Mar 2, 2013

ಪ್ರೇತ ಪ್ರಪಂಚ - ಕಂಡಷ್ಟೂ ಖಗೋಳ


""ಇಲ್ಲಿ ಕಂಡುಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿಲ್ಲ.  ಕತೆಯು ವಾಸ್ತವ ಅವಾಸ್ತವಗಳ ಎಲ್ಲೆಗೆ ನಿಲುಕದೆ ರೂಪುಗೊಂಡಿದ್ದು ಓದುಗರು ನೈಜ್ಯತೆಗೆ ಹೆಚ್ಚಿಗೆ  ತಲೆಕೆಡಿಸಿಕೊಳ್ಳುವುದು ಅನಾವಶ್ಯಕ.""

ವಿಜ್ಞಾನ್ ಉದ್ಯಾನ ನಗರಿ ಬೆಂಗಳೂರಿನಲ್ಲಿ ಓರ್ವ ಉದ್ಯಮಿ. ವಯಸ್ಸು ೨೮ ಕೆಲಸಕ್ಕೆ ಸೇರಿ ೪ ವರ್ಷ ಆಗಿರಬಹುದು, ಈ ೪ ವರ್ಷದಲ್ಲೇ ೫ ಬಾರಿ ಜಾಬ್ ಬದಲಿಸಿದ್ದ ಅಂದ್ರೆ ನೀವು ನಂಬಲ್ಲ.  "ಓದಿದದ ಹುಡುಗರಿಗೇನಂತೆ ಕೆಲ್ಸಕ್ಕೆ ಬರ; ಇದಲ್ಲ ಅಂದ್ರೆ ಇನ್ನೊಂದು" ಇದು ವಿಜ್ಞಾನ್ ನ ತಂದೆ ಚಂದ್ರೇಗೌಡರ ಅಭಿಮತ. ಚಂದ್ರೇಗೌಡರಿಗೆ ತಮ್ಮ ಮಗನ ಸಂಬಳದಿಂದ ಆಗಬೇಕಾದ್ದೇನಿಲ್ಲ ಇರುವ ಆಸ್ತಿಯೆ ಸಾಕು ಅನ್ನಿ. "ನೀನು ಮನೆಕಡೆ ಚಿಂತೆ ಮಾಡ್ಬೆಡ ಮಗ್ನೆ ನಿನ್ನ ವೃತ್ತಿ ಆಯ್ತು ನೀನಾಯ್ತು ಎಂಜಾಯ್ ಮಾಡು" ಅಂತಾರೆ ಅಪ್ಪ.

ಇದು ಶುಕ್ರವಾರ ಭಾರತ್ ಬಂಧ್. ಪೆಟ್ರೋಲ್, ಡಿಸೆಲ್ ಧರ ಏರಿಕೆಯನ್ನು ಖಂಡಿಸಿ ಎಡಪಕ್ಷಗಳು ಎರೆಡು ದಿನ ಭಾರತ್ ಬಂಧಿಗೆ ಕರೆ ನೀಡಿದ್ದರು ಇಂದು ಮತ್ತು ನಾಳೆ ಆಫಿಸ್ ಕ್ಲೋಸ್. ಇನ್ನು ನಾಡಿದ್ದು ಬಾನುವಾರ ಹೇಗೂ ರಜೆಯಾದ ಕಾರಣ ಭರ್ಜರಿ ಮೂರು ದಿನ ಅಂತ ವಿಜ್ಞಾನ್ ಮನೆಗೆ ತೆರಳಲು ತಾಯಾರಿ ನಡೆಸಿದ್ದಾಯಿತು. ನಿನ್ನೆ ದಾರಿಯಲ್ಲೇ ಪೆಟ್ರೋಲ್ ಹಾಕಿ, ಬ್ಲೋ ಚೆಕ್ ಮಾಡಿಸಿ ಕಾರನ್ನ ತನ್ನ ರೋಮ್‍ನ ಹೊರಗೆ ನಿಲ್ಲಿಸಿದ್ದ.

