Mar 25, 2016

'ಆನಂದ' every body wants..

ಒಂದು ಅಮೀಬದಿಂದ ಹಿಡಿದು ಮನುಷ್ಯನ ವರೆಗೆ ಸಕಲ ಜೀವಿಗಳೂ ಆನಂದವನ್ನೇ ಅರಸುತ್ತಿರುತ್ತವೆ. ದುಖಃ ಯಾರಿಗೂ ಬೇಡ. ಈ ಆನಂದ ಅಥವಾ ಸುಖ ಅಂದ್ರೆ ಏನು ನೋಡೊಣ.
ಇಷ್ಟವಾದ ತಿನಿಸು ತಿಂನ್ನುವಾಗ ಆಹಾ.. ಎಂದುಂಟಾಗುವ ಆನಂದ.. ತಂಬಾಕು ಸೇವಿಸುವಾಗ, ಮದ್ಯಪಾನ ಮಾಡುವಾಗ, ಡ್ರಗ್ ತೆಗೆದುಕೊಂಡಾಗ ಉಂಟಾಗುವ ಆನಂದ. ಲೈಂಗಿಕ ಕ್ರಿಯೆ ಅಥವಾ ಯೋಚನೆಯಿಂದಾಗುವ ಆನಂದ. ಕ್ರಿಕೆಟ್ ನೋಡುವಾಗ ಉಂಟಾಗುವ ಆನಂದ.
ಈ ಎಲ್ಲಾ ವಿಷಯಗಳಲ್ಲಿ ಒಂದು ಸಾಮ್ಯತೆ ಇದೆ ಏನದು?
ಅದೇ ಮನೋನಾಶ.
ಅಥವಾ ಮನಸ್ಸಿನ ಏಕಾಗ್ರತೆ.
ಅತ್ಯುತ್ತಮ ಆನಂದದ ಸ್ಥಿತಿಯಾದ ಸಮಾದಿಯಲ್ಲಿ ಹಾಗು ಸ್ವಲ್ಪ ಮಟ್ಟಿಗೆ ಆಳವಾದ ನಿದ್ದೆಯಲ್ಲಿ ಮನಸ್ಸಿನ ನಾಶ ಅಥವಾ ಮನಸ್ಸು ಯೋಚನಾರಹಿತವಾಗುತ್ತದೆ.
ಮೇಲೆ ಹೇಳಿದ ಉಳಿದಕೆಲಸಗಳಲ್ಲಿ ಮನಸ್ಸಿನ ಏಕಾಗ್ರತೆಯ (ಒಂದೇ ಯೊಚನೆಯ) ಆನಂದ ಉಂಟಾಗುತ್ತಗೆ. ಇದರಿಂದ ನಮಗೆ ಏನು ತಿಳಿಯಿತೆಂದರೆ  ಬೇಡದ ಯೋಚನೆಗಳನ್ನು ಬಿಡುವುದೇ ಆನಂದಕ್ಕೆ ಕೊಂಡುಯ್ಯುವ ಹಾದಿ.

ತೈತ್ತರೀಯ ಉಪನಿಷತ್ತಿನಲ್ಲಿ ಬರುವ ಆನಂದವಲ್ಲಿಯನ್ನು ಓದಿದ್ದಲ್ಲಿ ಅತಿಹೆಚ್ಚು ಆನಂದ ಯಾರಿಗೆ ಅಂದಲ್ಲಿ 'ಅಕಾಮ ಹತಸ್ಯ ಶ್ರೋತ್ರಿಯಸ್ಯಚ'
ಅಂದರೆ ಎಲ್ಲಾ ಕಾಮನೆಗಳನ್ನು ಬಿಡುತ್ತಾ. ಬ್ರಹ್ಮ ಜ್ಞಾನದ ದಾರಿಯನ್ನು ಹಿಡಿದವನಿಗೆ ಮಾತ್ರ ನಿಜವಾದ ಆನಂದ ಸಿಗುತ್ತದೆ ಎಂದು. ಇದನ್ನೇ ಬುದ್ದನೂ ಹೇಳಿದ್ದು ಆಸೆಯೇ ದುಖಃಕ್ಕೆ ಮೂಲ ಅಂತ ಇದರ ಕಾಂಟ್ರಾಪಾಸಿಟಿವ್ ಏನು ಆಸೆ ಬಿಡುವುದರಿಂದ ಆನಂದ ಇದೇ ಉಪನಿಷತ್ತಿನ ಅಭಿಪ್ರಾಯ.
1 ಮನುಷ್ಯಾನಂದ = (ದೃಡ, ಬಲಿಷ್ಠ, ಪೃತಿವಿಯೆಲ್ಲವನ್ನೂ ಹೊಂದಿದ ಯುವ ರಾಜಕುಮರ, ವೇದಾಧ್ಯಾಯ ಸಂಪನ್ನ ಇವನು ಅನುಭವಿಸಬಲ್ಲ ಆನಂದ)
 100 ಮನುಷ್ಯಾನಂದ = 1 ಮನುಷ್ಯ ಗಂಧರ್ವಾನಂದ
100 ಮನುಷ್ಯ ಗಂಧರ್ವಾನಂದ = 1 ದೇವ ಗಂಧರ್ವಾನಂದ
100 ದೇವಗಂದರ್ವಾನಂದ = 1 ಚಿರ ಲೋಕವುಳ್ಳ ಪಿತೃಗಳ ಆನಂದ
100 ಚಿರಲೋಕವುಳ್ಳ ಪಿತೃಗಳ ಆನಂದ = 1 ಆಜಾನಜದೇವತೆಗಳ ಆನಂದ
100 ಆಜಾನಜ ದೇವತೆಗಳ ಆನಂದ = 1 ಕರ್ಮ ದೇವತೆಗಳ ಆನಂದ
100 ಕರ್ಮ ದೇವತೆಗಳ ಆನಂದ = 1 ದೇವಾನಂದ
100 ದೇವಾನಂದ = 1 ಇಂದ್ರನ ಆನಂದ
100 ಇಂದ್ರಾನಂದ = 1 ಬೃಹಸ್ಪತಿಯಾನಂದ
100 ಬೃಹಸ್ಪತಿಯಾನಂದ =1 ಪ್ರಜಾಪತಿ ಆನಂದ
100 ಪ್ರಜಾಪತಿ ಆನಂದ = 1 ಬ್ರಹ್ಮಾನಂದ
ಹೆಚ್ಚು ಹೆಚ್ಚು ಆನಂದಕ್ಕೆ ಇರುವ  ಮೇಟ್ಟಿಲುಗಳೆ ಅಕಾಮ ಹತಸ್ಯ ಶ್ರೋತ್ರಿಯಸ್ಯ.. ಸಾಂಖ್ಯ ಯೋಗದ 'ಯೋಗಃ ಚಿತ್ತ ವೃತ್ತಿ ನಿರೋದಃ' ಅನ್ನುವುದು ಮತ್ತಿನ್ನೇನು ಮನಸ್ಸಿನ ವೃತ್ತಿಗಳನ್ನು ಸಂಪೂರ್ಣವಾಗಿ ಬಿಟ್ಟಾಗಲೇ ಯೋಗ ಅತ್ಥವಾ ಬ್ರಹ್ಮಾನಂದ ಉಂಟಾಗುತ್ತದೆ..

No comments:

Post a Comment