Mar 22, 2010

ಗಾಂಧಿ ದೇವರು

ಎರೆಡು ವರ್ಷದ ಹಿಂದೆ ಗಾಂಧಿ ಜಯಂತಿಯಂದು 'ಡೆಕ್ಕನ್ ಹೆರಲ್ಡ್' ಪತ್ರಿಕೆಯಲ್ಲಿ ಒಂದು ಲೇಕನ ಪ್ರಕಟಗೊಂಡಿತ್ತು. ಮಂಗಳೂರಿನ ಕಂಕನಾಡಿಯಲ್ಲಿರುವ ಗರಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಪೂಜಿಸುವುದರ ಬಗ್ಗೆ ವರದಿಯಿತ್ತು. ನಾನು ಬಹಳ ಕುತೂಹಲದಿಂದ ಆ ಸ್ಥಳಕ್ಕೆ ಒಂದು ವರ್ಷದ ನಂತರ ಬೇಟಿ ನೀಡಿದೆ ಆಗಕಂಡ ದೃಶ್ಯ ನಿಜಕ್ಕೂ ನಂಬಲಾಗಲಿಲ್ಲ. ತುಳು ನಾಡಜನರ ವಿಶಾಲ ಹೃದಯವಂತಿಕೆಗೆ ನನ್ನ ಮನ ಕರಗಿತು ತಲೆಬಾಗಿತು. ಮಂಗಳೂರು ನಗರದ ಹೃದಯ ಬಾಗದಿಂದ ೨ಕಿ.ಮೀ ದೂರದಲ್ಲಿ 'ಬ್ರಮ್ಮ ಬೈದರ್ಕಳ ಗರಡಿ'ಇದೆ. ಇದಕ್ಕೆ ೧೩೩ ವರ್ಷಗಳ ಸುಧೀರ್ಗ ಇತಿಹಾಸವಿದೆ ಮತ್ತು ಇಲ್ಲಿ ಕೋಟಿ ಚೆನ್ನಯ್ಯ ರಿಂದ ಹಿಡಿದು ನಾರಾಯಣ ಗುರು, ಗಾಂಧೀಜಿಯವರೆಗೆ ಅನೇಕ ವಿಗ್ರಹಗಳಿದ್ದು ದಿನನಿತ್ಯ ಪೂಜೆ ನಡೆಯುತ್ತದೆ. ಹಣ್ಣು-ಹಂಪಲು, ಹಾಲು ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಗಾಂದಿಜಯಂತಿಯಂತ ವಿಶೇಷ ದಿನಗಳಲ್ಲಿ ಹೆಚ್ಚಿನ ಪೂಜೆ ನಡೆಯುತ್ತದೆ. ೧೯೪೮ ರಲ್ಲಿ ಫಳ್ನೀರಿನ ವೆಂಕಟಪ್ಪ ಎನ್ನುವವರು ಮಹಾತ್ಮ ಗಾಂಧಿಜಿಯ ಪ್ರತಿಮೆಯನ್ನು ಇಲ್ಲಿಗೆ ನೀಡಿದ್ದರಂತೆ. ಒಂದು ಕುತೂಹಲದ ಸಂಗತಿಯೆಂದರೆ ಗಾಂಧೀಜಿ ತಮ್ಮ ಜೀವಿತದಲ್ಲಿ ಮಂಗಳೂರಿಗೆ ಬರಲೆ ಇಲ್ಲವಂತೆ. ಬದಲಿಗೆ ಸ್ವಾತಂತ್ರ ಸಂಗ್ರಾಮಕ್ಕೆ ಸಂಘಟನೆ ಕರೆಯಲು ಉಡುಪಿಗೆ ಫೆಬ್ರವರಿ ೨೫, ೧೯೩೪ ಮತ್ತು ಪುತ್ತೂರಿಗೆ ೧೯೩೫ ರಲ್ಲಿ ಬಂದಿದ್ದರು. ಆದರೂ ಗಾಂಧಿವಾದಿಗಳು ತಮ್ಮ ಉದಾರತೆಯನ್ನು ಮೆರೆದಿದ್ದಾರೆ. 'ಪ್ರತೀ ಮನುಷ್ಯನು ದೇವರ ಅವತಾರವೆ, ಕೆಲವರು ಮಾತ್ರ ಇದನ್ನು ಅರಿತು ನಿಸ್ವಾರ್ಥತೆಯಿಂದ ದುಡಿದು ಅವತಾರ ಪುರುಷರಾಗುತ್ತಾರೆ' ಎಂಬ ಸ್ವಾಮಿ ವಿವೇಕನಂದರ ಮಾತು ಇಲ್ಲಿ ನನಗೆ ನೆನಪಿಗೆ ಬರುತ್ತದೆ. ಶಿವರಾಮ ಕಾರಂತರ 'ಸರಸಮ್ಮನ ಸಮಾಧಿ' ಕಾದಂಬರಿಯನ್ನು ನೀವು ಓದಿದ್ದರೆ ಇಂತಹ ವಿಚಾರಗಳು ಸುಲಬವಾಗಿ ಮನವರಿಕೆಯಾಗುತ್ತದೆ. ಎಲ್ಲಾ ಆಧರ್ಶ ವ್ಯಕ್ತಿಗಳನ್ನು ಮನುಷ್ಯ ದೇವರಂತೆ ಕಂಡದ್ದೇನೋ ಸಂತೂಷ ಆದರೆ ಇದರೊಟ್ಟಿಗೆ ಅವರ ವಿಚಾರಗಳನ್ನು ಗ್ರಂಥದಲ್ಲಿ ಪೂಜಿಸಿ, ಆಚರಣೆಗೆ ತರದಿರುವುದು ತಪ್ಪು. ದಿನಕಳೆದಂತೆ ನಂಭಿಕೆಯ ಮೇಲೆ ನಂಭಿಕೆಬೆಳೆದು ಸಹಜ ಆದರೆ ಇಲ್ಲಿ ವಾಸ್ತವಾಂಶ ವನ್ನು ಮರೆಯಬಾರದು.

1 comment:

  1. "ತುಳು ನಾಡಜನರ ವಿಶಾಲ ಹೃದಯವಂತಿಕೆಗೆ ನನ್ನ ಮನ ಕರಗಿತು ತಲೆಬಾಗಿತು."
    vidya nimage respect++ .. :-)

    ReplyDelete