ವಿಜ್ಞಾನ್‍ನ ಊರಿಗೆ ಬೆಂಗ್ಳೂರಿಂದ ೪೩೨ ಕಿ.ಮೀ. ಆಗಬಹುದು. ಪ್ರಯಾಣ ಪ್ರಾಯಸದಾಯಕ ಪ್ರಾರಂಬದ ೧೫೦ ಕಿ.ಮೀ ದಾಟಿದರೆ ಮತ್ತೆ ಊರು ಅಂತ ಸಿಕ್ರೆ ಅದು ಸೋಮನ ಹಳ್ಳಿ ಅಲ್ಲಿಂದ ಮುಂದೆ ಸಂತೆಪೇಟೆ ಇದೂ ಆದ್ರೆ ಮುಂದಿನ ೩೦೦ ಕಿ.ಮೀ ಬರೇ ಕಾಡು. ಸಾಮಾನ್ಯ ಕಾಡಲ್ಲ ೫೦೦೦ ಎಕರೆ ರಕ್ಷಿತಾರಣ್ಯ. ಕಾಡು ಮೇಡಲ್ಲಿ ಕೊರೆದ; ಹೆಸರಿಗೆ ಅಂತ ಒಂದು ರಸ್ತೆ. ನೂರಾರು ಕರುವುಗಳು, ಗಾಡಿ ವಾಲಿತು ಅಂದ್ರೆ ಮುಂದೆ ಪ್ರಪಾತವೆ ಗತಿ. ಈ ಕಾನನ ಮಾರ್ಗದಲ್ಲಿ ನಡೆಯುವ ಕ್ರೈಂ ನೂರಾರು, ಒಂಟಿಚಾಲಕರ ಗಾಡಿಗಳಿಗೆ ಕಾದುಕುಳಿತ ಕಳ್ಳ-ಕಾಕರು, ರಬಸದಲ್ಲಿ ಬಂದು ಗುದ್ದಿ ಹೇಳ ಹೆಸರಿಲ್ಲದೆ ಸಾಯುವು ಲಾರಿ ಚಾಲಕರುಗಳು, ಎಲ್ಲೆಲ್ಲೋ ಕೊಲೆಯಾದ ಡೆಡ್ ಬಾಡಿಗಳ ಡಿಸ್‍ಪೋಸಲ್ ಈ ಭಯಾನಕ ಪ್ರಪಾತಗಳಲ್ಲೆ. ಇವೆಲ್ಲಾ ಸಾಲದ್ದಕ್ಕೆ ರಾತ್ರಿ ಕಾಡಾನೆಗಳ ಹಾವಳಿ.




ಮನೆಗೆ ಹೊರಡೊಣಂತ ಕುಳಿತಿದ್ದ ವಿಜ್ಞಾನ್‍ಗೆ ಇವತ್ತು ಮಂಜುವಿನ ಬರ್ತ್ ಡೆ ಅನ್ನೋದು ತಿಳಿತು. ಬರ್ಡೆ ಪಾರ್ಟಿ ಬಿಟ್ಟು ಹೊಗಲಿಕ್ಕಾಗುತ್ತ ಅದೂ ಅಲ್ದೆ ಮಂಜು ತನ್ನೊಟ್ಟಿಗೆ ಮನೆಗೆ ಬರೋದಾಗಿ ಹೇಳಿದ್ದ.
ಮಂಜು ವಿಜ್ಞಾನ್‍ನ ಸಹೋದ್ಯೋಗಿ, ಈತನ ಊರು ಸೊರಗೂರಿನ ಚಿತ್ರಗುಪ್ಪ. ತಾನಿದ್ದಲ್ಲಿಂದ ನಾಲ್ಕು ಮೈಲು ದೂರದ ಕುಂದಾಪುರ ಮೂಲದವರ ಪಿ.ಜಿಯಲ್ಲಿ ಮಂಜುವಿನ ವಾಸ. ಸೊರಗೂರು ಬೆಂಗ್ಳೂರಿಂದ ೧೨೦ ಕಿ.ಮೀ ಅಸ್ಟೆ.  

ಬರ್ಡೆ ಪಾರ್ಟಿ ಏನೊ ಚೆನ್ನಾಗೆ ನಡಿತು. ಸುರಭಿ ರೆಸಾರ್ಟ್ ಅಲ್ಲಿ ಎಲ್ಲರೂ ಸೇರಿ ಹುಟ್ಟಿದಬ್ಬ ಆಚರಿಸಿದ್ರು. ಪಾರ್ಟಿಗೆ ವಿಜ್ಞಾನ್ ಮತ್ತು ಅವನ ರೂಂ ಸಂಗಡಿಗ ಜಾಫರ್ ಮಂಜುವಿನ ಗೆಳೆಯರಾದ ಜೇಟ್ಲಿ, ಶೊಯಿಬ್, ಪ್ರಜ್ವಲ್ ಎಲ್ಲರೂ ಸೇರಿದ್ದರು. ಮೂಜು-ಮಸ್ತಿ ಮುಗಿಸಿ ಎಲ್ಲರೂ ಸಿನಿಮಾಗೆ ಅಂತ ಹೊದ್ರು ಸಿನಿಮಾ ಏನ್ ಕೇಳ್ತಿರಿ "ಇಟ್ ವಾಸ್ ಅ ವರ್ಸ್ಟ್ ಅಂಡ್ ಫ್ಲಾಪ್ ಮೂವಿ" ಆದ್ರೆ "ಹಾರರ್ ಆಗಿತ್ತು". ಇಂಟರ್ವಲ್ ನಲ್ಲಿ ಜಾಫರ್ ಹೆದರಿ ಕೂತಲ್ಲಿಂದ ಏಳ್ಲಿಲ್ಲ ಅಂತಂದ್ರೆ ಸಿನಿಮಾ ಹೇಗಿದ್ದಿರ ಬಹುದು ಗೆಸ್ ಮಾಡಿ.

