Jan 11, 2012

೨೦೧೨ ಎಂಡ್ ಆಫ್ ದಿ ವರ್ಲ್ಡ್!!?

ಬ್ಯಾಂಕಲ್ಲಿ ಫಿಕ್ಸ್ಡ್ ಡೆಪೊಸಿಟ್ ಇದ್ಯಾ.. ನೀವೇನಾದ್ರು ಲೈಫ಼್ ಇನ್ಸುರೆನ್ಸ್, ವೆಹಿಕಲ್ ಇನ್ಸುರೆನ್ಸ್ ಕಟ್‍ತಯಿದಿರಾ..ಹಾಗಾದ್ರೆ ಇವತ್ತಿಗೆ ಎಲ್ಲಾ ನಿಲ್ಲಿಸ್ ಬಿಡಿ. ಯಾರ್ದೋ ತಲೆ ಹೊಡ್ದು ಬ್ಯಾಂಕಲ್ಲೊ, ಕಲುಬಿಲೊ ದುಡ್‍ಇಟ್ಟಿದ್ರೆ ಇವತ್ತೆ ಯೆಲ್ಲಾ ತೆಗ್ದು ಉಂಡು ತಿಂದು ಎಂಜೊಯ್ ಮಾಡಿ. ಡಯಾಬಿಟಿಸ್ಸು ತಿನ್ನಂಗೊ ಇಲ್ಲ ಅಂತಾದ್ರೆ ಸಾಯೊ ಮೊದ್ಲು ಒಂದ್ ಸಲನಾರು ಯಾರಿಗಾದ್ರು ದಾನ ಮಾಡಿ. ಏಕೆ ಗೊತ್ತ ಪ್ರಪಂಚ ಅಂತ್ಯ ಆಗ್ತಾ ಇದೆ, world is coming to an end..count down has begun...

ಇಂತಹ ಮಾತುಗಳು ಆಗಾಗ ನಮ್ಮ ಕಿವಿಗೆ ಬೀಳೋದು. ಅತವಾ ಅಲ್ಲಿ ಇಲ್ಲಿ ಓದೋದು ಸಾಮಾನ್ಯ. ಹಾಗಾದ್ರೆ ಇದು ನಿಜಾನ? ಪ್ರಪಂಚ ಅಂತ್ಯ ಆಗ್ತಾಇದ್ಯಾ? ನಾವು ಸಾವಿನ ಹೊಸ್ತಿಲಲ್ಲಿ ಹೊಸವರ್ಷ ಆಚರಿಸುತಿದ್ದೇವ? ಕೋಟಿಗಟ್ಟಲೆ ವರ್ಷ ವಿಕಸನ ಹೊಂದಿದ ಜೀವಸಕುಲ, ಸಾವಿರಾರು ವರ್ಷಗಳ ನಾಗರೀಕತೆ ಮಾನವೀಯತೆ ಒಂದು ಗಳಿಗೆಯಲ್ಲಿ ನಾಶವಾದೀತ??

ಇದಕ್ಕೆ ಉತ್ತರ almost no.. not yet.

ಆದರೂ ಇಂತಹ ಹೆದರಿಕೆ ಸಾವಿನ ಭಯ ಎಷ್ಟೋರೀತಿಯಲ್ಲಿ ಒಳ್ಳೆಯದೆ.
ಅಹಂಕಾರ, ಆಡಂಬರ, ಹಣವೇ ಸರ್ವಸ್ವ ಎಂದು ಬದುಕುವ ಸಾವಿರಾರು ಹುಲು ಮಾನವರಿಗೆ, ರಾಜಕಾರಣಿಗಳಿಗೆ, ಆತಂಕವಾದಿಗಳಿಗೆ, ಕಳ್ಳಕಾಕರಿಗೆ ಎಲ್ಲೋ ಒಂದು ರೀತಿಯಲ್ಲಿ ಕಾಡುವ ಈ ಪ್ರಶ್ನೆ '?' ಬರಲಿರುವ ದಿನಗಳಲ್ಲಿ ಒಂದು ದೊಡ್ಡ ಮಾನವೀಯ ಬದಲಾವಣೆಗೆ ಕಾರಣ ವಾಗಬಹುದು.

