May 14, 2016

ಫಲಾಫಲ

ಇಂದಿಗೆ ಸಾವಿರಾರು ವರ್ಷಗಳಿಗೂ ಹಿಂದೆ ಇನ್ನೂ ಮುಂದೆ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ಚಾಚೂ ತಪ್ಪದೆ ಎದ್ದು ಸಂಜೆಗೆ ತನ್ನ ಡ್ಯೂಟಿ ಮುಗಿಸಿ ತೆರಳುವ ಆ ಸೂರ್ಯನಿಗೆ ನನ್ನ ಹೊಗಳಿಕೆ ತೆಗಳಿಕೆಯ ಅಂಜಿಕೆ ಇದೆಯೆ? ಬೆಂಕಿ ಬೆಚ್ಚಗಿದೆ ಎಂದು ಹೊಗಳಿದಾಗ ಭೀಗಲಿಲ್ಲ ಸುಟ್ಟಿತೆಂದು ಶಪಿಸಿದಾಗ ಬೇಸರಿಸಲಿಲ್ಲ. ಬೀಸುವಗಾಳಿ ಹರಿಯುವ ನೀರು ನನ್ನ ಪ್ರತಿಕ್ರಿಯೆ ಬಯಸಲಿಲ್ಲ. ಇವರೆಲ್ಲರ ಮುಂದೆ ನಾನೆಷ್ಟರವ? ನಾಮಾಡಿದ ಕಿಂಚಿತ್ ಕೆಲಸಕ್ಕೆ ಯಶಸ್ಸು ಬಯಸಬೇಕೆ? ಶೇಕಡ 99.99 ಭಾಗ ನಾನು ನಂದು ಎಂಬುದು ನಂದಲ್ಲ. ಬರೆಯುತ್ತಿರುವ ಈ ಭಾಷೆ ಕನ್ನಡ ಇಲ್ಲಿ ಬಳಸಿದ ಪದಗಳು ಅಲ್ಲಿ ಇಲ್ಲಿ ಕದ್ದವು. ನನ್ನ ದೇಹನಿರ್ಮಿಸಿದ ಆ ಜೀನೂ ನನ್ನ ಪೂರ್ವಜರಿಗೆ ಸೇರಿದ್ದು. ನೈಜ್ಯತೆ ಹೀಗಿರಲು ನಾನು ನಂದು ಎನ್ನುವುದು ಎಷ್ಟು ಮೊರ್ಖ ತನ. ತಾಯಿ ಋಣ ತಂದೆ ಋಣ ಗುರು ಹಿರಿಯರ ಋಣ ನೆಲದ ಋಣ ಜಲದ ಋಣ ಅನ್ನದ ಋಣ. ನಾನು ತೆವಳುತ್ತಾ ನಿಲ್ಲಲೊಸಗಿ ಬೀಳಲು ಅಂದು ಯಾರಾರೋ ಕೈ ಹಿಡಿದು ಮೇಲೆತ್ತಿ ನೆಡೆಸಲಿಲ್ಲವೆ. ಅವರೆಲ್ಲರ ತೀರಿಸಲಾರದ ಋಣ ಇದೆಲ್ಲದರ ನಡುವೆ ಸಾಲದ ಹೊರೆ ಹೊತ್ತಿರುವ ನಾನು ಬಡ್ಡಿಗೆ ಸಾಲ ಕೊಡಬಹುದೆ. ಕೆಲಸ ಮಾಡುವುದಷ್ಟೆ ನನ್ನ ಧರ್ಮ ಫಲಾಫಲ ನನ್ನ ಪರಿದಿಯ ಹೊರಗಿನ ಮಾತು.

No comments:

Post a Comment