ಸಿನೆಮಾ ತಿಯೇಟರ್ನಿಂದ ಹೊರಬಂದಾಗ ಗಂಟೆ ೪ಕ್ಕೆ ೫ ನಿಮಿಷ ಕಮ್ಮಿ ಇತ್ತಷ್ಟೆ. ಮಂಜು ಮತ್ತು ವಿಜ್ಞಾನ್ ಅಲ್ಲಿಂದ ಮುಂದೆ ಒಟ್ಟಿಗೆ ಕಾರಿನಲ್ಲಿ ವಸಂತನಗರ ಮಾರ್ಗವಾಗಿ ಎನ್. ಹೆಚ್ ೧೯ ನಲ್ಲಿ ಸಾಗಿದರು. ದಾರಿಸಾಗಿದಂತೆ ಸೂರ್ಯಮುಳುಗುತ್ತ ಬಂದು ಹೊತ್ತಿಗೆ ಮೊದಲೆ ಕತ್ತಲಾದಂತೆ ಕಂಡಿತು. ಆ ದಿನ ಭವಿಶಃ ಮೋಡ ಕವಿದ ವಾತಾವರಣ ಇದ್ದದ್ದರಿಂದ ಹಾಗಾಗಿರಬಹುದು.

ಪ್ರತೀ ಬಾರಿ ವಿಜ್ಞಾನ್ ಮನೆಗೆ ಪ್ರಯಣಿಸುವಾಗ ಜೊತೆಗೆ ಯಾರಾದರು ಸಂಗಡಿಗರಿರುತಿದ್ದರು. ಹೆಚ್ಚಾಗಿ ಅಶೋಕ ವಿಜ್ಞಾನೊಂದಿಗೆ ಮನೆಗೆ ಬರುತಿದ್ದ. ಅಶೋಕ ವಿಜ್ಞಾನರದ್ದು ಭಾಲ್ಯದ ಗೆಳೆತನ, ಇವರದು ಹದಿಬದಿಯ ಮನೆ. ಆದರೆ ಇವತ್ತು ಅಶೋಕ್ ಬದುಕಿಲ್ಲ ವಿಧಿ ಆತನ್ನ ಕರೆದುಕೊಂಡಿತ್ತು. ಒಂದು ವರ್ಷದ ಹಿಂದೆ ಬೈಕ್ ಆಕ್ಸಿಡೆಂಡ್ ನಲ್ಲಿ ಅಶೋಕ್ ತೀರಿಕೊಂಡಿದ್ದ. ಪ್ರತೀ ಬಾರಿಯಂತೆ ಈ ಬಾರಿ ವಿಜ್ಞಾನ್‍ನ ಜೊತೆಗಿದ್ದದು ಅಶೋಕ್  ಅಲ್ಲ; ಬದಲಿಗೆ ಮಂಜು.

ದೂರದಲ್ಲಿ ಕಾಣುವ ಮಿಂಚು, ತಂಣ್ಣನೆಯಗಾಳಿ, ಕಾರಿನೊಳಗೆ ಸಡಿಲಾದ ಕೊಂಡಿಯ ಕಟ-ಕಟ ಸದ್ದು ಹೀಗೆ ದಾರಿ ಸಾಗುತಿತ್ತು.
"ಆ ಸಿನಿಮ ನೊಡ್ಬಾರ್ದಾಗಿತ್ತು ಕಣೊ ಮಂಜ"
"ಯಾಕೊ ಮೂಡ್ ಅವ್ಟು, ಎಲ್ಲೊ ಒಂತರ ಭಯ, ಆ ರಕ್ತ, ಆ ಆಕ್ರಂದ.. ಯಾಕಾದ್ರು ನೋಡಿದ್ವಪ್ಪ ಆ ಮೂವಿನಾ.."
ಹೀಗೆ ಏನೇನೊ ಮಾತಾಡ್ಕೊಂಡು ಬರುವಸ್ಟರಲ್ಲಿ ಸೊರಗೂರು ಬಂದೇ ಬಿಟ್ಟಿತು. ಮಂಜು ಅಲ್ಲೆ ಇಳಿದುಕೊಂಡ ಅಲ್ಲಿಂದ ಒಳದಾರಿಯಲ್ಲಿ ಚಿತ್ರಗುಪ್ಪದ ತನ್ನ ಮನೆ ಸೇರುವುದಾಗಿ ಹೇಳಿ, "ವಿಜ್ಞಾನ್, ಗುಡ್ ಬಾಯ್, ಟೇಕ್ ಕೇರ್" ಅಂದು ಕತ್ತಲಲ್ಲಿ ಲೀನವಾದ. ವಿಜ್ಞಾನ್‍ನ ಕಾರು ಪುನಃ ಸದ್ದುಮಾಡುತ್ತ ದೂರದ ಪಯಣಕ್ಕೆ ಮುಂದೆ ಸಾಗಿತ್ತು.


