदूनम् समुच्चयगुणितः
११. व्यष्टिसमष्टिः लोपस्थापनाभ्यां
१२. शेषाण्यङ्केन चरमेण विलोकनं
१३. सोपान्त्यद्वयमन्त्य्म् गुणितसमुच्चयः समुच्चयगुणितः
१४. एकन्यूनेन पूर्वेण ध्वजाङ्क
१५. गुणितसमुच्चयः आनुरूप्येण
१६. गुणकसमुच्चयः शिष्यते शेषसंज्ञः

 
೧. ಏಕಾಧಿಕೇನ ಪೂರ್ವೇಣ - ಆನುರೂಪ್ಯೇಣ
೨. ನಿಖಿಲಂ ನವತಶ್ಚರಮಂ ದಶತಃ - ಶಿಷ್ಯತೇ ಶೇಷಸಂಜ್ಞಃ
೩. ಊರ್ಧ್ವತಿರ್ಯಗ್ಭ್ಯಾಮ್ - ಆದ್ಯಮಾದ್ಯೇನಾನ್ತ್ಯಮನ್ತ್ಯೇನ
೪. ಪರಾವರ್ತ್ಯ ಯೋಜಯೇತ್ - ಕೇವಲೈಃ ಸಪ್ತಕಂ ಗುಣ್ಯಾತ್
೫. ಶೂನ್ಯಂ ಸಾಮ್ಯಸಮುಚ್ಚಯೇ - ವೇಷ್ಟನಮ್
೬. (ಆನುರೂಪ್ಯೇ) ಶೂನ್ಯಮನ್ಯತ್ - ಯಾವದೂನಂ ತಾವದೂನಮ್
೭. ಸಂಕಲನವ್ಯವಕಲನಾಭ್ಯಾಮ್ - ಯಾವದೂನಂ ತಾವದೂನೀಕೃತ್ಯ ವರ್ಗಂ ಚ ಯೋಜಯೇತ್
೮. ಪೂರಣಾಪೂರಣಾಭ್ಯಾಮ್ - ಅನ್ತ್ಯಯೋರ್ದಶಕೇಽಪಿ
೯. ಚಲನಕಲನಾಭ್ಯಾಮ್ - ಅನ್ತ್ಯಯೋರೇವ
೧೦. ಯಾವದೂನಮ್ - ಸಮುಚ್ಚಯಗುಣಿತಃ
೧೧. ವ್ಯಷ್ಟಿಸಮಷ್ಟಿಃ - ಲೋಪಸ್ಥಾಪನಾಭ್ಯಾಂ
೧೨. ಶೇಷಾಣ್ಯಙ್ಕೇನ ಚರಮೇಣ - ವಿಲೋಕನಂ
೧೩. ಸೋಪಾನ್ತ್ಯದ್ವಯಮನ್ತ್ಯ್ಮ್ - ಗುಣಿತಸಮುಚ್ಚಯಃ ಸಮುಚ್ಚಯಗುಣಿತಃ
೧೪. ಏಕನ್ಯೂನೇನ ಪೂರ್ವೇಣ - ಧ್ವಜಾಙ್ಕ
೧೫. ಏಕಾಧಿಕೇನ ಪೂರ್ವೇಣ - ಆನುರೂಪ್ಯೇಣ
೧೬. ನಿಖಿಲಂ ನವತಶ್ಚರಮಂ ದಶತಃ - ಶಿಷ್ಯತೇ ಶೇಷಸಂಜ್ಞಃ


May 17, 2016

ಈ ಕ್ಷಣ ಈ ಜನ

ವ್ಯಾಸಾಂಗ ಮುಗಿಸಿ ಹಲವು ವರ್ಷಗಳಾದ ಮೇಲೆ ನೀವು ನಿಮ್ಮ ಹಳೆಯ ಫೋಟೊ ಗಳನ್ನೊಮ್ಮೆ ನೋಡುತ್ತಿದ್ದೀರಿ ಅಥವಾ ಅದೇ ಹಳೆಯ ತರಗತಿ ಯೊಳಗೆ ಹೋಗಿದ್ದೀರಿ ಎಂದೆಣಿಸಿ. ಇವು ಯಾವುವೂ ನಿಮಗೆ ಆ ಕ್ಷಣ ಆ ಜನರನ್ನು ಮರಳಿ ಕೊಡಬಲ್ಲವೆ? ಜೀವನ ಎಷ್ಟು ವಿಚಿತ್ರ ಮತ್ತು ವಿಶೇಷ  ಗಮನಿಸಿ. ಎಲ್ಲಾ ಚರಾಚರವೂ ಬದಲಾವಣೆ ಹೊಂದುತ್ತಿರುತ್ತವೆ ಈ ಜಗತ್ತಿನಲ್ಲಿ ಬದಲಾವಣೆಯೇ ಸ್ಥಿರವಾದ ವಸ್ತು. ಕಾಲನೇ ಎಲ್ಲರ ಎಲ್ಲದರ ಜನಕ ಎಲ್ಲದರ ಭಕ್ಷಕ. ನಾವು ನಮ್ಮವರು ಈ ಸಂಭಂದಗಳು ಎಲ್ಲವೂ ತಾತ್ಕಾಲಿಕ ಎಂಬ ಒಂದೇ ಕಾರಣದಿಂದ ಇವೆಲ್ಲ ಅತ್ಯಮೂಲ್ಯ ಎಲ್ಲದಕ್ಕೂ ಒಂದು ಬೆಲೆ. ಶಾಶ್ವತ ನಾವು ನೀವಲ್ಲದ ಕಾರಣ ಅಶಾಶ್ವತರಾದ ನಮ್ಮೊಳಗೆ ಪ್ರೀತಿ ಮೋಹ. ಟೂ ಸೈಡ್ಸ್ ಆಫ್ ಅ ಕಾಯಿನ್ ಆರ್ ಕಾಂಪ್ಲಿಮೆಂಟಿಂಗ್ ಈಚ್ ಅದರ್. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವ ಇಲ್ಲ. ಸಾವಿನಿಂದಲೇ ಜೀವನಕ್ಕೆ ಅರ್ಥ ಒಮ್ಮೆ ಯೋಚಿಸಿ. ನೀವು ಮತ್ತು ನಿಮ್ಮ ಸುತ್ತಲಿನ ಎಲ್ಲವೂ ಕಾಲನ ಕಾವಿಗೆ ಬಾಡುತ್ತಿರುವುದನ್ನು ಗಮನಿಸಿ. ಈ ಕ್ಷಣ ಈ ಜನ ಸುಂಧರ ವಾಗಿ ಅರಳಿನಿಂತಿಲ್ಲವೇ? ಹಾಗಿದ್ದಲ್ಲಿ ಈ ಗಳಿಗೆ ಈ ಗೆಳೆತನದಲ್ಲಿ ನೀವಾಗಿರಿ. ಮುಂದೊಂದು ದಿನ ಇದೇ ಶಾಲೆಗೆ ಮರಳಿದಾಗ ಸ್ಥಾವರ ನಿಂತಿರಬಹುದು ಕಂಬಗಳು ಮೇಜು ಕುರ್ಚಿಗಳು ಹಾಗೆಯೆ ಇರಬಹುದು ಆದರೆ ಆ ಕ್ಷಣ ಆ ಜನ ಆ  ಒಡನಾಟ ಮರಳಿ ಬಂದೀತೆ?

