Aug 9, 2016

ಅರ್ಥಪೂರ್ಣ ಜೀವನ

ಜೀವನ ಎರೆಡು ಅರ್ಥಗಳಿಗೆ ಮಾತ್ರ ಅರ್ಥಪೂರ್ಣ.
ಒಂದು ಇಂಧ್ರಿಯಗಳ ಸಂಪೂರ್ಣ ನಿಯಂತ್ರಣ. ಎರೆಡನೆಯದು ಇತರರಿಗಾಗಿ ನಡೆಸಿದ ನಿಸ್ವಾರ್ಥ ಜೀವನ. ಉಳಿದದ್ದೆಲ್ಲವೂ ಭ್ರಾಂತಿ ಮಾತ್ರವೆ. ಸುಖ ಎನ್ನುವುದು ಮರೀಚಿಕೆಯಂತೆ ಅದು ನಿಜವಾಗಿ ಅನುಭವಿಸಿ ಮುಗಿಯಿತು ಅನ್ನುವುದಿಲ್ಲ. ಅದನ್ನರಸಿ ಹೊರಟವನ ಕತೆ ಮರು ಭೂಮಿಯ ಮೇಲೆ ಮರೀಚಿಕೆಯನ್ನು ಅರಸಿ ಹೊರಟಂತೆ. ಹಾದಷ್ಟೂ ಹಾದಿ ಕಾಣುತ್ತ ಕಡೆಗೆ ಒಂದು ದಿನ ಇದ್ದಕ್ಕಿದ್ದಂತೆ ಜೀವನವೇ ಮುಗಿದಿರುತ್ತದೆ. ಇಂದು ಈ ಗಳಿಗೆಯನ್ನು ನಾಳಿನ ಚಿಂತೆಯಲ್ಲಿ ವ್ಯಯಿಸಿಯೋ ಅಥವಾ ಹಿಂದಿನ ಯೋಚನೆಯಲ್ಲಿ ಕಳೆಯುತ್ತಿದ್ದರದು ಜೀವನದ ಆ ದಿನವನ್ನು ಕೊಂದಂತೆ. ಸಕಲ ಆಸೆ ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಒಂದುಗಳಿಗೆಗಾದರೂ ನಿಯಂತ್ರಿಸದ ಹೊರತು ಮನಸ್ಸಿನ ಏಕಾಗ್ರತೆ ಕನಸಷ್ಟೆ. ವೇದಗಳಲ್ಲಿ ನೂರಾರು ಬಾರಿ ಹೇಳಿರುವ ಯಜ್ಞಕ್ಕಾಗಿ ಮಾಡುವ ತ್ಯಾಗ. ಮೊಹಮದೀಯರ ಜಿಹಾದ್ ಇದೆಲ್ಲದರ ಅರ್ಥ ನಿನಗೆ ಬೇಕಾಗಿರುವುದನ್ನು ತೊರೆಯುವುದು ಧಾನ ಧರ್ಮ ಮಾಡುವುದೆ ಆಗಿದೆ. ಪತಂಗವು ಬೆಂಕಿಗೆ ಬಲಿಯಾದಂತೆ ಕಣ್ಣಿಗೆ ಕಂಡದ್ದೆಲ್ಲಾ ಬೇಕು ಮನಸ್ಸಿಗೆ ಬಂದದ್ದೆಲ್ಲ ಹೊಂದಬೇಕೆಂದು ಹೊರಟವರ ಕತೆಯೂ ಇಷ್ಟೆ. ಏಕ ತತ್ವಾಭ್ಯಾಸ ತಂದೆತಾಯಿ ಗುರು ಹಿರಿಯರ ಬಗೆಗೆ ಕಾಳಜಿ ಮತ್ತು ಅವರ ಆರೈಕೆ ಧರ್ಮ ನಿಷ್ಠತೆ ಇವುಗಳೇ ನಮ್ಮನ್ನು ಎಲ್ಲಾಕಾಲಕ್ಕೊ ಎಂತಹ ಅಂಧಕಾರದಲ್ಲೂ ಸರಿದಾರಿಯಲ್ಲಿ ನಡೆಸುವ ದಾರಿ ಧೀವಿಗೆ. ನಮ್ಮ ಪ್ರತಿಯೊಂದು ಯೋಚನೆಯೂ ಅದರಿಂದ ಉಂಟಾಗುವ ಪ್ರತಿಯೊಂದು ಕರ್ಮವೂ ಅತಿ ಸೂಕ್ಷಮವಾದ ತನ್ನ ಛಾಪನ್ನು ಒತ್ತದೆ ಹೋಗದು. ಇವುಗಳು ನಮ್ಮ ಬೆನ್ನಿಗೆ ಹಿಡಿದ ಬೆಂತರನಂತೆ ಈ ಜನ್ಮ ಮುಂದೆ ಬರಬಹುದಾದ ಜನ್ಮಗಳಲ್ಲೂ ಡಿ.ಎನ್.ಎ ಸೂಕ್ಷ್ಮ ಶರೀರದ ರೂಪದಲ್ಲಿ ನಮ್ಮನ್ನು ಹಿಂಬಾಲಿಸುವವು.

No comments:

Post a Comment