ಸೊರಗೂರಿನ ಗಡಿದಾಟುವುದರೊಳಗೆ ಕತ್ತಲು ಸಂಪೂರ್ಣವಾಗಿ ಕವಿದಿತ್ತು. ಈಗ ಗುಡುಗಿನೊಡನೆ ಚಟ ಪಟ ಮಳೆ ಹನಿಗಳು ಬೀಳತೊಡಗಿದವು. ಆಗಾಗ ರಸ್ತೆ ಬದಿಯ ಸೈನ್ ಬೊರ್ಡ್ ಮಿಂಚಿನ ಬೆಳಕಿಗೆ ಪಣಕ್ಕನೆ ಹೊಳೆಯುತಿದ್ದವು. ಮಳೆ ಜೋರಾಗುತ್ತಾ ಬಂದು ಕಾರಿನ ಹೆಡ್ ಲೈಟ್ ಬೆಳಕನ್ನೇ ಅಡಗಿಸಿದಂತೆ ಕಂಡಿತು. ಮುಂದೆ ಅರ್ದಗಂಟೆಯ ಪ್ರಯಣಿಸಿದಬಳಿಕ ಒಂದು ಚೆಕ್ ಪೋಸ್ಟ್ ಎದುರು ಗೊಂಡಿತು. ಅಲ್ಲೇ ಪಕ್ಕದಲ್ಲಿ ಒಂದು ಗೂಡಂಗಡಿ ಇದ್ದು ಅದನ್ನು ಬಿಟ್ಟರೆ ಸದ್ಯಕ್ಕೆ ಅರಣ್ಯವೆ ಗತಿಯಾದ ಕಾರಣ ವಿಜ್ಞಾನ್ ಕಾರಿಂದ ಇಳಿದು ಮಳೆಯಲ್ಲಿ ನೆನೆಯುತ್ತ ರಸ್ತೆ ದಾಟಿ ಗೂಡಂಗಡಿ ಮುಂದೆ ಬಂದು ನಿಂತ. ಬಿಸಿ ಬಿಸಿ ಕಾಫಿ ಕುಡಿಯುತ್ತ ಸ್ವಲ್ಪಹೊತ್ತು ಅಲ್ಲೇ ಕುಳಿತ. ಕೂತಲ್ಲಿಂದನೆ ಹೊರಗೆ ಕೈ ಒಡ್ಡಿ ನೋಡಿದ ಮಳೆ ಕಮ್ಮಿ ಆದಂತೆ ಕಾಣಲಿಲ್ಲ.

ಮೈ ನವಿರೇಳಿಸುವ ಮಿಂಚಿಗೂ, ಮಳೆಯ ಆರ್ಭಟಕ್ಕೂ ಹಿಂಜರಿಯದೆ ಕಾರು ಅರಣ್ಯದೊಳಗೆ ಪ್ರವೇಶಿಸಿತು. ಅದೊಂದು ಭಯಂಕರ ಕಾಡು ಆಕಾಶದಂತೆ ಬಿಚ್ಚಿಕೊಂಡ ಬೃಹತ್ ಮರಗಳ ಕೊಬೆ, ಕಾಡೊಳಗೆ ಆಗಾಗ ಕೇಳಿಬರುವ ಕರ್ಕಶ ಸದ್ದು. ಕಾರಿನೊಳಗೆ ಎಫ್.ಎಮ್ ಹಾಕಿಕೊಂಡು ಇದನ್ನಾವುದನ್ನು ಲೆಕ್ಕಿಸದೆ ಹೋಗುತಿದ್ದ ವಿಜ್ಞಾನ್. ಕಾರು ಅರಣ್ಯದ ಆಂತರ್ಯ ಹೊಕ್ಕುತಿದ್ದಂತೆ ಮೊಬೈಲ್ ನೆಟ್ವರ್ಕ್ ಪೂರ್ತಿಯಾಗಿ ಹೂಗಿತ್ತು. ಎಫ್.ಎಮ್ ಜಸ್‍ಸ್.. ಎನ್ನ ತೊಡಗಿತು. ಇನ್ನೇನು ರೆಡಿಯೊ ಆಫ್ ಮಾಡಿ ಕಾರು ಚಲಿಸತೊಡಗಿದ.    