May 14, 2016

ಫಲಾಫಲ

ಇಂದಿಗೆ ಸಾವಿರಾರು ವರ್ಷಗಳಿಗೂ ಹಿಂದೆ ಇನ್ನೂ ಮುಂದೆ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ಚಾಚೂ ತಪ್ಪದೆ ಎದ್ದು ಸಂಜೆಗೆ ತನ್ನ ಡ್ಯೂಟಿ ಮುಗಿಸಿ ತೆರಳುವ ಆ ಸೂರ್ಯನಿಗೆ ನನ್ನ ಹೊಗಳಿಕೆ ತೆಗಳಿಕೆಯ ಅಂಜಿಕೆ ಇದೆಯೆ? ಬೆಂಕಿ ಬೆಚ್ಚಗಿದೆ ಎಂದು ಹೊಗಳಿದಾಗ ಭೀಗಲಿಲ್ಲ ಸುಟ್ಟಿತೆಂದು ಶಪಿಸಿದಾಗ ಬೇಸರಿಸಲಿಲ್ಲ. ಬೀಸುವಗಾಳಿ ಹರಿಯುವ ನೀರು ನನ್ನ ಪ್ರತಿಕ್ರಿಯೆ ಬಯಸಲಿಲ್ಲ. ಇವರೆಲ್ಲರ ಮುಂದೆ ನಾನೆಷ್ಟರವ? ನಾಮಾಡಿದ ಕಿಂಚಿತ್ ಕೆಲಸಕ್ಕೆ ಯಶಸ್ಸು ಬಯಸಬೇಕೆ? ಶೇಕಡ 99.99 ಭಾಗ ನಾನು ನಂದು ಎಂಬುದು ನಂದಲ್ಲ. ಬರೆಯುತ್ತಿರುವ ಈ ಭಾಷೆ ಕನ್ನಡ ಇಲ್ಲಿ ಬಳಸಿದ ಪದಗಳು ಅಲ್ಲಿ ಇಲ್ಲಿ ಕದ್ದವು. ನನ್ನ ದೇಹನಿರ್ಮಿಸಿದ ಆ ಜೀನೂ ನನ್ನ ಪೂರ್ವಜರಿಗೆ ಸೇರಿದ್ದು. ನೈಜ್ಯತೆ ಹೀಗಿರಲು ನಾನು ನಂದು ಎನ್ನುವುದು ಎಷ್ಟು ಮೊರ್ಖ ತನ. ತಾಯಿ ಋಣ ತಂದೆ ಋಣ ಗುರು ಹಿರಿಯರ ಋಣ ನೆಲದ ಋಣ ಜಲದ ಋಣ ಅನ್ನದ ಋಣ. ನಾನು ತೆವಳುತ್ತಾ ನಿಲ್ಲಲೊಸಗಿ ಬೀಳಲು ಅಂದು ಯಾರಾರೋ ಕೈ ಹಿಡಿದು ಮೇಲೆತ್ತಿ ನೆಡೆಸಲಿಲ್ಲವೆ. ಅವರೆಲ್ಲರ ತೀರಿಸಲಾರದ ಋಣ ಇದೆಲ್ಲದರ ನಡುವೆ ಸಾಲದ ಹೊರೆ ಹೊತ್ತಿರುವ ನಾನು ಬಡ್ಡಿಗೆ ಸಾಲ ಕೊಡಬಹುದೆ. ಕೆಲಸ ಮಾಡುವುದಷ್ಟೆ ನನ್ನ ಧರ್ಮ ಫಲಾಫಲ ನನ್ನ ಪರಿದಿಯ ಹೊರಗಿನ ಮಾತು.