ಜಗತ್ತಿನ ಅನೇಕ ವಿಜ್ಞಾನಿಗಳು ವಿಶ್ಲೇಷಕರುಗಳು ನೀಡಿದ ವಿವರಣೆಗಳನ್ನು ಗಮನಿಸಿದರೆ ಯಾವುದೇ ಬಗೆಯ ಒಮ್ಮತ ಇಲ್ಲದಿರುವುದು ೨೦೧೨ ರ ಅಂತ್ಯಕ್ಕೆ ಯಾವುದೇ Strong scientific evidence ಇಲ್ಲದಿರುವುದು ಕಂಡು ಬರುತ್ತದೆ.

೧.Prophecies of nostradamus
ಜಾನ್ ಎಫ್ ಕೆನಡಿಯ ಹತ್ಯೆ, ಹಿಟ್ಲರ್‌ನ ಆಡಳಿತ, ಇಸ್ಲಾಂ ಹೆಸರಿನಲ್ಲಿ ನಡೆಯುವ ಸಾವು ನೋವುಗಳು, ವಿಶ್ವಮಹಾಯುದ್ದಗಳು ಹೀಗೆ ಹತ್ತು ಹಲವು ವಿಚಾರಗಳು 'ನಾಸ್ಟ್ಟಡೋಮಸ್' ಹಿಂದೆ ಬರೆದಿಟ್ಟಂತವು ಇಂದು ಸಂಬವಿಸುತ್ತಿರುವುದು ನಿಜ ಮತ್ತು ಹಲವರಿಗೆ ಆಶ್ಚರ್ಯಕರ. ಆದರೆ ಇವನ ಭವಿಷ್ಯದ ಬಗೆಗಿನ ಈ ಬರವಣಿಗೆಯಲ್ಲಿ ಯಾವುದೇ ರೀತಿಯ ಸರಿಯಾದ ಒಂದೇ ಒಂದು statement ೨೦೧೨ರ ಅಂತ್ಯ ವನ್ನು ನಿರ್ಧರಿಸಿಲ್ಲ. ಈತನ ಬರವಣಿಗೆ ಗಳನ್ನು ಬಳಸಿ ನಮ್ಮ ಕಲ್ಪನೆಗೆ ಜೀವ ಕೊಡಬಹುದಸ್ಟೆ.

ಉದಾಹರಣೆಗೆ
Quatrain 2:3
“Because of heat like that of the sun on the sea,
The fish around Negrepont will be half-cooked.
When in Rhodes and Genoa there is lack of food”.
ಕೆಲವು ಸಂಶೋದಕರು ಇದನ್ನು Prediction about the 'Global warming' ಎನ್ನುವುದುಂಟು ಹಾಗೆ ನೋಡಿದರೆ ಇದೇ ವಾಖ್ಯಕ್ಕೆ ಸಾವಿರಾರು ಅರ್ಥಗಳನ್ನು ನಾವು ನೀಡಲು ಸಾಧ್ಯ ಗಮನಿಸಿ ನೋಡಿ.
ಹಾಗಿರಲು ಈ ಪ್ರೊಫೆಸಿಗಳೆಲ್ಲ ನಮ್ಮಕಲ್ಪನೆಯಂತೆ ರೂಪುಗೊಳ್ಳುತ್ತವೆ.

ದಿನ ಭವಿಷ್ಯ ಓದುವ ವೆಕ್ತಿಗೆ ಕನ್ಯಾ ರಾಶಿಯಲ್ಲಿ ಬರೆದಿರುವ "ಆರೋಗ್ಯ ಸುದಾರಣೆ, ಧನಲಾಭ.." ಎಲ್ಲಾ ತನ್ನ ಬಗ್ಗೆಯೇ ಎನಿಸುವಂತೆ ಇದೂ ಸಹ ನಮ್ಮ ನಂಭಿಕೆ ಮತ್ತು ಊಹೆಯಮೇಲೆ ನಿಂತಿರಲೂ ಬಹುದು.