ಕಾರಿನೊಳಗೆ ನಿಶ್ಯಬ್ದವಾಗಿ ಹೋಗುತೊಡಗಿದ ವಿಜ್ಞಾನ್‍ನಿಗೆ ಈಗ ಹೊರಗಿನ ಬೀಕರತೆ ಹೆದರಿಸತೊಡಗಿತು. ಚಳಿ ಏಕೋಹೆಚ್ಚಿದೆ ಎನಿಸಿತು ಕಾರನ್ನು ನಿಲ್ಲಿಸಿ ಸ್ವೆಟರ್ ತೊಡಿಸಿಕೊಂಡ, ಬೆಚ್ಚಗಾಯಿತು. ಕಾರಿನ ಬಲ ಬದಿಯ ಗಾಜನ್ನು ಒರೆಸಿ ಹೊರಗೆ ಕಣ್ಣಾಡಿಸಿದ. ಕಂಡದ್ದು ಪ್ರಪಾತ ಕಂಡಷ್ಟೂ ಕಾಣುವ ಪ್ರಪಾತ.  ಬಿದ್ದರೆ ಹೆಸರಿಲ್ಲದ ಮರಣ ಎನಿಸಿತು. ನಿದಾನವಾಗಿ ಕಾರಿನ ಕದ ತೆಗೆದು ಹೊರಗಿಳಿದ ಮಳೆ ನೀರು ಎಲೆಗಳಿಂದ ತಟ ಪಟನೆ ಒಂದೊಂದಾಗಿ ಉದುರುತಿತ್ತು. ಮಳೆ ಕಡಿಮೆಯಾದಂತೆ ಕಂಡಿತು.     

ಇಂತ ಭೀಕರ ವಾದ ಕಾಡಿನಲ್ಲಿ ರಾತ್ರಿಯ ಒಬ್ಬೊಂಟಿ ಪಯಣ ಭೀಕರ ವೆನಿಸಿತು. "ಒಂದು ಬಗೆಯ ಹುಚ್ಚು" ಅಂತ ಬಾಯಲ್ಲಿ ಗುಣಗಿಕೊಂಡ. ಅಶೂಕ್ ಇದ್ದಿದ್ದರೆ ಹೇಗಿರುತಿತ್ತು ಎಂದು ಎನಿಸಿತು ಅಥವಾ ಒಂದು ಮದುವೆ... ಹೀಗೆ ಎಂಥದೋ ಯೋಚಿಸಿ ನಕ್ಕ.

ನಗುವು ಗಕ್ಕನೆ ನಿಂತಿತು ಯಾರೊ ತಾನಿದ್ದಲ್ಲಿಗೆ ಬರುವಂತೆ ಕಂಡಿತು. ಕಣ್ಣನ್ನು ಒರಸಿನೋಡಿದ ಅಸ್ಪಸ್ಟ. ಅದು ವೇಗವಾಗಿ ಬಂದಂತೆಣಿಸಿ ಬೇಗನೆ ಕಾರ್ ಒಳಹೊಕ್ಕು ಕಾರನ್ನು ಚಾಲು ಮಾಡಿದ ಭಯದಲ್ಲಿ ತಬ್ಬಿಬ್ಬಾಗಿ ಗಟ್ಟಿಯಾಗಿ ಹಾರ್ನ್ ಮಾಡುತ್ತ ಎಸ್ಕ್ಲೆಟರ್ ಒತ್ತಿ ವೇಗವಾಗಿ ಚಲಿಸತೊಡಗಿದ.
"ಅದು ಮನುಷ್ಯನೆ? ಈ ಕಾಡಲ್ಲಿ ಅದೂ ಒಂಟಿಯಾಗಿ? ಅಸಾದ್ಯ"
"ಪ್ರಾಣಿಯಾಗಿರಬಹುದ.. ಅದೂ ಅಲ್ಲ"
"ಮತ್ತೇನಿರ ಬಹುದು.. ಪ್ರೇತ??"
"ಪ್ರೇತವೆ ಇರಬೇಕು, ಇಲ್ಲಿ ಕೊಲೆ, ಅಪಘಾತಗಳು ಆಗೊದು ಗೊತ್ತಿದ್ದ ವಿಷಯವೆ.. "
ದಿಗಿಲು ಹೆಚ್ಚುತ್ತಾಹೊಯಿತು ಅಲ್ಲೇ ಮುಂದೆ ರೈಲ್ವೆ ಹಳಿ ಇದದ್ದು ನೆನಪಿಗೆ ಬಂತು ಆ ಸಮಾದಾನದಲ್ಲಿ ಗಾಡಿಯನ್ನು ವೇಘವಾಗಿ ಚಲಿಸಿದ.. ಗಾಡಿ ರೈಲ್ವೆ ಹಳಿ ಇದ್ದಲ್ಲಿಗೆ ತಲುಪಿತು.

