Apr 16, 2014

ಇದು ನಮ್ಮ ಮನೆ

ಇದು ನಮ್ಮ ಮನೆ
ನಮ್ಮ ವಡ್ಡರ ಮನೆ
ನಾವು ಹುಟ್ಟಿದ ಮನೆ
ನಾವು ಆಡಿದ ಮನೆ
ಅಪ್ಪ ಅಮ್ಮನೊಡನೆ ಬಾಳಿದ ಮನೆ

ಅಲ್ಲಿಲ್ಲಿ ಗೆದ್ದಲು
ಕುಸಿದ ಗೋಡೆ
ಒಡಕಲು ಓಡು
ಮಳೆಗೆ ಸೋರುವ
ಗಾಳಿಗೆ ಹಾರುವ
ಹಂಚು ಪಕಾಸುಗಳು
ಆದರೂ ನಿಂತಿದೆ ಇನ್ನೂ
ತನ್ನ ಚರಿತ್ರೆಯೊಡನೆ
ಇದು ನಮ್ಮ ಮನೆ
ನಮ್ಮ ವಡ್ಡರ ಮನೆ

ಕೋಣೆ ಕೋಣೆಗು ಜನರು
ಅವರಿಗೆ ಅವರದೇ ಮಾತು
ಆದರೂ ನಾವೆಲ್ಲ ಒಂದೆ
ಕರುಳ ಬಳ್ಳಿಯ ಮುಂದೆ
ಇದು ನಮ್ಮ ಮನೆ
ನಮ್ಮ ನಿಮ್ಮ ಮನೆ

ನಮ್ಮ ಹುಟ್ಟಿಗೆ ಮುಂಚೆ ಇದ್ದ ಮನೆ
ಸಾವಿನ ಬಳಿಕ ಇರುವ ಮನೆ
ಎಲ್ಲದಕ್ಕೂ ಸಾಕ್ಷಿಯಾಗಿ
ಯುಗ ಯುಗಗಳನ್ನೇ ಕಳೆದ ಮನೆ
ನಾಯಿ ಬೆಕ್ಕುಗಳು ದನಕರುಗಳಿಗೆ
ಆಶ್ರಯವಾಗಿತ್ತು ಈ ಮನೆ
ಇದು ನಮ್ಮ ಮನೆ

ನಮ್ಮ ಪೂರ್ವಜರು ಪಾಲಿಸಿದ್ದರೊಂದು ಧರ್ಮ
ಅದರಂತೆ ಅವರ ಕರ್ಮ
ಹಾವು ನಾಗರನಾಗಿ
ಆನೆ ಗಣಪನಾಗಿ
ಹಂದಿ ವರಹನಾಗಿ
ಸಕಲ ಜೀವ ಜಂತುಗಳನ್ನೂ
ರಕ್ಷಿಸುತಿದ್ದ ನಮ್ಮ ಮನೆಯ ಧರ್ಮ
ಅದುವೇ ಸನಾತನ ಧರ್ಮ

ನಮ್ಮ ಮನೆಯದುವೇ ನಮ್ಮ ನಾಡು
ಭಾರತ
ನಮ್ಮ ನುಡಿಯದುವೇ ತಾಯಿ ಭಾಷೆ
ಕನ್ನಡ
ಅಮ್ಮ ಕಲಿಸಿದ ಭಾಷೆ
ಕನಸಲಿ ಕನವರಿಸಿದ ಭಾಷೆ
ಉಳಿಯಲಿ ಬೆಳೆಯಲಿ
ವಿಶ್ವ ಶಾಂತಿಯ ಸಾರಲಿ

No comments:

Post a Comment