೨.ಮಾಯನ್ ಕ್ಯಾಲೆಂಡರ್.
ಪ್ರತಿ ಭಾನುವಾರದ ಬಳಿಕ ಸೋಮವಾರ ದಂತೆ. ಜನವರಿ ಬಳಿಕ ಫ಼ೆಬ್ರವರಿಯಂತೆ ಈ ಪುರಾತನ ಮಾಯನ್ ಕ್ಯಾಲೆಂಡರ್ ಪ್ರತೀ ೨೬ಸಾವಿರ ವರ್ಷಗಳ ಬಳಿಕ ಪುನಃ ಪ್ರಾರಂಭ ವಾಗುತ್ತದೆ. ಆದರೆ ಆ ದಿನವೆ ೨೧ ೧೨ ೨೦೧೨ ಆಗಿದೆಯ. ಕೆಲವರು ಹವ್ದು ಎಂದರೆ ಇನ್ನೂ ಅನೇಕ ಜ್ಯೋತಿಶಿಗಳು ಅದನ್ನು ಅಲ್ಲಗಳೆಯುತ್ತಾರೆ ಮತ್ತು ಮಾಯನ್ ಕ್ಯಾಲೆಂಡರ್ ಆಗಲೆ ಪುನಃ ಶುರುವಾಗಿದೆ ಎನ್ನುತ್ತಾರೆ.

ಬಹಳ ಪ್ರಬಲ ವಾದ ಚಂದ್ರನ ಮತ್ತು ಸೂರ್ಯನ ದ್ವಿ ಗುರುತ್ವಕರ್ಷಣೆಯಿಂದ ಒಂದು ಬಗೆಯ ತನ್ನದೆ ಆದ ಕಕ್ಷೆಯಲ್ಲಿ ತಿರುಗುವ ಈ ಭೂಮಿಗೆ ಒಂದು ಬಾರಿ ತನ್ನ ಆದಿ ಸ್ಥಾನಕ್ಕೆ ಬರಲು ೨೬೦೦೦ ವರ್ಷಗಳು ಬೇಕಾಗುವುದು ಮಾಯನ್ ಕ್ಯಾಲೆಂಡರ್ ಅನ್ನು ಪ್ರೋತ್ಸಹಿಸುವ ಬಹಳದೊಡ್ಡ ವೈಜ್ಞಾನಿಕ ವಿವರಣೆ.

ವಿಚಾರಗಳು ಏನೇ ಇರಲಿ ೨೦೧೨ ಹೆಸರಿನಲ್ಲಿ ನಡೆಯುತ್ತಿರುವ ಮೋಸ ಅನೇಕ. 2012 related products (shirts, devices..etc) ಗಳನ್ನು ಸಿದ್ದಪಡಿಸಿ online ನಲ್ಲಿ ಮಾರುವ official website ಆಗಿರಬಹುದು. '2012' movie ಇರಬಹುದು ಅತವಾ ಚಿಕ್ಕವಿಷಯವಕ್ಕೆ ಬಣ್ಣಬಳಿದು ಪ್ರೇಕ್ಷಕರನ್ನು ಮಂಗಮಾಡುವ ಸುದ್ದಿಮಾಧ್ಯಮಗಳಿರಬಹುದು. ಇವರೆಲ್ಲ ಹಣಕ್ಕಾಗಿ ಹೆಣಗಾಡುವ ಹಂಗಾಮಿಗಳು. ಇವುಗಳಿಂದ ನಾವು ಆದಷ್ಟು ದೂರ ಇರುವುದು ಉಚಿತ.

ಎಲ್ಲಿವರೆಗು ಮನುಷ್ಯನಲ್ಲಿ ಮಾನವೀಯತೆ ಇರುತ್ತದೆಯೋ..
ಎಲ್ಲಿವರೆಗು ಮನುಷ್ಯ, ಪ್ರಾಣಿ, ಪಕ್ಷಿ, ಮರ, ಗಿಡಗಳೊಡನೆ ಸಾಮರಸ್ಯ ಸಮತೋಲನ ಇರುತ್ತದೆಯೊ..
ಎಲ್ಲಿವರೆಗು ತಂತ್ರಜ್ಞಾನ, ವಿಜ್ಞಾನದೂಡನೆ, ಪಶುಪಾಲನೆ,ವ್ಯವಸಾಯ ನಡೆಯುತ್ತದೆಯೂ
ಎಲ್ಲಿವರೆಗೆ ಭಾರತ ದಂತಹ ಶಾಂತಿಪ್ರಿಯ ದೇಶಗಳು ಮತ್ತು ಅಧ್ಯಾತ್ಮಿಕತೆ ಜೀವಂತವಾಗಿರುತ್ತದೆಯೊ ಅಲ್ಲಿವರೆಗೆ
ವಿಶ್ವಾಂತ್ಯದ ಭಯವಿಲ್ಲ.