ಯಶವಂತಪುರದಿಂದ ಸಿಹಾರ್ ಬಾದ್‍ಗೆ ಹೊಗುವ ರೈಲು ಆಗಾಗಲೆ ಹೋಗಿ ಎರೆಡು ಘಂಟೆ ಕಳೆದಿತ್ತು. ಇನ್ನೇನು ಗತಿ ಧೈರ್ಯ ಒಂದೆ ಎಂದು ನಿರ್ಧರಿಸಿ. ಗಾಡಿ ಹತ್ತಿ ಪ್ರಯಾಣ ಮುಂದುವರೆಸಿದ ರೈಲ್ವೆ ಕ್ರಾಸಿಂಗ್ ತಲುಪಿದ್ದಾಗ ಸಮಯ ೯ಘಂಟೆಯಾಗಿತ್ತು ಈಗ ೦೧.೧೨ ಆಗಿದೆ ಇನ್ನೂ ಕಾಡು ಮುಗಿದಿಲ್ಲ. ದೇವರೆ ಗತಿ ಅಂತ ಇನ್ನೂ ಜೊರಾಗಿ ಗಾಡಿ ಓಡಿಸತೊಡಗಿದ. ಇದ್ದಕ್ಕಿದ್ದಂತೆ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರೊ ನಕ್ಕಂತೆ ಅನಿಸಿತು. ಹಿಂದೆ ತಿರುಗಿ ನೋಡಲು ಹೆದರಿಕೆಯಾಗಿ ಮೇಲಿದ್ದ ಕನ್ನಡಿಯ ಮೇಲೆ ಕಣ್ಣುಹಾಯಿಸಿದ. ಹೌದು ಯಾರೋ ಇರುವುದು ಖಚಿತವಾಯಿತು.

ಕಪ್ಪು ಬಟ್ಟೆಯನ್ನ ಹೊದ್ದು ಯಾರೊಹಿಂಬದಿ ಕುಳಿತಿದ್ದಾರೆ. "ಯಾರಿರಬಹುದು..? ದಾರಿಯಲ್ಲಿ ಯಾರಾದರು ಹತ್ತಿದರೆ...? ಭ್ರಮೆಯಿರಬಹುದೆ.."  "ಜೀವ ಇದ್ದರೆ ಉಳಿಲಿ ಹೊದ್ರೆ ಹೊಗ್ಲಿ" ಅಂತ ವಿಜ್ಞಾ ನ್ ಎಸ್ಕ್ಲೇಟರ್ ಒತ್ತಿದ. ಕಾರು ವೇಗ ಮಿತಿ ಮೀರಿ ಓಡಿತು. "ಸ್ವಾಮಿ ಬೈರವ, ಕಾಪಾಡು ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ..". ತಕ್ಷಣ ದೋರದಲ್ಲಿ ಒಂದು ಗುಡಿಸಲು ಗೋಚರವಾಯಿತು, "ಅಲ್ಲಿ ಯಾರೊ ಇದ್ದಾರೆ.. ದೀಪ ಉರಿದಿದೆ..  ಸದ್ಯ" ಎನ್ನುವಸ್ಟರಲ್ಲಿ ಗಾಡಿಯ ಮುಂಬದಿಯ ಚಕ್ರ ಮರದ ದಿಮ್ಮಿಗೆ ಸಿಕ್ಕಿಕೊಡು ಗಕ್ಕನೆ ನಿಂತಿತು.

