Apr 3, 2016

ಸದಾ ಋಣಿ

ನಾಳೆ ನನ್ನ ಜನ್ಮದಿನ, ನಾನು ಹುಟ್ಟಿ ನಾಳೆಗೆ 24 ವರ್ಷ 24 ದಿನದಂತೆ ಆಗಿಹೊದಂತಿದೆ. ಶನಿವಾರ ಎಪ್ರಿಲ್ 4 1992 ಬೆಳಿಗ್ಗೆ 4.30 ರ ಸುಮಾರಿಗೆ ನಾನು ಹುಟ್ಟಿದ್ದು ಅಂದು ಯುಗಾದಿಯೂ ಆಗಿತ್ತು.ಇಲ್ಲಿ ತನಕ ನಾನು ಹುಟ್ಟು ಹಬ್ಬ ಆಚರಿಸಿಲ್ಲ! ಯುಗಾದಿ ದಿನ ಬೇವು ಬೆಲ್ಲ ತಿಂದು ಮನೆಲಿ ಹ್ಯಾಪಿ ಬರ್ತ್ಡೆ ಅನ್ಸಿಕೊಂಡು ಅಭ್ಯಾಸ.

ಈ ನಾನು ಆ 92 ರ ಯುಗಾದಿಯ ಹಿಂದೆ ಇರಲಿಲ್ಲ. ಮುಂದೆ ಯಾವುದೋ ಒಂದು ದಿನದ ನಂತರ ಇರುವುದಿಲ್ಲ. ಈ ದೇಹ ಅದರ ಕೆಲಸ ಕಾರ್ಯ ಎಲ್ಲವೂ ಪ್ರಿ ಕೋಡೆಡ್. ಇದು ಹೆತ್ತವರುಗಳ ಎರವಲು ಹೆತ್ತವರು ಪೂರ್ವಜರ ಎರವಲು.ಹಾಗಾದ್ರೆ ನಾನು ಎಂಬ ಈ ಪುಟ್ಟ ಹೃದಯ ಬಡಿತಕ್ಕೆ ಅಸ್ಥಿತ್ವವೇ ಇಲ್ಲ.

ಜೀವನಕ್ಕೆ ಒಂದು ಅರ್ಥ ಉದ್ದೇಶ ಏನಾದ್ರು ಇದೆಯೇ? ನಿರ್ಧಿಷ್ಟ ಗೊತ್ತು ಗುರಿಗಳೇ ಬದುಕೆ? ಅಥವಾ ಅನಿರ್ಧಿಷ್ಟ  ಅನ್ವೇಷಣೆಯೆ? ತಾತ್ಕಾಲಿಕವಾಗಿ ಹಿರಿಯರು ನೆಡೆದ ದಾರಿ ಹಿಡಿಯುವುದು ಒಳಿತು.

ನಾಳೆ ಬೆಳಿಗ್ಗೆ ತಣ್ಣೀರು ಮಿಂದು ಹತ್ತಿರದ ದೇವಸ್ಠಾನಕ್ಕೆ ಹೋದ್ರಾಯ್ತು.

ನಾವು ಚಿಕ್ಕವರಿದ್ದಾಗ ನಾವೊಂದು ಖಾಲಿ ಕಪ್ಪು ಹಲಗೆ. ಏನೂ ಗೊತ್ತಿಲ್ಲ ಎಲ್ಲಾ ಹೊಸತು. ಎಲ್ಲ ಕಡೆ ಅಪಾಯ. ಆಗ ಅದೆಷ್ಟು ಜನ ನಮ್ಮನ್ನು ಕಾಪಾಡಿಲ್ಲ, ತಿದ್ದಿ ಬುದ್ದಿ ಹೇಳಿಲ್ಲ, ನಮಗೆ ಅದೆಲ್ಲ ನೆನಪಿನಲ್ಲಿ ಉಳಿದಿಲ್ಲ. ಅವರುಗಳಲ್ಲಿ ಹಲವರು ನಮ್ಮೊಂದಿಗಿಲ್ಲ. ಅಜ್ಜಿ ತಾತ, ಹಿರಿಯರುಗಳು, ಸಂಭಂದಿಕರು ಇವರೆಲ್ಲರಿಗೂ ಈ ನಾನು ಸದಾ ಋಣಿ. ಎಲ್ಲಾ ಅಗೋಚರ ಶಕ್ತಿಗಳಿಗೂ ಸದಾ ಕೃತಜ್ಞ.
ಇಂತಿ ಬರ್ಡೆ ಬಾಯ್.

1 comment:

  1. nimma barahagalige naanu ಕೃತಜ್ಞ

    ReplyDelete