Jun 11, 2016

ನಿರಾಪೇಕ್ಷಿತ ಕರ್ಮ

ಕರ್ಮ ಎಲ್ಲರೂ ಎಲ್ಲಾಸಮಯದಲ್ಲೂ ಮಾಡುತ್ತಲೇ ಇರಬೇಕು. ಒಂದು ಗಳಿಗೆಯೂ ಕರ್ಮ ಮಾಡದೆ ಬದುಕಿರಲು ಸಾಧ್ಯವಿಲ್ಲ. ಹೃದಯ ಬಡಿತ, ಜೀರ್ಣ ಕ್ರಿಯೆ, ಆಲೋಚನೆ ಇವೆಲ್ಲ ನಮಗೆ ಬೇಕೋ ಬೇಡವೋ ಎನ್ನದೇ ನಡೆಯುತ್ತಿರುತ್ತವೆ.  ಇವು ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ. ಮತ್ತೆ ನಾವು ಮಾಡುವ ಇತರ ಕಾರ್ಯಗಳು ಓದು, ಆಟ, ಮಾತು ಕತೆ,  ಆಫಿಸ್ ಕೆಲಸ ಇವು. ಇನ್ನು ನಮ್ಮ ಮನಸ್ಸಲ್ಲಿ ಗೂಡು ಕಟ್ಟಿರುವ ನಿರ್ಧಿಷ್ಟ ಗುರಿಯುಳ್ಳ ಕೆಲಸ ಕಾರ್ಯಗಳು.  ಅಂದರೆ ನಾಳೆಗಾಗಿ ಮಾಡುವ ಕೆಲಸ. ಈ ನಾಳಿನ ಗುರಿತಲುಪಲು ಇಂದಿನ ದಿನ ಕೊಲ್ಲುವುದು ಸರ್ವೇ ಸಾಮಾನ್ಯ. ಸಾಮಾಜಿಕ ಕಟ್ಟು ಕಟ್ಟಳೆಯಲ್ಲಿ ಹುಟ್ಟಿ ಬೆಳೆವ ನಾವು ಸಮಾಜಕ್ಕೆ ತಕ್ಕಂತೆ ಚಿಂತನ ಮಂಥನ ನಡೆಸುವುದು ಸ್ವಾಭಾವಿಕವಾಗಿ ಎಲ್ಲರಿಗೂ ಕಾಣುವ ಅಸ್ವಾಭಾವಿಕ. ನಮ್ಮ ಜೀವನಕ್ಕೆ ನಿರ್ಧಿಷ್ಟ ಗುರಿ ಇದೆ, ಆ ಗುರಿ ತಲುಪಬೇಕು, ಅದನ್ನು ಗಳಿಸ ಬೇಕು ಇದನ್ನು ಉಳಿಸ ಬೇಕು ಎಂದು ನಿದ್ದೆ ಗೆಡಿಸುವ ನಮ್ಮಗಳ ಆ ತುಮುಲ ಇಂದಿನ ಸ್ಟ್ರೆಸ್ ಸ್ಟೈನ್ ಆಗಿ ಪರಿಣಮಿಸಿ ರಕ್ತದ ಒತ್ತಡ, ಮದುಮೇಹಗಳಾಗಿ ವ್ಯಕ್ತ ಗೊಂಡಿವೆ. ಆದರೆ  ಕಾಸ್ಮಿಕ್ ಪರ್ಸ್ಪೆಕ್ಟಿವ್ ನಿಂದ ನೋಡಿದ್ದಲ್ಲಿ ಇದೊಂದು ತಮಾಷೆ. ಇವೆಲ್ಲ ಭಗವಂತನ ಲೀಲೆ ಪ್ಲೆ ಆಫ್ ಗಾಡ್. ನಾವು ಮಾಡಬೇಕಾದ್ದು ನಾವು ಆಗ ಬೇಕಾದ್ದು ಏನೂ ಇಲ್ಲ. ಲೆಟ್ ಅಸ್ ನಾಟ್ ಪ್ಲೆ ದಿ ಗೇಮ್ ಇನ್ ಲೈಫ್. ಯಾಕೆಂದರೆ ಗೇಮ್ ನಲ್ಲಿ ಒಬ್ಬ ಸೋಲಬೇಕು ಮತ್ತೊಬ್ಬ ಜಯಗೊಳ್ಳ ಬೇಕು. ಪ್ಲೇ ಅಂದರೆ ಹಾಗಲ್ಲ ಚಿಕ್ಕಮಕ್ಕಳು ಆಡುವುದಿಲ್ಲವೆ ಅದು. ಆಟಕ್ಕಾಗಿ ಆಟವೇ ಹೊರತು ಸೋಲು ಗೆಲುವಿಗಾಗಿ ಅಲ್ಲ. ಜೀವನವೂ ಅಸ್ಟೆ ಅತಿಯಾದ ಗಾಂಭೀರ್ಯತೆ ಬೇಡ.

No comments:

Post a Comment