ಮನೆ ಕಂಡದ್ದೆ ತಡ ವಿಜ್ಞಾನ್ ಗಾಡಿಯಿಂದಿಳಿದು ಆ ಮನೆಕಡೆಗೆ ಓಡಿದ. ಮನೆಯೊಳಗೆ ಹೊಕ್ಕ ಉಬ್ಬಸಗೊಳ್ಳುತ್ತ ನಿಂತ. ಮನೆಯೊಳಗಿದ್ದ ಹೆಣ್ಣುಮಗಳು ಕೇಳಿದಳು
"ಎಲ್ಲಿಂದ ಬಂದಿರಿ, ಏನಾಗ ಬೇಕಿತ್ತು?"
"ನಾನು ವಿಜ್ಞಾನ್ ಬೆಂಗ್ಳೂರಿಂದ ಹೊರಟಿದ್ದೆ ದಾರಿಯಲ್ಲಿ ಹೀಗಾಯಿತು, ಭಯದಲ್ಲಿ ಕಾರನ್ನ ವೇಗವಾಗಿ ಚಲಿಸಿದೆ ಹೀಗಾಯಿತು ಚಕ್ರ ಸಿಕ್ಕಿಕೊಂಡಿದೆ"
"ಇರಿ ಒಂದು ನಿಮಿಷ..ಬಂದೆ" ಎನ್ನುತ್ತ ಆಕೆ ಒಳಗಿಂದ ಕತ್ತಿ ತೆಗೆದುಕೊಂಡು ಬಂದಳು.
ಉರಿವ ದೀಪ ದೊಡನೆ ಇಬ್ಬರು ಕಾರಿದ್ದ ಕಡೆಗೆ ನಡೆದರು, ಸಿಕ್ಕಿಕೊಂಡಿದ್ದ ಕೊಂಬೆಯನ್ನ ವಿಜ್ಞಾನ್ ಕಡಿದು ಬಿಡಿಸಿದ. ಈಗ ಕಾರಿನೊಳಗೆ ಯಾರೂ ಇರಲಿಲ್ಲ!!
ಆದರೂ ವಿಜ್ಞಾನ್‍ಗೆ ಭಯ ಇದ್ದೇ ಇತ್ತು. ಈ ಮನೆಯಲ್ಲಿ ಯಾರಾದರು ಗಂಡಸರಿದ್ದಿದ್ದರೆ ಇಲ್ಲೇ ಇದ್ದು ಬೆಳಿಗ್ಗೆ ಹೋಗಬಹುದಿತ್ತು ಎನಿಸಿತು. ಆದರೆ ಈಕೆ ಒಬ್ಬಳೆ ಇದ್ದಂತೆ ಕಾಣುತ್ತದೆ.. ಏನಿರಬಹುದು ಎನಿಸಿತು ಮನೆಯ ಹೊರಗಡೆ ಎರೆಡು ಪುಟ್ಟ ನಾಯಿಮರಿಗಳಿದ್ದವು. ದಿಕ್ಕು ತೋಚದೆ ವಿಜ್ಞಾನ್ ಧೈರ್ಯಮಾಡಿ ಅವಳಿಗೆ ಧನ್ಯವಾದ ಹೇಳಿ ಕಾರು ಹತ್ತಿದ.

"ನೀವು ದಾರಿ ತಪ್ಪಿದಿರಿ ಅಂತಕಾಣುತ್ತೆ ಇದೋ ಇಲ್ಲಿ ಈ ಮಾರ್ಗ ವಾಗಿ ಹೋಗಿ ಒಂದು ಸೇತುವೆ ಸಿಗುತ್ತೆ ನಂತರ ಎಡಕ್ಕೆ ತಿರುಗಿ ನೇರವಾಗಿ ಹೋಗಿ" ಅಂನ್ನುತ್ತಾ ಆಕೆಯ ಪಕ್ಕದಲ್ಲಿ ಬಂದು ನಿಂತಿದ್ದ ಕರಿನಾಯಿ ಮರಿಯೊಂದನ್ನು ಎತ್ತಿಹಿಡಿದು.
"ಇಗಳಿ ಧೈರ್ಯಕ್ಕಾದೀತು, ನನ್ನ್ ಬಳಿ ಒಂದೈತೆ, ನಿಮ್ಗೊಂದು ಚೆನ್ನಾಗ್ ಸಾಕಿ" ಎಂದು ಮರಿಯನ್ನು ನೀಡಿ ಬೀಳ್ಕೊಟ್ಟಾಳ್ಳು.
ವಿಜ್ಞಾನ್‍ಗೂ ನಾಯಿಮರಿ ಜೊತೆಗಿದ್ದಿದ್ರಿಂದ ಪುಕ್ಕಲು ಕಮ್ಮಿಯಾಯ್ತು. ಬೆಳಗ್ಗೆ ಸೂರ್ಯೋದಯದಮೊದಲು ಮನೆ ತಲುಪಿದ್ದ.

