Aug 4, 2010

ನಗು

ನಗುವ ನೀನು ನಗುತಲಿರು
ಎಲ್ಲರನ್ನು ನಗಿಸುತಿರು

ಹೃದಯದೊಳಗೆ ನಗೆಯ ವಾಸ;
ಮುಖದ ಮೇಲೆ ಮಂದಹಾಸ;
ಅಂದು ಇಂದು ಎಂದು ಮುಂದು;
ಇಲ್ಲೆ ಇದರ ನಿವಾಸ.

ದುಃಖ ದೊಡಲು ಕಷ್ಟಕಡಲು;
ಬಾಳ ಭೂಮಿ ಬಟ್ಟ ಬಯಲು;
ಆದರೂನೆ ನಗೆಯ ಮೆರಗು ;
ಮೊಗಕೆ ಎಳೆದ ಬಣ್ಣ ಸೆರಗು.

ಅಳುತ ಹುಟ್ಟಿ ನಗುವ ಕಲಿತು;
ಅಳದೆ ಉಳಿಯು ಕೊನೆಯ ವರೆಗು;
ಪಾಪ ಕೂಪ ಜಗವೆ ಏನು;
ರೋಗ ಭೋಗ ತನುವೆ ಏನು.

ಹಲವು ಧರ್ಮ ತಿಳಿದು ಮುಂದೆ;
ನೂರು ಗ್ರಂಥ ಓದಿದರೊಂದೆ;
ಅರಿತು ನೀನು ನಗುವೆ ಸತ್ಯ ದುಖಃ ಮಿಥ್ಯ;
ನಗುತ ನಗಿಸುವುದು ಸಾವಿರ ಸತ್ಯ.

2 comments: