Aug 12, 2012

ಸುಶಿಲ್ ಗೆದ್ದಿದ್ದು ನಮ್ಮ ಪಾಲಿಗೆ ಚಿನ್ನವೇ ಹೊರತು ಬೆಳ್ಳಿಯಲ್ಲ



ತಾಯಿನಾಡಿಗೆ ೫೬ ವರ್ಷಗಳ ಬಳಿಕ ೨೦೦೮ ಬೀಜಿಂಗ್  ಒಲಿಂಪಿಕ್ಸ್ ನಲ್ಲಿ ಕಂಚಿನ  ಪದಕವನ್ನು ಗೆದ್ದುಕೊಟ್ಟಿದ್ದ ಮತ್ತು ಭಾರತವನ್ನು ವಿಶ್ವದ  ಕುಸ್ತಿ ನಕ್ಷೆಯಲ್ಲಿ ಮೂಡಿಸಿದ್ದ ಸುಶಿಲ್ ೨೦೧೨ನೆ ಲಂಡನ್ ಒಲಿಂಪಿಕ್ಸ್ ನ ಕೊನೆಯದಿನವಾದ ಇಂದು ಬೆಳ್ಳಿಪದಕವನ್ನು ಪಡೆದಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಪ್ರಭಾವಿ ಒಲಿಂಪಿಕ್ ಚಾಂಪಿಯನ್ ರಮಜ಼ಾನ್ ಸಾಹಿನ್ ಅವರನ್ನು ಸೋಲಿಸುವ ಮೂಲಕ ರೆಡ್‍ಹಾಟ್ ಫಾರ್ಮ್ ಅನ್ನು ಪಡೆದಿದ್ದ ಸುಶಿಲ್ ಆದಾಗ್ಯೂ, ಜಪಾನಿನ Tatsuhiro Yonemitsu ಅವರೊಂದಿಗೆ ಸೆಣೆಸಿ ಬೆಳ್ಳಿ ಪದಕ ಪಡೆದರು.
ಸುಶಿಲ್ ಕುಮಾರ್ ಒಂದು ಪುಟ್ಟ ಪರಿಚಯ.
ಪೂರ್ಣ ಹೆಸರು: ಸುಶಿಲ್ ಕುಮಾರ್.
ಜನನ: 26 ಮೇ, 1983 (29 ವರ್ಷ).
ತೂಕ: ೬೬ ಕಿಲೋ.ಗ್ರಾಂ.
ಕ್ರೀಡೆ: ವ್ರೆಸ್ಲಿಂಗ್ (ಫ್ರೀಸ್ಟೈಲ್). 
ಸಾಧನೆಯ ಹಾದಿ
ಒಲಿಂಪಿಕ್ಸ್
ಬೆಳ್ಳಿ - ೨೦೧೨ -ಲಂಡನ್
ಕಂಚು - ೨೦೦೮ - ಬೀಜಿಂಗ್
ವರ್ಡ್ ಚಾಂಪಿಯನ್‍ಶಿಪ್
ಚಿನ್ನ - ೨೦೧೦ - ಮಾಸ್ಕೋ
ಕಾಮನ್ ವೆಲ್ತ್ ಚಾಂಪಿಯನ್ ಶಿಪ್
ಚಿನ್ನ - ೨೦೦೩ - ಲಂಡನ್
ಚಿನ್ನ - ೨೦೦೫ - ಕೇಪ್ ಟೌನ್
ಚಿನ್ನ - ೨೦೦೭ - ಲಂಡನ್
ಚಿನ್ನ - ೨೦೦೯ - ಜಲಂದರ್
ಕಾಮನ್ ವೆಲ್ತ್ ಗೇಮ್ಸ್
ಚಿನ್ನ - ೨೦೧೦ - ದೆಲ್ಲಿ
ಏಶ್ಯನ್ ಚಾಂಪಿಯನ್‍ಶಿಪ್
ಚಿನ್ನ - ೨೦೧೦ - ದೆಲ್ಲಿ
ಬೆಳ್ಳಿ - ೨೦೦೭ - ಕಿರ್ಗಿಸ್ಥಾನ್
ಕಂಚು - ೨೦೦೩ - ದೆಲ್ಲಿ
ಕಂಚು - ೨೦೦೮ - ಜೆಜು ಐಲ್ಯಾಂಡ್
ತನ್ನ ೧೪ರ ಹರೆಯದ ದಿನಗಳಿಂದ ಸುರಿಸಿದ ಬೆವರಿನ ಫಲ, ಮುರಿಯದ ಗುರು ಶಿಶ್ಯ ಪರಂಪರೆ, ಸಸ್ಯಾಹಾರದ ಸಾತ್ವಿಕ ಶಕ್ತಿ ಇದು ಜಗತ್ತು ತಿಳಿಯಬೇಕಾದ ಸುಶಿಲ್‍ರ ಸಂದೇಶ. ಸುಶಿಲ್ ಗೆದ್ದಿದ್ದು ನಮ್ಮ ಪಾಲಿಗೆ ಚಿನ್ನವೇ ಹೊರತು ಬೆಳ್ಳಿಯಲ್ಲ. ಚಿನ್ನದ ಹುಡುಗನಿಗೆ ಮೊಗದೊಮ್ಮೆ ಸುಭಾಶಯ.