ಮನೆಯಲ್ಲಿ ಮಗನನ್ನ ಕಂಡು ಅಮ್ಮನಿಗೆ ಎಲ್ಲಿಲ್ಲದ ಸಡಗರ.. ವಿಜ್ಞಾನ್ ಆದ ಘಟನೆಯನ್ನು ಮನೆಯಲ್ಲಿ ಹೇಳಿದ ನಾಯಿಮರಿಯನ್ನಾಗಲೆ ವಿಜ್ಞಾನ್‍ನ ತಮ್ಮ ಅಂಗನವಾಡಿಗೆ ಎತ್ತಿಕೊಂಡು ಹೋಗತೊಡಗಿದ್ದ.

ರಜೆ ಮುಗಿದು ಹೋಗುವಾಗ ವಿಜ್ಞಾನ್ ಬೆಳಗ್ಗೆ ಬೇಗನೆ ಹೊರಟ್ಟಿದ್ದ ಹಿಂದೆ ಆದಂತೆ ರಾತ್ರಿ ಕಣ್ಣಾಮುಚ್ಚಾಲೆ ಬೇಡ ಅಂತ. ಜೊತೆಯಲ್ಲಿ ತಮ್ಮ ಬಂದಿದ್ದ. ವಿಜ್ಞಾನ್ ಮನೆಯಿಂದ ಮಾಡಿಸಿಕೊಡು ಬಂದಿದ್ದ ತಿಂಡಿಯನ್ನ ಹಿಡಿದುಕೊಂಡು ತನಗೆ ಆ ರಾತ್ರಿ ಸಹಾಯಮಾಡಿದಾಕೆಗೆ ಕೊಡಲು ಹೊರಟ. ಅದೇ ದಾರಿ ಚೆನ್ನಾಗಿ ನೆನಪಿತ್ತು ಅಲ್ಲೇ ಗಾಡಿಓಡಿಸಿದ. ಆವತ್ತು ಆಕೆಯ ಹೆಸರನ್ನ ಕೇಳಿರಲಿಲ್ಲ ಎನ್ನುವ ಬೇಸರ ಇವನನ್ನ ಕಾಡುತಿತ್ತು. ಇವತ್ತು ಕೇಳದೆ ಬಿಡಲ್ಲ ಅಂದುಕೊಂಡ.  

ಆಕೆಯ ಗುಡಿಸಲಿದ್ದ ಜಾಗ ಬಂತು ಆದರೆ ಅಲ್ಲಿ ಗುಡಿಸಲಿಲ್ಲ, ಯಾರೂ ಇಲ್ಲ. ಯಾರಿದ್ದ ಸುಳಿವೂ ಇಲ್ಲ.
ವಿಜ್ಞಾನ್ ಯೋಚಿಸತೊಡಗಿದ..
"ಅದು ನನ್ನ ಬ್ರಮೆಯೆ...! ಆದರೆ ಮನೆಯಲ್ಲಿ ಇನ್ನೂ ನಾಯಿಮರಿ ಇದೆಯಲ್ಲಾ..!"
"ಆಕೆ ನನ್ನ ರಕ್ಷಿಸಲು ಬಂದ ದೇವತೆಯೆ.. ಅತವಾ ಪ್ರೇತ ಚೇಸ್ಟೆಯೆ"
"ನಮಃ ಶಿವಾಯ ನಮಃ ಶಿವಾಯದ ಪ್ರತಿಫಲವೆ??"
"ಕೊರಗರ ಹುಡುಗಿಯೆ..? ಮಲೆಕುಡಿಯ ಹುಡುಗಿಯಿರಬಹುದೆ!!"
ಎಸ್ಟು ಯೋಚಿಸಿದರೂ ವಿಜ್ಞಾನ್ ಪ್ರಶ್ನೆಗೆ ಉತ್ತರ ಸಿಗಲಿಲ್ಲ
ಏಕೋ ಒಮ್ಮೆಗೆ ದುಖಃ ಉಮ್ಮಳಿಸಿತು... ಪಕ್ಕದಲ್ಲಿದ್ದ ತಮ್ಮ ಕೇಳಿದ "ಅಣ್ಣ...ಅಣ್ಣ, ಏನಾಯ್ತು..? ಹೊಗಣ್ವಾ..."

1 comment:

  1. bahala samajasavaada hesarina aayke..
    "ವಿಜ್ಞಾನ್" na devvada kathe.. hehe..
    Thumba chennagi moodi bandide...

    yaako gotthila, vijanDeep na nenapu aayithu.. :P

    ReplyDelete